ನೀಟ್ ಪ್ರತಿಭಟನೆ ವೇಳೆ ಪೊಲೀಸ್ ವ್ಯಾನ್ ಅಡ್ಡಗಟ್ಟಿ ನಿಲ್ಲಿಸಿದ್ದ 'ಮಾಡೆಲ್‌ ರಿಯಾ'ಗೆ ಎದುರಾಯ್ತು ಸಂಕಷ್ಟ!

Published : Jul 28, 2026, 11:10 AM IST

ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ಪೊಲೀಸ್ ವ್ಯಾನ್‌ಗೆ ಅಡ್ಡ ನಿಂತು ಸುದ್ದಿಯಾಗಿದ್ದ ಮಾಡೆಲ್ ರಿಯಾ ಅಹೀರ್ ಅವರಿಗೆ ಕಿರುಕುಳ ಎದುರಾಗಿದೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಮಾಡೆಲ್ ಇದೀಗ ಅದೇ ಪೊಲೀಸ್ ಠಾಣೆ ಮೆಟ್ಟಿಲೇರಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

PREV
15

ನೀಟ್‌ (NEET) ಪರೀಕ್ಷೆ ಅಕ್ರಮ ಹಾಗೂ ಪೇಪರ್ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ, ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪೊಲೀಸ್‌ ವ್ಯಾನ್‌ಗೆ ಏಕಾಂಗಿಯಾಗಿ ಅಡ್ಡ ನಿಂತು ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಪ್ರಸಿದ್ಧ ರೂಪದರ್ಶಿ (Model) ರಿಯಾ ಅಹೀರ್ (Riya Ahir) ಅವರಿಗೆ ಈಗ ಆನ್‌ಲೈನ್‌ನಲ್ಲಿ ಭಾರಿ ಕಿರುಕುಳ ಎದುರಾಗಿದೆ.

25

ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸಂಘಟಿತವಾಗಿ ಅಪಪ್ರಚಾರ ನಡೆಸಿ, ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಮುಂಬೈನ ಸೈಬರ್‌ ಪೊಲೀಸ್ ಠಾಣೆ (Cyber Police Station) ಮೆಟ್ಟಿಲೇರಿದ್ದಾರೆ.

35

ದೂರಿನಲ್ಲಿ ಆಘಾತಕಾರಿ ಅಂಶ ಉಲ್ಲೇಖ:

ಸೈಬರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ರಿಯಾ ಅಹೀರ್ ಅತ್ಯಂತ ಗಂಭೀರ ಆರೋಪಗಳನ್ನು ಮಾಡಿದ್ದಾರೆ. 'ಸಾಮಾಜಿಕ ಜಾಲತಾಣಗಳಲ್ಲಿ (Social Media) ನನ್ನ ವಿರುದ್ಧ ಕೆಲ ಕಿಡಿಗೇಡಿಗಳು ಅಸಭ್ಯ ಮತ್ತು ಅತ್ಯಂತ ನಿಕೃಷ್ಟ ಭಾಷೆಯನ್ನು ಬಳಸುತ್ತಿದ್ದಾರೆ. ಅಷ್ಟೇ ಅಲ್ಲದೇ, ನನ್ನ ಮಾನಹಾನಿ ಮಾಡುವ ಉದ್ದೇಶದಿಂದ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನ ಬಳಸಿ ಡೀಪ್‌ಫೇಕ್ (Deepfake Video) ವಿಡಿಯೋಗಳನ್ನು ಸೃಷ್ಟಿಸಲಾಗಿದೆ. ನನ್ನ ಫೋಟೋಗಳನ್ನು ಅಸಭ್ಯವಾಗಿ ತಿರುಚಿ (Morphed Images) ವೈರಲ್ ಮಾಡಲಾಗುತ್ತಿದ್ದು, ಕ್ರಿಮಿನಲ್ ಬೆದರಿಕೆಗಳನ್ನು ಒಡ್ಡಲಾಗುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

45

ಮಳೆಯಲ್ಲಿ ಏಕಾಂಗಿಯಾಗಿ ವ್ಯಾನ್ ತಡೆದಿದ್ದ ರಿಯಾ:

ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ (Shivaji Park, Dadar) ನೀಟ್‌ ಪೇಪರ್‌ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವ್ಯಾನ್‌ನಲ್ಲಿ ಕರೆದೊಯ್ಯುತ್ತಿದ್ದರು. ಆ ಸಮಯದಲ್ಲಿ ಬೂದು ಬಣ್ಣದ ಹೂಡಿ (Grey Hoodie) ಧರಿಸಿದ್ದ ರಿಯಾ ಅಹೀರ್‌, ಸುರಿಯುವ ಮಳೆಯಲ್ಲೇ ಏಕಾಂಗಿಯಾಗಿ ಓಡಿಬಂದು ಪೊಲೀಸ್‌ ವ್ಯಾನ್‌ಗೆ ಅಡ್ಡವಾಗಿ ನಿಂತಿದ್ದರು. ಈ ಧೈರ್ಯದ ನಡೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು ಮತ್ತು ಅವರ ಫೋಟೋ-ವಿಡಿಯೋಗಳು ವೈರಲ್ (Viral Photo) ಆಗಿದ್ದವು.

55

ಸಂಘಟಿತ ಸೈಬರ್ ದಾಳಿ (Organized Campaign):

ಆದರೆ, ಈ ಘಟನೆಯ ಬೆನ್ನಲ್ಲೇ ತಮ್ಮ ವಿರುದ್ಧವೇ ಒಂದು ವಿಭಾಗದ ನೆಟ್ಟಿಗರು ಸಂಘಟಿತ ಸೈಬರ್ ದಾಳಿ ನಡೆಸುತ್ತಿದ್ದಾರೆ ಎಂದು ರಿಯಾ ಹೇಳಿದ್ದಾರೆ. ದೂರಿಗೆ ಸಾಕ್ಷಿಯಾಗಿ ಸ್ಕ್ರೀನ್‌ಶಾಟ್‌ಗಳು (Screenshots) ಸೇರಿದಂತೆ ಹಲವು ಡಿಜಿಟಲ್ ಪುರಾವೆಗಳನ್ನು (Digital Evidence) ಸೈಬರ್ ಪೊಲೀಸರಿಗೆ ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಸೈಬರ್ ಪೊಲೀಸರು ತನಿಖೆ ಆರಂಭಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories