ಅತೀ ದೊಡ್ಡ ಪಕ್ಷವಾದರೂ ಸರ್ಕಾರ ರಚಿಸಲು ನಟ ವಿಜಯ್ ಟಿವಿಕೆ ಪಕ್ಷ ಕಸರತ್ತು ನಡೆಸುತ್ತಿರುವಾಗಲೇ, ಡಿಎಂಕೆ-ಎಐಡಿಎಂಕೆ ಹಿಂಬಾಗಿಲ ರಾಜಕೀಯ ಕಸರತ್ತು ತೀವ್ರಗೊಂಡಿದೆ. ಇದರ ಬೆನ್ನಲ್ಲೇ 108 ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ಫಲಿತಾಂಶ ಹೊರಬಿದ್ದು ನಟ ವಿಜಯ್ ಜೊಸೆಫ್ ಅವರ ಟಿವಿಕೆ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 108 ಸ್ಥಾನ ಗೆದ್ದುಕೊಂಡಿದೆ. ಆದರೆ ಸರ್ಕಾರ ರಚಿಸಲು 118 ಶಾಸಕರು ಬೇಕಾಗಿದ್ದಾರೆ. ಕಾಂಗ್ರೆಸ್ ಬೆಂಬಲ ನೀಡಿದರೂ ಮ್ಯಾಜಿಕ್ ನಂಬರ್ ದಾಟುತ್ತಿಲ್ಲ. ಹೀಗಾಗಿ ನಟ ವಿಜಯ್ ಸರ್ಕಾರ ರಚಿಸುವ ಕಸರತ್ತಿನಲ್ಲಿದ್ದಾರೆ. ಇಧರ ನಡುವೆ ಮಹತ್ವದ ಬಿರುಗಾಳಿ ಎದ್ದಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಕಸರತ್ತು ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷ ಎಚ್ಚರಿಕೆ ನೀಡಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಒಂದಾದರೆ, ನಮ್ಮೆಲ್ಲಾ ಶಾಸಕರೂ ರಾಜೀನಾಮೆ ನೀಡಲಿದ್ದಾರೆ ಎಂದಿದ್ದಾರೆ.
25
108 ಶಾಸಕರ ಗೆದ್ದ ಪಕ್ಷಕ್ಕೆ ಆಹ್ವಾನ ನೀಡಿ
ಜನರ ತೀರ್ಪನ್ನು ಬದಿಗೊತ್ತಿ ಈ ಎರಡೂ ದ್ರಾವಿಡ ಪಕ್ಷಗಳು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಸಂಚು ರೂಪಿಸಿವೆ ಎಂದು ಟಿವಿಕೆ ಆರೋಪಿಸಿದೆ. 108 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿರುವ ನಮಗೆ ಸರ್ಕಾರ ರಚಿಸಲು ರಾಜ್ಯಪಾಲರು ಮೊದಲು ಅವಕಾಶ ನೀಡಬೇಕು ಎಂದು ಟಿವಿಕೆ ಹೇಳಿದೆ. ಆದರೆ, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ವಿಜಯ್ ಅವರ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗುತ್ತಿದೆ.
35
118 ಶಾಸಕರ ಬೆಂಬಲ ಪತ್ರ ನೀಡಲು ಸೂಚನೆ
ಸರ್ಕಾರ ರಚಿಸಲು ಬೇಕಾದ ಬಹುಮತ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಹುಮತ ಸಾಬೀತುಪಡಿಸಲು ವಿಜಯ್ ನೀಡಿದ ಯೋಜನೆಯನ್ನೂ ರಾಜ್ಯಪಾಲರು ಒಪ್ಪಲಿಲ್ಲ. 118 ಶಾಸಕರ ಬೆಂಬಲ ಪತ್ರ ನೀಡುವಂತೆ ರಾಜ್ಯಪಾಲರು ಪಟ್ಟು ಹಿಡಿದಿದ್ದರಿಂದ ಸರ್ಕಾರ ರಚನೆ ಪ್ರಕ್ರಿಯೆ ಸಂಕಷ್ಟಕ್ಕೆ ಸಿಲುಕಿದೆ. ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತ ಇನ್ನೂ ಯಾರಿಗೂ ಸಿಕ್ಕಿಲ್ಲ ಎಂದು ರಾಜ್ಯಪಾಲರು ವಿವರಿಸಿದ್ದಾರೆ.
ಬಹುಮತಕ್ಕೆ ಟಿವಿಕೆಗೆ ಇನ್ನೂ 10 ಸ್ಥಾನಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಪಕ್ಷವು ಎಡಪಕ್ಷಗಳು ಮತ್ತು ಕೆಲವು ಸಣ್ಣ ಪಕ್ಷಗಳ ಜೊತೆ ಮಾತುಕತೆ ನಡೆಸುತ್ತಿದೆ. ಇದರ ಜೊತೆಗೆ, ನ್ಯಾಯಾಲಯದ ಮೊರೆ ಹೋಗಲು ಕೂಡ ಪಕ್ಷ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಡಿಎಂಕೆ ಸಭೆ ನಡೆಸಿದ ನಂತರ ಈ ಎಲ್ಲಾ ರಾಜಕೀಯ ವದಂತಿಗಳು ಶುರುವಾಗಿವೆ. ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಗೆ ಪಕ್ಷವು ಸಂಪೂರ್ಣ ಅಧಿಕಾರ ನೀಡಿದೆ. ಮತ್ತೊಂದು ಚುನಾವಣೆಯನ್ನು ತಪ್ಪಿಸುವುದು, ಸ್ಥಿರ ಸರ್ಕಾರವನ್ನು ರಚಿಸುವುದು ಮತ್ತು ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡದಿರುವುದೇ ನಮ್ಮ ಪ್ರಾಥಮಿಕ ಗುರಿ ಎಂದು ಡಿಎಂಕೆ ಹೇಳಿದೆ.
55
ಎಲ್ಲಾ ಶಾಸಕರಿಗೆ ಚೆನ್ನೈನಲ್ಲೇ ಇರುವಂತೆ ಸೂಚನೆ
ಮೇ 10ರವರೆಗೆ ಎಲ್ಲಾ ಶಾಸಕರು ಚೆನ್ನೈನಲ್ಲೇ ಇರುವಂತೆ ಡಿಎಂಕೆ ಸೂಚನೆ ನೀಡಿದೆ. ಡಿಎಂಕೆ ಹೊರಗಿನಿಂದ ಬೆಂಬಲ ನೀಡಿ, ಇ. ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಚರ್ಚೆಯಲ್ಲಿದೆ ಎಂದು ಡಿಎಂಕೆ ಉನ್ನತ ಮೂಲಗಳು ಖಚಿತಪಡಿಸಿವೆ. ಒಂದು ವೇಳೆ ವಿಜಯ್ ಅಧಿಕಾರಕ್ಕೆ ಬಂದರೆ, ಅವರು ಎಂ.ಜಿ. ರಾಮಚಂದ್ರನ್ ಅವರಂತೆ ಆಗುತ್ತಾರೆ, ನಂತರ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಅಸಾಧ್ಯ ಎಂಬ ಭಯ ಈ ಪಕ್ಷಗಳನ್ನು ಕಾಡುತ್ತಿದೆ.
ಎಲ್ಲಾ ಶಾಸಕರಿಗೆ ಚೆನ್ನೈನಲ್ಲೇ ಇರುವಂತೆ ಸೂಚನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ