ಲೆನ್ಸ್‌ಕಾರ್ಟ್ ಕಂಪನಿಯು ಉದ್ಯೋಗಿಗಳಿಗೆ ಡ್ರೆಸ್ ಕೋಡ್ ಜಾರಿಗೊಳಿಸಿದ್ದು, ಹಿಂದೂಗಳ ಬಿಂದಿ, ಸಿಂಧೂರಕ್ಕೆ ನಿರ್ಬಂಧ ಹೇರಿ ಹಿಜಾಬ್‌ಗೆ ಅವಕಾಶ ನೀಡಿದೆ. ಸುಪ್ರೀಂಕೋರ್ಟ್ ವಕೀಲೆ, BJP Leader ನಾಜಿಯಾ ಖಾನ್ ಮಳಿಗೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾಸಿಕ್‌ನಲ್ಲಿರುವ ಟಿಸಿಎಸ್ ಕಂಪೆನಿಯ ಕಾರ್ಪೋರೆಟ್ ಜಿಹಾದ್ ಪ್ರಕರಣ ಇಡೀ ಹಿಂದೂ ಸಮುದಾಯವನ್ನು ಬೆಚ್ಚಿಬೀಳಿಸಿರುವ ಹೊತ್ತಿನಲ್ಲಿಯೇ ಬೆಳಕಿಗೆ ಬಂದದ್ದು, ದೇಶದ ಪ್ರಮುಖ ಐವೇರ್ ಕಂಪನಿ 'ಲೆನ್ಸ್‌ಕಾರ್ಟ್' (Lenskart). ಇಲ್ಲಿ ತನ್ನ ಉದ್ಯೋಗಿಗಳಿಗೆ ವಿಧಿಸಿರುವ ಹೊಸ ಡ್ರೆಸ್ ಕೋಡ್ ನಿಯಮಾವಳಿಗಳು ಈಗ ವಿವಾದದ ಕೇಂದ್ರಬಿಂದುವಾಗಿವೆ. ಹಿಂದೂ ಧರ್ಮದ ಸಾಂಪ್ರದಾಯಿಕ ಗುರುತುಗಳಾದ ಬಿಂದಿ, ಸಿಂಧೂರ ಮತ್ತು ಕೈಗೆ ಕಟ್ಟುವ ದಾರ ಧರಿಸುವುದರ ಮೇಲೆ ನಿರ್ಬಂಧ ಹೇರಿರುವ ಕಂಪೆನಿ, ಹಿಜಾಬ್ ಧರಿಸಲು ಅವಕಾಶ ನೀಡಿದೆ.
26
ಡ್ರೆಸ್ಕೋರ್ಡ್ನಲ್ಲಿ ಹಿಜಾಬ್‌ಗೆ ಮಾತ್ರ ಜಾಗ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಲೆನ್ಸ್‌ಕಾರ್ಟ್‌ನ ಅಧಿಕೃತ ಮಾರ್ಗಸೂಚಿಗಳ ಪ್ರಕಾರ, ಮಹಿಳಾ ಮತ್ತು ಪುರುಷ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಜಾರಿಗೊಳಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದಿರುವ ಅಂಶಗಳೆಂದರೆ, ಮಹಿಳಾ ಉದ್ಯೋಗಿಗಳು ಹಣೆಗೆ ಬಿಂದಿ ಇಡುವಂತಿಲ್ಲ. ಸಿಂಧೂರ ಧರಿಸುವುದಾದರೆ ಅದು ಅತೀ ಕಡಿಮೆ ಇರಬೇಕು ಮತ್ತು ಹಣೆಯ ಮೇಲೆ ಕಾಣಿಸಬಾರದು ಎಂದು ಸೂಚಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಕೈಗೆ ಕಟ್ಟುವ ಧಾರ್ಮಿಕ ದಾರಗಳು ಅಥವಾ ಯಾವುದೇ ರೀತಿಯ ರಿಸ್ಟ್ ಬ್ಯಾಂಡ್‌ಗಳನ್ನು ಕಡ್ಡಾಯವಾಗಿ ತೆಗೆಯಬೇಕು ಎಂದು ಆದೇಶಿಸಲಾಗಿದೆ.
36
ನಾಜಿಯಾ ಖಾನ್ ಕಮಾಲ್
ಇದೀಗ ಈ ರೂಲ್ಸ್ ತಂದಿರುವವರಿಗೆ ಬೆವರಿಳಿಸಿದ್ದಾರೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯೆಯೂ ಆಗಿರುವ, ಸುಪ್ರೀಂಕೋರ್ಟ್ ವಕೀಲೆಯೂ ಆಗಿರುವ ನಾಜಿಯಾ ಖಾನ್. ತಮ್ಮ ಮಾತುಗಳಿಂದಲೇ ಮುಸ್ಲಿಂ ಸಮುದಾಯದಲ್ಲಿ ಆಗುತ್ತಿರುವ ಅನ್ಯಾಯಗಳ ವಿರುದ್ಧ ಚಾಟಿ ಬೀಸುವಲ್ಲಿ ಇವರದ್ದು ಎತ್ತಿದ ಕೈ. ತಮ್ಮದೇ ಸಮುದಾಯದವರಿಂದ ಜೀವ ಬೆದರಿಕೆಯನ್ನು ಅದೆಷ್ಟೋ ಬಾರಿ ಎದುರಿಸಿದ್ದರೂ, ಡೋಂಟ್ ಕೇರ್ ಎಂದು ಮಾಧ್ಯಮಗಳಲ್ಲಿ ಅನ್ಯಾಯದ ಬಗ್ಗೆ ಸಾಕ್ಷಿ ಸಹಿತ, ಎಲ್ಲಾ ದಾಖಲೆಗಳನ್ನು ಎದುರಿಗೆ ಇಟ್ಟೇ ಮಾತನಾಡಿ ಎಂಥವರ ಬಾಯನ್ನೂ ಮುಚ್ಚಿಸುವಲ್ಲಿ ಇವರು ನಿಸ್ಸೀಮರು.
ಇಂಥ ನಾಜಿಯಾ ಖಾನ್, ಇದೀಗ ಲೆನ್ಸ್‌ಕಾರ್ಟ್'ಗೆ ಭೇಟಿ ಕೊಟ್ಟಿದ್ದು, ಅಲ್ಲಿದ್ದವರ ಬೆವರು ಇಳಿಸಿದ್ದಾರೆ. ಅಂಗಡಿ ವ್ಯವಸ್ಥಾಪಕರೊಂದಿಗೆ ಅವರು ವಾದಿಸುತ್ತಿರುವುದನ್ನು ಹಾಗೂ ಕಂಪೆನಿಯ ನೀತಿಗಳ ವಿರುದ್ಧ ವಾಗ್ದಾಳಿ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
56
ಹಿಂದೂಗಳಿಗೆ ಕುಂಕುಮ
ಮಾತ್ರವಲ್ಲದೇ ಹಿಂದೂ ಉದ್ಯೋಗಿಗಳಿಗೆ ಕುಂಕುಮ ಹಚ್ಚಿಸಿದ್ದಾರೆ. ಇವರ ವಾಗ್ದಾಳಿಗೆ ಅಲ್ಲಿಯ ಸಿಬ್ಬಂದಿ ಬೆವೆತು ಹೋಗಿದ್ದಾರೆ. ನೀವೇನು ಭಾರತದ ದೇಶದಲ್ಲಿ ಶರಿಯತ್ ಕಾನೂನನ್ನು ಜಾರಿಗೊಳಿಸಲು ಪ್ಲ್ಯಾನ್ ಮಾಡ್ತಾ ಇದ್ದೀರಾ ಎಂದು ಪ್ರಶ್ನಿಸಿದಾಗ, ಅಲ್ಲಿದ್ದ ಸಿಬ್ಬಂದಿ ಏನು ಮಾತನಾಡಬೇಕು ಎಂದು ತಿಳಿಯದೇ ತಡಬಡಿಸಿದ್ದಾನೆ.
66
ಶ್ಲಾಘನೆಗಳ ಮಹಾಪೂರ
ಕೊನೆಗೆ ಅವರು ಅಲ್ಲಿದ್ದ ಹಿಂದೂ ಮಹಿಳೆಯರು ಮತ್ತು ಪುರುಷರನ್ನು ಕರೆಸಿ ಬಿಂದಿ ಹಚ್ಚಿಸಿದ್ದಾರೆ. ಇವರ ಧೈರ್ಯಕ್ಕೆ ಎಲ್ಲೆಡೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ