ಪ್ರಧಾನಿ ಮೋದಿ ಪೋಸ್ಟ್ ಬ್ಲಾಕ್ ಮಾಡಿತಾ ಫೇಸ್‌ಬುಕ್? ಬಿಜೆಪಿ ನಾಯಕನಿಂದ ಗಂಭೀರ ಆರೋಪ

Published : Jul 28, 2026, 09:51 AM IST

ನೀಟ್ ಪರೀಕ್ಷೆ ಕುರಿತು ಪ್ರಧಾನಿ ನರೇಂದ್ರ ಮೋದಿಯವರ ಫೇಸ್‌ಬುಕ್ ಪೋಸ್ಟ್‌ನ್ನು ಮೆಟಾ ಭಾರತದಲ್ಲಿ ನಿರ್ಬಂಧಿಸಿದೆ ಎಂದು ಬಿಜೆಪಿ ನಾಯಕ ತಜಿಂದರ್ ಸಿಂಗ್ ಬಗ್ಗಾ ಆರೋಪಿಸಿದ್ದಾರೆ. ವಿದೇಶಿ ವೇದಿಕೆಗೆ ಭಾರತದ ಪ್ರಧಾನಿಯನ್ನು ಸೆನ್ಸಾರ್ ಮಾಡುವ ಹಕ್ಕನ್ನು ಯಾರು ಕೊಟ್ಟರು ಎಂದು ಅವರು ಪ್ರಶ್ನಿಸಿದ್ದಾರೆ.

PREV
15
ಮೋದಿ ಫೇಸ್‌ಬುಕ್ ಪೋಸ್ಟ್

ಫೇಸ್‌ಬುಕ್ ನರೇಂದ್ರ ಮೋದಿ ಅವರ ಪೋಸ್ಟ್‌ನ್ನು ಫೇಸ್‌ಬುಕ್ (ಮೆಟಾ) ಬ್ಲಾಕ್ ಮಾಡಿದೆ ಎಂದು ಬಿಜೆಪಿ ನಾಯಕ ತಜಿಂದರ್ ಸಿಂಗ್ ಬಗ್ಗಾ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ತಜಿಂದರ್ ಸಿಂಗ್ ಬಗ್ಗಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

25
ಪೋಸ್ಟ್‌ ಮೇಲಿನ ನಿರ್ಬಂಧ ತೆರವು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರು ಪೋಸ್ಟ್ ಮಾಡಿಕೊಂಡಿದ್ದರು. ಆದರೆ ಈ ಪೋಸ್ಟ್‌ನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ಕೆಲ ವರದಿಗಳ ಪ್ರಕಾರ, ಈ ಪೋಸ್ಟ್‌ ಮೇಲಿನ ನಿರ್ಬಂಧ ತೆರವು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

35
ತಜಿಂದರ್ ಸಿಂಗ್ ಬಗ್ಗಾ ಆರೋಪ ಏನು?

ಫೇಸ್‌ಬುಕ್ ತನ್ನೆಲ್ಲಾ ಮಿತಿಗಳನ್ನು ಮೀರಿದೆ. ಪ್ರಧಾನಿ ನರೇಂದ್ರ ಮೋದಿಯವರ ಪೋಸ್ಟ್ ನ್ನು ಭಾರತದಲ್ಲಿ ನೋಡದಂತೆ ಮೆಟಾ ನಿರ್ಬಂಧಿಸಿದೆ. ಯಾರ ಆದೇಶದ ಮೇರೆಗೆ ಭಾರತದ ಪ್ರಧಾನ ಮಂತ್ರಿಗಳ ಪೋಸ್ಟ್‌ ನಿರ್ಬಂಧಿಸಿದೆ ಎಂದು ಪ್ರಶ್ನೆ ಮಾಡಿದ್ದಾರೆ. ವಿದೇಶಿ ಸಾಮಾಜಿಕ ಮಾಧ್ಯಮ ವೇದಿಕೆಯೊಂದು ಭಾರತೀಯರು ಏನು ಓದಬೇಕು ಮತ್ತು ಏನು ಓದಬಾರದು ಎಂಬುದನ್ನು ನಿರ್ಧರಿಸಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ.

45
ವಿದೇಶಿ ವೇದಿಕೆಗೆ ಹಕ್ಕುಗಳನ್ನು ನೀಡಿದವರು ಯಾರು?

ಭಾರತದ ಪ್ರಧಾನ ಮಂತ್ರಿಯನ್ನು ಸೆನ್ಸಾರ್ ಮಾಡುವ ಮತ್ತು ಭಾರತೀಯರು ಏನು ಓದಬಹುದು ಎಂಬುದನ್ನು ನಿರ್ಧರಿಸುವ ಹಕ್ಕನ್ನು ಈ ವಿದೇಶಿ ವೇದಿಕೆಗೆ ಯಾರು ಕೊಟ್ಟರು? ಎಂದು ತಜಿಂದರ್ ಬಗ್ಗಾ ಪೋಸ್ಟ್‌ನಲ್ಲಿ ಕೇಳಿದ್ದಾರೆ. ತಜಿಂದರ್ ಬಗ್ಗಾ ಅವರ ಈ ಟ್ವೀಟ್ 4 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ. ಹಾಗೆಯೇ ಫೇಸ್‌ಬುಕ್ ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಬ್ಲಾಕ್ ಮಾಡಲಾಗಿದೆ ಎಂಬ ಸ್ಕ್ರೀನ್ ಶಾಕ್ ಹಾಗೂ ಲಿಂಕ್‌ನ್ನು ಹಂಚಿಕೊಂಡಿದ್ದಾರೆ.

55
ಸ್ಪಷ್ಟನೆ ನೀಡದ ಫೇಸ್‌ಬುಕ್

ಸದ್ಯ ವಿಡಿಯೋ ಮೇಲಿನ ತಾತ್ಕಾಲಿಕ ನಿರ್ಬಂಧ ತೆಗೆದು ಹಾಕಲಾಗಿದೆ. ಯಾಕೆ ನಿರ್ಬಂಧ ಹಾಕಲಾಗಿತ್ತು ಎಂಬುದರ ಬಗ್ಗೆ ಫೇಸ್‌ಬುಕ್‌ನಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಜೆನ್‌-ಜಿ ಸಮುದಾಯವನ್ನು ಉದ್ದೇಶಿಸಿ ನರೇಂದ್ರ ಮೋದಿಯವರು ಈ ಪೋಸ್ಟ್‌ನಲ್ಲಿ ಮಾತನಾಡಿದ್ದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories