ನಕಲಿ ಚಿನ್ನ ಅಡವಿಡಲು ಬಂದ, ಸಿಬ್ಬಂದಿ ಪ್ರಶ್ನಿಸುತ್ತಿದ್ದಂತೆ ಓಟಕ್ಕಿತ್ತ ಖದೀಮ! ಈಗ ಆತ ಪೊಲೀಸರ ಅತಿಥಿ

Published : Apr 23, 2026, 01:31 PM IST

ಕೋಯಿಕ್ಕೋಡ್‌: ಒಂದು ಕಡೆ ಮದುವೆ ಸಮಾರಂಭ. ಇನ್ನೊಂದು ಕಡೆ ಇರಾನ್-ಇಸ್ರೇಲ್ ಯುದ್ದದ ಕಾವು. ಇದೆಲ್ಲದರ ನಡುವೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಹೀಗಿರುವಾಗಲೇ ನಕಲಿ ಚಿನ್ನ ಅಡವಿಡಲು ಬಂದ ಆಸಾಮಿಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

PREV
15
ನಕಲಿ ಚಿನ್ನ ಅಡವಿಡಲು ಬಂದು ಸಿಕ್ಕಿಬಿದ್ದ ಶಂಸು

ಕೇರಳದ ಕೋಯಿಕ್ಕೋಡ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು ಹಣ ಲಪಟಾಯಿಸಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಯಿಕ್ಕೋಡ್‌ನ ಕಲ್ಲಾಯಿ ಎಂಬಲ್ಲಿ ಈ ಘಟನೆ ನಡೆದಿದ್ದು ಕುನ್ನಮಂಗಲಂನ ಕಾರಂತೂರ್ ನಿವಾಸಿ ಶಂಸು ರಹಮಾನ್ (49) ಬಂಧಿತ ಆರೋಪಿ.

25
ಚಿನ್ನ ಪರೀಕ್ಷಿಸುವ ವೇಳೆಯಲ್ಲಿ ಗಾಬರಿಗೊಂಡ ಖದೀಮ

ಈತ ಕಲ್ಲಾಯಿಯಲ್ಲಿರುವ 'ಮಿನಿ ಮುತ್ತೂಟ್ ನಿಧಿ' ಅನ್ನೋ ಹಣಕಾಸು ಸಂಸ್ಥೆಗೆ ನಕಲಿ ಚಿನ್ನ ಅಡವಿಡಲು ಬಂದಿದ್ದ. ಆಭರಣ ನೋಡಿದ ಸಿಬ್ಬಂದಿಗೆ ಇದು ಅಸಲಿ ಚಿನ್ನ ಹೌದಾ, ಅಲ್ವಾ ಅಂತ ಡೌಟ್ ಬಂದಿದೆ.

35
ಖದೀಮನನ್ನು ಹಿಡಿದ ಸ್ಥಳೀಯರು

ತಕ್ಷಣ ಅವರು ಚಿನ್ನದ ಗುಣಮಟ್ಟ ಪರೀಕ್ಷೆ ಮಾಡಲು ಶುರುಮಾಡಿದ್ದಾರೆ. ಇದರಿಂದ ಗಾಬರಿಯಾದ ಶಂಸು ರಹಮಾನ್, ಸಿಬ್ಬಂದಿ ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

45
ಎರಡು ಬಾರಿ ಇದೇ ಸಂಸ್ಥೆಯಲ್ಲಿ ಚಿನ್ನ ಅಡವಿಟ್ಟಿದ್ದ ಆಸಾಮಿ

ಅಷ್ಟೇ ಅಲ್ಲ, ಈ ಹಿಂದೆ ಇದೇ ಸಂಸ್ಥೆಯಲ್ಲಿ ಶಂಸು ಎರಡು ಬಾರಿ ಚಿನ್ನ ಅಡವಿಟ್ಟಿದ್ದ. ಒಮ್ಮೆ ₹89,500 ಮತ್ತು ಇನ್ನೊಮ್ಮೆ ₹1,66,000 ಹಣ ಪಡೆದಿದ್ದ ಅನ್ನೋ ಮಾಹಿತಿ ಸಿಕ್ಕಿದೆ.

55
ಶಂಸು ರಹಮಾನ್‌ ಅರೆಸ್ಟ್

ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪನ್ನಿಯಂಕರ ಪೊಲೀಸ್ ಠಾಣೆಯ ಎಸ್‌ಐ ಅಮಲ್ ಜೋಸ್, ಎಎಸ್‌ಐ ಬಾಬು ಮತ್ತು ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಶ್ರೀನಾಥ್ ಅವರು ಶಂಸು ರಹಮಾನ್‌ನನ್ನು ವಶಕ್ಕೆ ಪಡೆದರು. ನಂತರ ಠಾಣೆಗೆ ಕರೆದೊಯ್ದು ಆತನ ಮೇಲೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories