2025ರ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದ ತನಿಖೆ ಮುಂದುವರೆದಿದ್ದು, ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
2025 ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
26
AAIB ಮಾಹಿತಿ
ಇದೇ ವರ್ಷ ಅಕ್ಟೋಬರ್ ಅಂತ್ಯದೊಳಗೆ ವಿಮಾನ ಪತನದ ಕುರಿತ ಕರಡು ಅಂತಿಮ ವರದಿ ಸಿದ್ದಪಡಿಸುವ ನಿರೀಕ್ಷೆಗಳಿವೆ ಎಂದು AAIB ಮಾಹಿತಿ ನೀಡಿದೆ. AAIB ಸಲ್ಲಿಕೆ ಮಾಡಿರುವ ಅಫಿಡವಿಟ್‌ನಲ್ಲಿ ಹಲವು ಮಾಹಿತಿಗಳನ್ನು ಒಳಗೊಂಡಿದೆ. 2025 ರ ವಿಮಾನ ಅಪಘಾತ ತನಿಖಾ ನಿಯಮಗಳ ನಿಯಮ 17(5) ರ ಅಡಿಯಲ್ಲಿ ಎಲ್ಲಾ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಆಗುವುದಿಲ್ಲ ನ್ಯಾಯಾಲಯಕ್ಕೆ AAIB ಹೇಳಿದೆ.
36
ಅಫಿಡವಿಟ್‌ನಲ್ಲಿ ಏನೆಲ್ಲಾ ಇರುತ್ತೆ?
ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR)
ವಿಮಾನದೊಳಗಿನ ವಿಡಿಯೋ/ಆಡಿಯೊ ರೆಕಾರ್ಡಿಂಗ್‌ಗಳು,
ತನಿಖೆಯ ಸಮಯದಲ್ಲಿ ಸಾಕ್ಷಿಗಳ ಹೇಳಿಕೆಗಳು
ಪೈಲಟ್, ವಿಮಾನಯಾನ ಸಂಸ್ಥೆ ಮತ್ತು ಇತರ ಸಿಬ್ಬಂದಿಗಳ ನಡುವಿನ ಸಂಭಾಷಣೆ
ವಾಯು ಸಂಚಾರ ನಿಯಂತ್ರಣ (ATC) ರೆಕಾರ್ಡಿಂಗ್‌ಗಳು
ಮೃತರು ಮತ್ತು ಗಾಯಗೊಂಡವರ ವೈಯಕ್ತಿಕ ಮತ್ತು ವೈದ್ಯಕೀಯ ಮಾಹಿತಿ
ಸಾಕ್ಷಿ ಅಥವಾ ವ್ಯಕ್ತಿಗಳ ಮಾಹಿತಿ ಬಹಿರಂಗಗೊಂಡ್ರೆ ಭಯದ ಆತಂಕ
ವಿಮಾನ ಸುರಕ್ಷತೆ
ಈ ಎಲ್ಲಾ ಅಂಶಗಳು 2025 ರ ವಿಮಾನ ಅಪಘಾತ ತನಿಖಾ ನಿಯಮಗಳ ನಿಯಮ 17(5) ರ ಅಡಿಯಲ್ಲಿ ಬರುತ್ತವೆ. ಹಾಗೆಯೇ ಈ ರೀತಿಯ ತನಿಖೆ ಭಾರತೀಯ ನಿಯಮಗಳ ಅಡಿಯಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಅನುಬಂಧ -13 ಮತ್ತು ಚಿಕಾಗೋ ಸಮಾವೇಶದ ಅನುಸಾರವಾಗಿಯೂ ನಡೆಸಲಾಗುತ್ತದೆ ಎಂದು AAIB ಹೇಳಿದೆ
56
ಈಗ ಅಫಿಡವಿಟ್ ಸಲ್ಲಿಕೆ ಮಾಡಿದ್ಯಾಕೆ?
ಅಫಿಡವಿಟ್ ಪ್ರಕಾರ, ಉಳಿದ ತನಿಖೆ ಮುಂದಿನ ಆರು ವಾರಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ತನಿಖಾ ವರದಿ ಬಳಿಕ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಅಹಮದಾಬಾದ್ ವಿಮಾನ ಪತನದಲ್ಲಿ ಮೃತರಾದ ಪೈಲಟ್ ಕ್ಯಾಪ್ಟನ್ ಸುಮಿತ್ ಸಬರ್ವಾಲ್ ತಂದೆ ಪುಷ್ಪರಾಜ್, ಭಾರತೀಯ ಪೈಲಟ್‌ಗಳ ಒಕ್ಕೂಟ ಮತ್ತು ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್ ಎಂಬ ಎನ್‌ಜಿಒ ಸಲ್ಲಿಸಿದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್‌ನಲ್ಲಿ AAIB ಅಫಿಡವಿಟ್ ಸಲ್ಲಿಸಲಾಗಿದೆ.
66
ವಿಮಾನ ಪತನದಲ್ಲಿ ಏನಾಯಿತು?
ಜೂನ್ 12, 2025 ರಂದು ಏರ್ ಇಂಡಿಯಾ ವಿಮಾನ AI-171 ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ಅಪ್ಪಳಿಸಿತ್ತು. ವಿಮಾನದಲ್ಲಿ 242 ಜನರ ಪೈಕಿ 241 ಮಂದಿ ಸಾವನ್ನಪ್ಪಿದ್ದರು. ಹಾಸ್ಟೆಲ್‌ನಲ್ಲಿದ್ದ 19 ಜನರು ಸೇರಿದಂತೆ ಒಟ್ಟು 260 ಜನರು ಸಾವನ್ನಪ್ಪಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ