ಭಾರತದಲ್ಲಿ ಅಗ್ಗದ ದರಕ್ಕೆ ಚಿನ್ನ ಖರೀದಿಸಬೇಕೇ? ಇಲ್ಲಿವೆ ನೋಡಿ ಟಾಪ್ 10 ಬಂಗಾರದ ಮಾರುಕಟ್ಟೆಗಳು!

Published : Jul 30, 2026, 07:47 PM IST

ಭಾರತದಲ್ಲಿ ಚಿನ್ನದ ಬೆಲೆ ಏರುತ್ತಿದ್ದರೂ, ಕೆಲವು ಪ್ರಮುಖ ಸಗಟು ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಬಹುದು. ದೇಶದ ಈ 10 ನಗರಗಳಲ್ಲಿ ಬಂಗಾರದ ಮೇಕಿಂಗ್ ಮತ್ತು ವೇಸ್ಟೇಜ್ ಚಾರ್ಜ್ ಕಡಿಮೆ ಇರುವುದರಿಂದ ಗ್ರಾಹಕರಿಗೆ ಹಣ ಉಳಿತಾಯವಾಗುತ್ತದೆ.

PREV
18

ಚಿನ್ನ (Gold) ಭಾರತೀಯರ ಪಾಲಿಗೆ ಕೇವಲ ಆಭರಣವಲ್ಲ, ಅದು ಹೂಡಿಕೆ (Investment) ಮತ್ತು ಸಂಪ್ರದಾಯದ ಸಂಕೇತವೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ನಿರಂತರ ಏರಿಕೆಯಾಗುತ್ತಿರುವುದರಿಂದ ಕಡಿಮೆ ವೆಚ್ಚದಲ್ಲಿ ಚಿನ್ನ ಖರೀದಿಸುವುದು ಸವಾಲಾಗಿದೆ.

ಆದರೆ ಭಾರತದಲ್ಲಿ ಕೆಲವು ಪ್ರಮುಖ ನಗರಗಳ ಸಗಟು ಚಿನ್ನದ ಮಾರುಕಟ್ಟೆಗಳಲ್ಲಿ (Wholesale Gold Market) ಇತರ ನಗರಗಳಿಗಿಂತ ಕಡಿಮೆ ವೆಚ್ಚದಲ್ಲಿ ಚಿನ್ನದ ಆಭರಣಗಳನ್ನು ಖರೀದಿಸುವ ಅವಕಾಶವಿದೆ. ಇದಕ್ಕೆ ಮುಖ್ಯ ಕಾರಣ ಮೇಕಿಂಗ್ ಚಾರ್ಜ್ (Making Charges) ಮತ್ತು ವೇಸ್ಟೇಜ್ (Wastage Charges) ಕಡಿಮೆ ಇರುವುದಾಗಿದೆ.

28

ಇಲ್ಲಿ ಭಾರತದ ಅಗ್ಗದ ಚಿನ್ನದ ಖರೀದಿಗೆ ಪ್ರಸಿದ್ಧವಾದ ಟಾಪ್ 10 ಗೋಲ್ಡ್ ಮಾರುಕಟ್ಟೆಗಳ (Top 10 Gold Markets) ವಿವರ ಇಲ್ಲಿದೆ.

1. ಜಾವೇರಿ ಬಜಾರ್ (Zaveri Bazaar), ಮುಂಬೈ

ಭಾರತದ ಅತಿ ದೊಡ್ಡ ಚಿನ್ನದ ಸಗಟು ಮಾರುಕಟ್ಟೆ. ಮದುವೆ ಆಭರಣಗಳು, ಹಗುರ ವಿನ್ಯಾಸದ ಜ್ಯುವೆಲ್ಲರಿ ಹಾಗೂ ಗೋಲ್ಡ್ ಬಾರ್ (Gold Bars) ಖರೀದಿಗೆ ಅತ್ಯಂತ ಜನಪ್ರಿಯ ಸ್ಥಳ.

2. ಕುಚಾ ಮಹಾಜನಿ (Kucha Mahajani), ದೆಹಲಿ

ಚಾಂದಿನಿ ಚೌಕ್ (Chandni Chowk) ಪ್ರದೇಶದಲ್ಲಿರುವ ಉತ್ತರ ಭಾರತದ ಪ್ರಮುಖ ಚಿನ್ನದ ಮಾರುಕಟ್ಟೆ. ಕುಂದನ್ (Kundan) ಹಾಗೂ ಮದುವೆ ಆಭರಣಗಳಿಗೆ ಹೆಸರುವಾಸಿ.

38

3. ಬೌಬಜಾರ್ (Bowbazar), ಕೊಲ್ಕತ್ತಾ

ಸೂಕ್ಷ್ಮ ಫಿಲಿಗ್ರಿ (Filigree) ವಿನ್ಯಾಸದ ಆಭರಣಗಳಿಗೆ ಪ್ರಸಿದ್ಧ. ಸಂಪ್ರದಾಯಬದ್ಧ ಬಂಗಾಳಿ ಶೈಲಿಯ ಆಭರಣಗಳು ಇಲ್ಲಿ ಹೆಚ್ಚು ಲಭ್ಯ.

4. ಬಡಾಬಜಾರ್ (Burrabazar), ಕೊಲ್ಕತ್ತಾ

ಸಗಟು ವ್ಯಾಪಾರಕ್ಕೆ ಹೆಸರಾದ ಈ ಪ್ರದೇಶದಲ್ಲಿ ಅನೇಕ ಜ್ಯುವೆಲ್ಲರಿ ವ್ಯಾಪಾರಿಗಳು ಕಡಿಮೆ ದರದಲ್ಲಿ ಚಿನ್ನ ಮಾರಾಟ ಮಾಡುತ್ತಾರೆ.

48

5. ಜೋಹರಿ ಬಜಾರ್ (Johari Bazaar), ಜೈಪುರ

ಕುಂದನ್ (Kundan) ಹಾಗೂ ಮೀನಾಕಾರಿ (Meenakari) ಕಲಾಕೃತಿಯ ಚಿನ್ನದ ಆಭರಣಗಳಿಗೆ ದೇಶಾದ್ಯಂತ ಪ್ರಸಿದ್ಧ.

6. ಜಾರ್ಜ್ ಟೌನ್ (George Town), ಚೆನ್ನೈ

ದೇವಾಲಯ ಶೈಲಿಯ (Temple Jewellery) ಹಾಗೂ ಪುರಾತನ ವಿನ್ಯಾಸದ ಚಿನ್ನದ ಆಭರಣಗಳನ್ನು ಖರೀದಿಸಲು ಅತ್ಯುತ್ತಮ ಸ್ಥಳ.

58

7. ಬೇಗಂ ಬಜಾರ್ (Begum Bazaar), ಹೈದರಾಬಾದ್

ಕಡಿಮೆ ಮೇಕಿಂಗ್ ಚಾರ್ಜ್‌ನಲ್ಲಿ ಉತ್ತಮ ಗುಣಮಟ್ಟದ ಚಿನ್ನದ ಆಭರಣಗಳು ದೊರೆಯುವ ಪ್ರಮುಖ ಮಾರುಕಟ್ಟೆ.

8. ಪಾಟ್ ಮಾರ್ಕೆಟ್ (Pot Market), ಹೈದರಾಬಾದ್

ಸಗಟು ಚಿನ್ನದ ವ್ಯಾಪಾರಕ್ಕೆ ಪ್ರಸಿದ್ಧವಾಗಿರುವ ಮತ್ತೊಂದು ಪ್ರಮುಖ ಗೋಲ್ಡ್ ಮಾರುಕಟ್ಟೆ.

68

9. ಕೋಯಮತ್ತೂರು (Coimbatore) ಮತ್ತು ತ್ರಿಶೂರ್ (Thrissur)

ಕೇರಳದ ತ್ರಿಶೂರ್ ದಕ್ಷಿಣ ಭಾರತದ ಪ್ರಮುಖ ಜ್ಯುವೆಲ್ಲರಿ ಉತ್ಪಾದನಾ ಕೇಂದ್ರವಾಗಿದೆ. ಕೊತೆಗೆ ಕೋಯಮತ್ತೂರು ಮೆಷಿನ್-ಮೇಡ್ (Machine-made) ಚಿನ್ನದ ಸರಗಳು ಹಾಗೂ ಹಗುರ ತೂಕದ ಆಭರಣಗಳ ಉತ್ಪಾದನಾ ಕೇಂದ್ರವಾಗಿದೆ. ಹೀಗಾಗಿ ಕಡಿಮೆ ಬೆಲೆಗೆ ಬಂಗಾರ ಸಿಗುತ್ತದೆ.

10. ಮಾನೇಕ್ ಚೌಕ್ (Manek Chowk), ಅಹಮದಾಬಾದ್

ಅಹಮದಾಬಾದ್‌ನ ಮಾನೇಕ್ ಚೌಕ್‌ನಲ್ಲಿ ಗೋಲ್ಡ್ ಬಾರ್ (Gold Bars), ಗೋಲ್ಡ್ ಕಾಯಿನ್ (Gold Coins) ಹಾಗೂ ಹಾಲ್‌ಮಾರ್ಕ್ (Hallmark) ಚಿನ್ನ ಸಗಟು ದರದಲ್ಲಿ ಲಭ್ಯ.

78

ಬೆಂಗಳೂರಿನಲ್ಲಿಯೂ ಕಡಿಮೆ ಬೆಲೆಗೆ ಲಭ್ಯ:

ಇದರ ಜೊತೆಗೆ ಬೆಂಗಳೂರು ಮತ್ತು ಮುಂಬೈನಲ್ಲಿ ನಡೆಯುವ IBJA (Indian Bullion and Jewellers Association) ಪ್ರತಿದಿನದ ಚಿನ್ನದ ದರವನ್ನು ಪ್ರಕಟಿಸುತ್ತದೆ. ದೇಶದ ಬಹುತೇಕ ಜ್ಯುವೆಲ್ಲರಿ ಅಂಗಡಿಗಳು ಇದೇ ದರವನ್ನು ಆಧರಿಸಿ ತಮ್ಮ ಮಾರಾಟದ ಬೆಲೆಯನ್ನು ನಿಗದಿಪಡಿಸುತ್ತವೆ.

88

ಏಕೆ ಇಲ್ಲಿ ಚಿನ್ನ ಕಡಿಮೆ ದರದಲ್ಲಿ ಸಿಗುತ್ತದೆ?

ದೇಶಾದ್ಯಂತ ಚಿನ್ನದ ಮೂಲ ಬೆಲೆ (Bullion Rate) ಬಹುತೇಕ ಒಂದೇ ಆಗಿರುತ್ತದೆ. ಆದರೆ ಸಗಟು ಮಾರುಕಟ್ಟೆಗಳಲ್ಲಿ ಮೇಕಿಂಗ್ ಚಾರ್ಜ್ (Making Charges) ಹಾಗೂ ವೇಸ್ಟೇಜ್ (Wastage) ಶುಲ್ಕವು ಸಾಮಾನ್ಯ ಜ್ಯುವೆಲ್ಲರಿ ಶೋರೂಮ್‌ಗಳಿಗೆ ಹೋಲಿಸಿದರೆ 30% ರಿಂದ 50% ವರೆಗೆ ಕಡಿಮೆಯಿರುತ್ತದೆ. ಇದರಿಂದ ಗ್ರಾಹಕರು ಉತ್ತಮ ಉಳಿತಾಯ ಮಾಡಬಹುದು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories