14 ರಾಜ್ಯಕ್ಕೆ ಪ್ರವಾಹ ಸೃಷ್ಟಿಸುವ ಭಾರಿ ಮಳೆ ಅಲರ್ಟ್, ಬಿಸಿಲಿನ ಬೆನ್ನಲ್ಲೇ ಹವಾಮಾನ ಇಲಾಖೆ ಎಚ್ಚರಿಕೆ

Published : Jul 15, 2026, 11:27 AM IST

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಉರಿ ಬಿಸಿಲು ತೀವ್ರಗೊಳ್ಳುತ್ತಿದೆ. ದೇಶದ ಕೆಲೆವೆಡೆ ಮಳೆಯಾಗಿದ್ದರೆ, ಬಹುತೇಕ ರಾಜ್ಯಗಳು ಮಳೆಗಾಗಿ ಪ್ರಾರ್ಥಿಸುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ 14 ರಾಜ್ಯಗಳಿಗೆ ಪ್ರವಾಹ ಪರಿಸ್ಥಿತಿ ಮಳೆ ಎಚ್ಚರಿಕೆ ನೀಡಿದೆ.

PREV
16
ಬಿಸಿಲಿನ ಬೆನ್ನಲ್ಲೇ ಇದೇ ಭಾರಿ ಮಳೆ

ಎಲ್ ನಿನೋ ಪರಿಣಾಮದಿಂದ ಈ ಬಾರಿ ಭಾರತದ ಮಳೆ ಕೊರತೆಯಿಂದ ಬೆಂದು ಹೋಗಲಿದೆ. ಭಾರಿ ಮಳೆಯಾಗುತ್ತಿದ್ದ ಕರ್ನಾಟಕದ ಹಲವು ಜಿಲ್ಲೆಗಳು ಉರಿ ಬಿಸಿಲಿನಿಂದ ಕಂಗೆಟ್ಟಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲು ಮುಂದುವರಿದಿದೆ. ದಕ್ಷಿಣ ಭಾರತದಲ್ಲಿ ಬಿಸಿಲು ತೀವ್ರಗೊಳ್ಳುತ್ತಿದೆ. ಉತ್ತರ ಭಾರತವೂ ಇದಕ್ಕಿಂತ ಭಿನ್ನವಿಲ್ಲ. ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗದಲ್ಲಿ ಮಳೆಯಾಗುತ್ತಿದೆ. ಕೇವಲ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ಹವಾಮಾನ ಇಲಾಖೆ 14 ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಎಚ್ಚರಿಕೆ ನೀಡಿದೆ.

26
ಹವಾಮಾನ ಇಲಾಖೆಯಿಂದ ಅಲರ್ಟ್

ಹವಾಮಾನ ಇಲಾಖೆ 14 ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಭಾರಿ ಮಳೆ ಮುನ್ಸೂಚನೆ ನೀಡಿದ್ದು, ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದಿದೆ. ಸೌತ್‌ವೆಸ್ಚ್ ಮುಂಗಾರು ಈಸ್ಟರ್ನ್ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಹೀಗಾಗಿ ಮುಂದಿನ 7 ದಿನಗಳ ಕಾಲ ಭಾರಿ ಮಳೆಯಾಗಲಿದೆ. ಮೇಘಸ್ಫೋಟದಂತೆ ಪರಿಸ್ಥಿತಿಗಳಿಂದ ಪ್ರವಾಹ ಸೃಷ್ಟಿಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

36
ಯಾವ ರಾಜ್ಯಗಳಲ್ಲಿ ಮಳೆ?

ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ರಾಜ್ಯಗಳ ಪೈಕಿ ಮೆಘಾಲಯ ಹಾಗೂ ಪಶ್ಚಿಮ ಬಂಗಾಳ ಡೇಂಜರ್ ಝೋನ್‌ನಲ್ಲಿದೆ. ಈ ಎರಡು ರಾಜ್ಯಗಳಲ್ಲಿ ಮೇಘಸ್ಫೋಟದಂತೆ ಪರಿಸ್ಥಿತಿಯಿಂದ ಎಲ್ಲೆಡೆ ಪ್ರವಾಹ ನುಗ್ಗಲಿದೆ ಎಂದಿದೆ. ಇನ್ನು ಅಸ್ಸಾಂ ಅರುಣಾಚಲ ಪ್ರದೇಶಗಳಲ್ಲಿ ಭಾರಿ ಮಳೆ ಸೂಚನೆ ಇದೆ ಎಂದಿದೆ. ಇತ್ತ ಒಡಿಶಾ, ಜಾರ್ಖಂಡ್ ಹಾಗೂ ಬಿಹಾರದಲ್ಲೂ ಮಳೆ ಪ್ರಮಾಣ ತೀವ್ರಗೊಂಡು ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿದೆ.

46
ಅವಾಂತರ ಸೃಷ್ಟಿಯಾಗುವ ಆತಂಕ

ಜುಲೈ 15 ಹಾಗೂ 16ರಂದು ತ್ರಿಪುರಾದ ಕೆಲ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಂಡದಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಜುಲೈ 17 ರಿಂದ 19ರ ವರೆಗೆ ಉತ್ತರ ಪ್ರದೇಶದ ಕೆಲ ಭಾಗದಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಮಳೆ ಪ್ರಮಾಣ ಒಂದೇ ಸಮನೆ ತೀವ್ರಗೊಳ್ಳುವ ಕಾರಣ ಅವಾಂತರಗಳು ಸೃಷ್ಟಿಯಾಗಲಿದೆ ಎಂದಿದೆ.

56
ಕರ್ನಾಟಕ ಸೇರಿ ದಕ್ಷಿಣ ಭಾರತದ ಕತೆ ಏನು?

ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಬಿಸಿಲು ಮುಂದುವರಿಯಲಿದೆ. ಈ ಪೈಕಿ ಆಂಧ್ರ ಪದೇಶದಲ್ಲಿ ವ್ಯತಿರಿಕ್ತ ಹವಮಾನ ಇರಲಿದೆ. ಒಮ್ಮೆ ಮಳೆ ಮತೊಮ್ಮೆ ಬಿಸಿಲು ಹೆಚ್ಚಾಗಲಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ.

66
ಬಿಸಿಸಿಲಿನಿಂದ ತತ್ತರಿಸಿದ ಕರ್ನಾಟಕದ ಜಿಲ್ಲೆ

ಕರ್ನಾಟಕದ ಹಲವು ಜಿಲ್ಲೆಗಳು ತೀವ್ರ ಮಳೆ ಕೊರತೆ ಎದುರಿಸುತ್ತಿದೆ. ರೈತರು ಕಂಗಾಲಾಗಿದ್ದಾರೆ. ಬಿತ್ತನೆ ಕೆಲಸಗಳು ನಡೆದಿಲ್ಲ. ಮಳೆಗಾಗಿ ಪ್ರಾರ್ಥನೆ ನಡೆಯುತ್ತಿದೆ. ಆದರೆ ಮಳೆ ಕಾಣುತ್ತಿಲ್ಲ. ಜೂನ್ ಅಂತ್ಯ ಹಾಗೂ ಜುಲೈ ಆರಂಭದಲ್ಲಿ ಕೆಲ ಜಿಲ್ಲೆಗಳಲ್ಲಿ ಮಳೆಯಾಗಿತ್ತು. ಈ ಪೈಕಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳು ಸೇರಿದಂತೆ ಕೆಲ ಭಾಗದಲ್ಲಿ ಮಳೆಯಾಗಿತ್ತು. ಇದೀಗ ಬಹುತೇಕ ಜಿಲ್ಲೆಗಳು ಉರಿ ಬಿಸಿಲಿನಿಂದ ಒಣಗಿ ಹೋಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories