25ನೇ ವಯಸ್ಸಿಗೆ ಬಿಜೆಪಿ ಟಿಕೆಟ್ ಪಡೆದ ಗಾಯಕಿ ಮೈಥಿಲಿ ಠಾಕೂರ್ ಆಸ್ತಿ ಎಷ್ಟು? ಆದಾಯದ ಮೂಲವೇನು?

Published : Oct 18, 2025, 12:32 PM IST

ಖ್ಯಾತ ಗಾಯಕಿ ಮೈಥಿಲಿ ಠಾಕೂರ್, 25ನೇ ವಯಸ್ಸಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಆದಾಯದ ಮೂಲವನ್ನು ಬಹಿರಂಗಪಡಿಸಿದ್ದು, ಈ ವಿವರಗಳು ವೈರಲ್ ಆಗಿವೆ.

PREV
15
ಗಾಯಕಿ ಮೈಥಿಲಿ ಠಾಕೂರ್

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿರುವ 25 ವರ್ಷದ ಗಾಯಕಿ ಮೈಥಿಲಿ ಠಾಕೂರ್ ಕುರಿತ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಮೈಥಿಲಿ ಠಾಕೂರ್ ಬಿಜೆಪಿಯ ಚಿಕ್ಕ ವಯಸ್ಸಿನ ಅಭ್ಯರ್ಥಿಯಾಗಿದ್ದು, ಇದೀಗ ಇವರ ಆಸ್ತಿ ವಿವರ ವೈರಲ್ ಆಗಿದೆ.

25
ಮೈಥಿಲಿ ಠಾಕೂರ್ ಒಟ್ಟು ಆಸ್ತಿ

ಅಲಿನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವ ಮೈಥಿಲಿ ಠಾಕೂರ್, ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಅಲಿನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿರುವ ಮೈಥಿಲಿ ಠಾಕೂರ್ ಒಟ್ಟು ಆಸ್ತಿ (Movable Assets) 2,32,33,255 ರೂಪಾಯಿ ಎಂದು ಶಪಥ ಪತ್ರದಲ್ಲಿ ತಿಳಿಸಿದ್ದಾರೆ.

35
ಚುನಾವಣಾ ಆಯೋಗಕ್ಕೆ ಮಾಹಿತಿ

ಸದ್ಯ ನಗದು 1.80 ಲಕ್ಷ ರೂಪಾಯಿ, 2 ಕೋಟಿಗೂ ಅಧಿಕ ಮೌಲ್ಯದ ವಾಹನ ಮತ್ತು ಆಭರಣಗಳನ್ನು ಹೊಂದಿರೋದಾಗಿ ತಿಳಿಸಿದ್ದಾರೆ. ಮೈಥಿಲಿ ಬಳಿಯಲ್ಲಿ 47 ಲಕ್ಷ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಮತ್ತು ಸದ್ಯ ಈ ಆಸ್ತಿಯ ಮಾರುಕಟ್ಟೆ ಮೌಲ್ಯ 1.5 ಕೋಟಿ ರೂಪಾಯಿ ಆಗಿದೆ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ ರಣಕಣ: ಚಿರಾಗ್ ಪಾಸ್ವಾನ್ ಮುಂದಿಟ್ರು ಒಂದು ಬೇಡಿಕೆ!

45
ಮೈಥಿಲಿ ಠಾಕೂರ್ ಆಸ್ತಿಯ ವಿವರ ಮತ್ತು ಆದಾಯದ ಮೂಲ

ಮೈಥಿಲಿ ಠಾಕೂರ್ ಸಲ್ಲಿಕೆ ಮಾಡಿರುವ ಉಮೇದುವಾರಿಕೆ ಪ್ರಕಾರ, ಹಾಡುಗಾರಿಕೆ, ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್ ಕೊಲ್ಯಾಬ್ರೇಷನ್ ತಮ್ಮ ಆದಾಯದ ಮೂಲವಾಗಿದೆ ಎಂದು ಘೋಷಿಸಿಕೊಂಡಿದ್ದಾರೆ. ಆಸ್ತಿಯ ಮಾಹಿತಿ ಹೀಗಿದೆ.

  • 2023-24ರಲ್ಲಿ 28,678,350 ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದು, 2022-23ರಲ್ಲಿ 16,98,840 ರೂ.ಗಳಾಗಿತ್ತು.
  • 2021-22ರಲ್ಲಿ 15,93,730 ರೂಪಾಯಿ,
  • 2020-21ರಲ್ಲಿ 11,15,150 ರೂಪಾಯಿ
  • 2019-20ರಲ್ಲಿ 12,02,960 ರೂಪಾಯಿ
55
ಮೈಥಿಲಿ ಠಾಕೂರ್ ವಿದ್ಯಾರ್ಹತೆ

25ನೇ ಜುಲೈ 2000ರಂದು ಜನಿಸಿದ ಮೈಥಿಲಿ ಠಾಕೂರ್ ಅವರ ವಯಸ್ಸು 25 ವರ್ಷ. ಬಿಹಾರದ ಮಧುಬನಿ ಜಿಲ್ಲೆಯ ಬೆನಿಪಟ್ಟಿ ಕ್ಷೇತ್ರದ ಒರೇನ್ ಗ್ರಾಮದ ನಿವಾಸಿಯಾಗಿದ್ದು, ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು. ಭಾರತಿ ಕಾಲೇಜಿನಲ್ಲಿ ಓದಿರುವ ಮೈಥಿಲಿ ಠಾಕೂರ್, ದೆಹಲಿ ವಿಶ್ವವಿದ್ಯಾಲಯದಿಂದ ಬಿ.ಎ ಪದವಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಹಾರ ರಾಜಕಾರಣದಲ್ಲಿ ಸಂಚಲನ; ಸ್ಪರ್ಧೆಯಿಂದ ಹಿಂದೆ ಸರಿದು NDA ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್

Read more Photos on
click me!

Recommended Stories