ಭೋಜಶಾಲಾ ಸಮೀಪ ನಮಾಜ್‌ಗೆ ಪ್ರತ್ಯೇಕ ಸ್ಥಳವಕಾಶಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ

Published : Jul 15, 2026, 07:31 AM IST

ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ ಸಂಕೀರ್ಣದ ಬಳಿ ಮುಸ್ಲಿಮರಿಗೆ ಶುಕ್ರವಾರದ ನಮಾಜ್‌ಗೆ ಪ್ರತ್ಯೇಕ ಸ್ಥಳ ಕಲ್ಪಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಯಾವುದೇ ರಚನಾತ್ಮಕ ಬದಲಾವಣೆ ಮಾಡದಂತೆ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿದೆ.

PREV
15
ನಮಾಜ್‌ಗೆ ಪ್ರತ್ಯೇಕ ಸ್ಥಳವಕಾಶ ಕಲ್ಪಿಸುವಂತೆ ಸುಪ್ರಿಂ ಕೋರ್ಟ್‌ ಸೂಚನೆ

ಮಧ್ಯಪ್ರದೇಶದ ಧಾರ್‌ ಜಿಲ್ಲೆಯ ವಿವಾದಿತ ಭೋಜಶಾಲಾ ದೇಗುಲ ಸಂಕೀರ್ಣದ ಸಮೀಪದಲ್ಲಿಯೇ ಮುಸ್ಲಿಮರಿಗೂ ಶುಕ್ರವಾರದ ನಮಾಜ್‌ಗೆ ಪ್ರತ್ಯೇಕ ಸ್ಥಳವಕಾಶ ಕಲ್ಪಿಸುವಂತೆ ಸುಪ್ರಿಂ ಕೋರ್ಟ್‌ ಸೂಚಿಸಿದೆ.

25
ಮುಸ್ಲಿಂ ಸಮುದಾಯದಿಂದ ಮೇಲ್ಮನವಿ ಸಲ್ಲಿಕೆಯಾಗಿತ್ತು

ಭೋಜಶಾಲಾ ಸಂಕೀರ್ಣ ಸರಸ್ವತಿ ದೇಗುಲಕ್ಕೆ ಸೇರಿದ್ದು ಎಂದು ಮಧ್ಯಪ್ರದೇಶ ಹೈಕೋರ್ಟ್‌ ಕಳೆದ ಮೇ 15 ರಂದು ನೀಡಿದ್ದ ತೀರ್ಪಿನ ವಿರುದ್ಧ ಮುಸ್ಲಿಂ ಸಮುದಾಯ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

35
ನಮಾಜ್‌ಗೆ ಪ್ರತ್ಯೇಕ ಸ್ಥಳ

ಇದರ ವಿಚಾರಣೆ ನಡೆಸಿದ ಸಿಜೆಐ ನ್ಯಾ। ಸೂರ್ಯಕಾಂತ್ ಅವರ ನೇತೃತ್ವದ ತ್ರಿಸದಸ್ಯ ಪೀಠ, ಶುಕ್ರವಾರ ಮಧ್ಯಾಹ್ನ 1 ರಿಂದ 3 ಗಂಟೆ ತನಕ ಮುಸ್ಲಿಮರಿಗೆ ನಮಾಜ್‌ ಮಾಡಲು ಭೋಜಶಾಲಾ ಪಕ್ಕದಲ್ಲಿ ಪ್ರತ್ಯೇಕ ಸ್ಥಳವಕಾಶ ನೀಡುವಂತೆ ಸೂಚಿಸಿದೆ. ಜತೆಗೆ ದಿನನಿತ್ಯ ಆಧಾರದ ಮೇಲೆ ಪ್ರಕರಣ ಆಲಿಸಲು ಮತ್ತು ಸಮಸ್ಯೆ ಪರಿಹರಿಸಲು ಸಿದ್ಧ ಎಂದಿದೆ.

45
ತಾಳ್ಮೆಯಿಂದ ಇರಿ

‘ಭೋಜಶಾಲಾ ಸೂಕ್ಷ್ಮ ವಿಷಯವಾಗಿರುವುದರಿಂದ ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯವರು ತಾಳ್ಮೆಯಿಂದಿರಬೇಕು. ಬಳಸುವ ಪ್ರತಿಯೊಂದು ಅಭಿವ್ಯಕ್ತಿ ಬಗ್ಗೆಯೂ ಜಾಗರೂಕರಾಗಿರಬೇಕು. ಇವು ಬಹಳ ಸೂಕ್ಷ್ಮ ವಿಚಾರಗಳು. ನ್ಯಾಯಾಲಯದಲ್ಲಿ ಏನು ಹೇಳಲಾಗುತ್ತದೆಯೋ ಅದು ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸಬಹುದು. ತಪ್ಪು ಅಭಿಪ್ರಾಯವನ್ನು ರವಾನಿಸಬಹುದು. ಮಧ್ಯಂತರ ವ್ಯವಸ್ಥೆಗೆ ಸಂಬಂಧಿಸಿದ ಇಂತಹ ವಿಚಾರಗಳು ನಮ್ಮ ಮುಂದೆ ಬರುತ್ತಿರುವುದು ಇದೇ ಮೊದಲು.

55
ವ್ಯವಸ್ಥೆಗಳ ಮಾಹಿತಿ ಸಲ್ಲಿಕೆಗೆ ನ್ಯಾಯಾಲಯ ಸೂಚನೆ

ಹೈಕೋರ್ಟ್‌ ಆದೇಶ ಮತ್ತು ರಾಜ್ಯ ಸರ್ಕಾರದ ಅಸಹಾಯಕತೆಯನ್ನು ನ್ಯಾಯಾಲಯ ಗಮನಿಸಿದೆ. ಪ್ರಸ್ತುತ ಯಾವ ವ್ಯವಸ್ಥೆಗಳು ಜಾರಿಯಲ್ಲಿದೆವೋ ಅದರ ಕುರಿತು 10-15 ದಿನಗಳೊಳಗೆ ಪೀಠದ ಮುಂದೆ ಪಟ್ಟಿ ಮಾಡಬೇಕು’ ಎಂದಿತು. 

ಇನ್ನು, ‘ನಮ್ಮ ಅನುಮತಿಯಿಲ್ಲದೆ ಸ್ಥಳದಲ್ಲಿ ಯಾವುದೇ ರಚನಾತ್ಮಕ ಬದಲಾವಣೆ ಕೈಗೊಳ್ಳಬಾರದ’ ಎಂದು ಅದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶಿಸಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories