ಎಸಿ ಸ್ಫೋಟದಿಂದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ದುರಂತ, ನಿದ್ದೆಯಲ್ಲಿದ್ದ 9 ಮಂದಿ ಸಜೀವ ದಹನ

Published : May 03, 2026, 11:10 AM IST

ಎಸಿ ಸ್ಫೋಟದಿಂದ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ದುರಂತ, ನಿದ್ದೆಯಲ್ಲಿದ್ದ 9 ಮಂದಿ ಸಜೀವ ದಹನ, ನಾಲ್ಕು ಮಹಡಿಗಳ ಕಟ್ಟಡ ಇದಾಗಿದೆ. ದಿಢೀರ್ ಕಾಣಿಸಿಕೊಂಡ ಬೆಂಕಿಯಲ್ಲಿ ಕೆಲವರು ಗಾಯಗೊಂಡಿದ್ದಾರೆ.

PREV
16
ಎಸಿ ಸ್ಪೋಟದಿಂದ ದುರಂತ?

ದೇಶದೆಲ್ಲೆಡೆ ಬೇಸಿಲ ಬೇಗೆ ಹೆಚುತ್ತಿದೆ. ರಾತ್ರಿ ಇಡೀ ಫ್ಯಾನ್, ಎಸಿ ಸ್ವಿಚ್ ಆನ್ ಆಗಿಯೋ ಇರುತ್ತೆ. ಇದೀಗ ಎಸಿ ಸ್ಫೋಟಗೊಂಡು ನಾಲ್ಕು ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ರಾಜಧಾನಿ ದೆಹಲಿಯ ವಿವೇಕ್ ವಿಹಾರ್ ಬಡಾವಣೆಯಲ್ಲಿ ಭಾನುವಾರ ಮುಂಜಾನೆ ನಡೆದ ಭೀಕರ ಅಗ್ನಿ ದುರಂತ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಮುಂಜಾನೆ ಸುಮಾರು 4 ಗಂಟೆಗೆ, ಎಲ್ಲರೂ ಗಾಢ ನಿದ್ದೆಯಲ್ಲಿದ್ದಾಗ ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.ದುರಂತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ.

26
9 ಮಂದಿ ಸಾವು, ಹಲವರಿಗೆ ಗಂಭೀರ ಗಾಯ

ಈ ಭೀಕರ ದುರಂತದಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಹಲವರನ್ನು ತಕ್ಷಣವೇ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಸ್ಥಳದಿಂದ ಎಲ್ಲಾ ಮೃತದೇಹಗಳನ್ನು ಹೊರತೆಗೆದು ತನಿಖೆ ಆರಂಭಿಸಿದ್ದಾರೆ.

36
14 ಅಗ್ನಿಶಾಮಕ ವಾಹನ, ಎರಡು ಗಂಟೆಗಳ ಹೋರಾಟ

ವಿಷಯ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ದಳದ 14 ವಾಹನಗಳು ಸ್ಥಳಕ್ಕೆ ಧಾವಿಸಿದವು. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಅದನ್ನು ನಂದಿಸಲು ಸುಮಾರು ಎರಡು ಗಂಟೆಗಳ ಕಾಲ ಸಿಬ್ಬಂದಿ ಹೋರಾಟ ನಡೆಸಬೇಕಾಯಿತು. ಈ ವೇಳೆ, ರಕ್ಷಣಾ ತಂಡಗಳು ಕಟ್ಟಡದಲ್ಲಿ ಸಿಲುಕಿದ್ದ ಜನರನ್ನು ಬಾಲ್ಕನಿ ಮತ್ತು ಕಿರಿದಾದ ದಾರಿಗಳ ಮೂಲಕ ಹೊರಗೆ ತರಲು ಹರಸಾಹಸಪಟ್ಟರು. ಹಗ್ಗಗಳ ಸಹಾಯದಿಂದ ಹಲವರನ್ನು ಕೆಳಗೆ ಇಳಿಸಲಾಯಿತು.ಜನರಿಗೆ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿಯೇ ಎಲ್ಲವೂ ಕೈಮೀರಿ ಹೋಗಿತ್ತು. ಎರಡನೇ ಮಹಡಿಯಲ್ಲಿ ಶುರುವಾದ ಬೆಂಕಿಯ ಕೆನ್ನಾಲಿಗೆ, ನೋಡನೋಡುತ್ತಿದ್ದಂತೆ ಮೂರು ಮತ್ತು ನಾಲ್ಕನೇ ಮಹಡಿಗೂ ವ್ಯಾಪಿಸಿದೆ.

46
ಎಸಿ ಸ್ಫೋಟವೇ ದುರಂತಕ್ಕೆ ಕಾರಣವಾಯ್ತಾ?

ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ, ಏರ್ ಕಂಡಿಷನರ್ (ಎಸಿ) ಸ್ಫೋಟಗೊಂಡಿದ್ದೇ ಈ ದುರಂತಕ್ಕೆ ಕಾರಣವಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ದೊಡ್ಡದೊಂದು ಸ್ಫೋಟದ ಸದ್ದು ಕೇಳಿದ ನಂತರವೇ ಬೆಂಕಿ ವೇಗವಾಗಿ ಹರಡಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸದ್ಯ, ವಿಧಿವಿಜ್ಞಾನ ಮತ್ತು ಅಗ್ನಿಶಾಮಕ ದಳದ ತಂಡಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ನಿಜವಾದ ಕಾರಣವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ.

56
ಇನ್ನೂ ಕೆಲವರು ನಾಪತ್ತೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ರಕ್ಷಣಾ ಕಾರ್ಯಾಚರಣೆ ವೇಳೆ ಹತ್ತಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಆದರೆ, ಇನ್ನೂ ಕೆಲವರು ಕಟ್ಟಡದೊಳಗೆ ಸಿಲುಕಿರುವ ಅಥವಾ ನಾಪತ್ತೆಯಾಗಿರುವ ಆತಂಕವಿದೆ. ಕಟ್ಟಡದ ಹಿಂಭಾಗದ ಫ್ಲ್ಯಾಟ್‌ಗಳಲ್ಲಿ ವಾಸವಿದ್ದ ಕೆಲವು ಕುಟುಂಬಗಳು ಸಮಯಕ್ಕೆ ಸರಿಯಾಗಿ ಹೊರಬರಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

66
ತನಿಖೆ ಚುರುಕು, ಹಲವು ಪ್ರಶ್ನೆಗಳು ಬಾಕಿ

ಪೊಲೀಸರು ಈ ಪ್ರಕರಣದ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ. ಇದು ಕೇವಲ ಒಂದು ಅಪಘಾತವೇ ಅಥವಾ ಯಾರದ್ದಾದರೂ ನಿರ್ಲಕ್ಷ್ಯದ ಫಲಿತಾಂಶವೇ ಎಂಬುದು ತನಿಖೆಯ ನಂತರವಷ್ಟೇ ಸ್ಪಷ್ಟವಾಗಲಿದೆ. ಸದ್ಯಕ್ಕೆ, ಈ ಘಟನೆಯು ನಗರ ಪ್ರದೇಶಗಳಲ್ಲಿನ ಕಟ್ಟಡಗಳ ಅಗ್ನಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories