ಇನ್ನು ಮುಂದೆ ವಿಮಾನ ಪ್ರಯಾಣ ದುಬಾರಿ ಅಲ್ಲ. ಅತೀ ಕಡಿಮೆ ಬೆಲೆಯಲ್ಲಿ ಏರ್ ಇಂಡಿಯಾ ಬೇಸಿಕ್ ಫೇರ್ ಜಾರಿಗೊಳಿಸಿದೆ. ಭಾರತದ ಯಾವುದೇ ಮೂಲೆಗೆ ಕೈಗೆಟುಕುವ ಬೆಲೆಯಲ್ಲಿ ಟೆಕೆಟ್ ಲಭ್ಯ. ಏನಿದು ಬೇಸಿಕ್ ಫೇರ್ ?
ಕಾರು, ಬಸ್ ಪ್ರಯಾಣ ಇದೀಗ ದುಬಾರಿಯಾಗಿದೆ. ಇನ್ನು ರೈಲಿನಲ್ಲಿ ಟಿಕೆಟ್ ಸಿಕ್ಕಿದರೂ ಸೀಟು ಸಿಗುವುದೂ ದುಸ್ತರವಾಗಿದೆ. ಅತ್ತ ವಿಮಾನ ಪ್ರಯಾಣ ದುಬಾರಿ ಎಂದು ಜನಸಾಮಾನ್ಯರು ಏರ್‌ಪೋರ್ಟ್‌ನತ್ತ ಮುಖ ಮಾಡುವುದಿಲ್ಲ. ಆದರೆ ಇನ್ಮುಂದೆ ಹಾಗಿಲ್ಲ. ವಿಮಾನ ಪ್ರಯಾಣವೂ ಅತ್ಯಂತ ಅಗ್ಗವಾಗಲಿದೆ. ಕಾರಣ ಇದೀಗ ಏರ್ ಇಂಡಿಯಾ ಹೊಸ ಬೇಸಿಕ್ ಭೇರ್ ಟ್ರಾವೆಲ್ ಆರಂಭಿಸಿದೆ. ಈ ಮೂಲಕ ಅತೀ ಕಡಿಮೆ ಬೆಲೆಯಲ್ಲಿ ಪ್ರಯಾಣ ಮಾಡಬಹುದು.
26
ಕೈಗೆಟುವು ಬೆಲೆಯಲ್ಲಿ ವಿಮಾನ ಪ್ರಯಾಣ
ಏರ್ ಇಂಡಿಯಾ ಜಾರಿ ಮಾಡಿರುವ ಬೇಸಿಕ್ ಫೇರ್‌ನಲ್ಲಿ ಡೊಮೆಸ್ಟಿಕ್ ಪ್ರಯಾಣಕ್ಕೆ ಮಾತ್ರ ಅವಕಾಶ. ಇದರಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣ ಸಾಧ್ಯವಿಲ್ಲ. ಭಾರತದ ಯಾವುದೇ ಮೂಲೆಗೂ ಬೇಸಿಕ್ ಫೇರ್ ಮೂಲಕ ಏರ್ ಇಂಡಿಯಾದಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಪ್ರಯಾಣ ಸಾಧ್ಯವಿದೆ. ಈ ಮೂಲಕ ಏರ್ ಇಂಡಿಯಾ ಎಲ್ಲರಿಗೂ ವಿಮಾನ ಪ್ರಯಾಣ ಕಲ್ಪಿಸಲು ಮುಂದಾಗಿದೆ.
36
ಊಟ ಇರಲಲ್ಲ, ಕಾಫಿ ಟೀ ಲಭ್ಯ
ಬೇಸಿಕ್ ಫೇರ್ ಟಿಕೆಟ್‌ನಲ್ಲಿ ಕಾಂಪ್ಲಿಮೆಂಟರ್ ಮೀಲ್ ಇರುವುದಿಲ್ಲ. ಪ್ರಯಾಣದ ನಡುವೆ ಪ್ರಯಾಣಿಕರಿಗೆ ಕಾಫಿ, ಟೀ ನೀಡಲಾಗುತ್ತದೆ. ಬೇಸಿಕ್ ಫೇರ್ ಪ್ರಮುಖವಾಗಿ ಅತೀ ಕಡಿಮೆ ವೆಚ್ಚದಲ್ಲಿ ಪ್ರಯಾಣ ಕಲ್ಪಿಸುವುದಾಗಿದೆ. ಹೀಗಾಗಿ ಕೆಲ ಸೌಲಭ್ಯಗಳನ್ನು ಏರ್ ಇಂಡಿಯಾ ಕಡಿತ ಮಾಡಿ ಪ್ರಯಾಣ ಸೇವೆ ನೀಡುತ್ತದೆ.
ಬೇಸಿಕ್ ಫೇರ್ ಟಿಕೆಟ್ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಇತರರಂತೆ 15 ಕೆಜಿ ಲಗೇಜ್ ಬ್ಯಾಗ್, 7 ಕೆಜಿ ತೂಕದ ಬ್ಯಾಗ್ ಕೊಂಡೊಯ್ಯಲು ಅವಕಾಶವಿದೆ. ಹೀಗಾಗಿ ಬ್ಯಾಗೇಜ್ ವಿಚಾರದಲ್ಲಿ ಯಾವುದೇ ಆತಂಕವಿಲ್ಲ. ಎಕಾನಾಮಿಕ್ ಕ್ಲಾಸ್‌ನಲ್ಲಿರುವಂತೆ ಇಲ್ಲೂ ಅವಕಾಶವಿದೆ.
56
ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ
ಬೇಸಿಕ್ ಫೇರ್ ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕರು ತಮಗೆ ಬೇಕಾದ ಸೌಲಭ್ಯಗಳನ್ನು ಮಾತ್ರ ಪಡೆಯಬಹುದು. ಇನ್ನು ಪ್ರಯಾಣದ ನಡುವೆ ಊಟದ ಅವಶ್ಯಕತೆ ಇದ್ದರೆ ಟಿಕೆಟ್ ಬುಕಿಂಗ್ ಬಳಿಕವೂ ಮೀಲ್ ಬುಕ್ ಮಾಡಬಹುದು. ಹೀಗಾಗಿ ಪ್ರಯಾಣಿಕರ ತೀರಾ ಅಗತ್ಯತೆ ಬುಕ್ ಮಾಡಿ ಅತೀ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಲು ಏರ್ ಇಂಡಿಯಾ ಅನೂಕೂಲ ಮಾಡಿಕೊಡುತ್ತಿದೆ.
66
ಪ್ರಾಯೋಗಿಕ ಹಂತದಲ್ಲೇ ಭರ್ಜರಿ ರೆಸ್ಪಾನ್ಸ್
ಭಾರತದ ಹಲವು ಮೂಲೆಗಳಿಗೆ ಜನಸಾಮಾನ್ಯರು ರೈಲಿನ ಮೂಲಕ ಅಥವಾ ಇತರ ಸಾರಿಗೆ ವ್ಯವಸ್ಥೆಗಳ ಮೂಲಕ ಪ್ರಯಾಣಿಸುತ್ತಾರೆ. ದುಬಾರಿ ಪಾವತಿ ಮಾಡಿ ಹೆಚ್ಚು ದಿನ ಪ್ರಯಾಣದಲ್ಲೇ ಕಳೆಯಬೇಕಾಗಿದೆ. ಇದೀಗ ಏರ್ ಇಂಡಿಯಾ ಅಚೀ ಕಡಿಮೆ ವೆಚ್ಚದಲ್ಲಿ ಭಾರತದ ಮೂಲೆ ಮೂಲೆಗೆ ಸೇವೆ ನೀಡಲಿದೆ. ಇದರಿಂದ ಜನಸಾಮ್ಯನರು ವಿಮಾನ ಪ್ರಯಾಣದ ಮೂಲಕ ಸಮಯ, ಹಣ ಎರಡನ್ನು ಉಳಿಸಬಹುದು. ಇದಕ್ಕಾಗಿ ಏರ್ ಇಂಡಿಯಾ ಬೇಸಿಕ್ ಫೇರ್ ಜಾರಿಗೊಳಿಸಿದೆ. ಸದ್ಯ ಪ್ರಯೋಗಿಕ ಹಂತದಲ್ಲಿ ಜಾರಿಯಾಗಿದೆ. ಮೊದಲ ಪ್ರಯತ್ನ ಯಶಸ್ವಿಯಾದರೆ ಹಂತ ಹಂತವಾಗಿ ವಿಸ್ತರಣೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ