ಗಂಡ ಮನೆಯಲ್ಲಿರುವಾಗಲೇ ನೇಣಿಗೆ ಶರಣಾದ ಪತ್ನಿ; ವಿಡಿಯೋ ಕಾಲ್ ಮಾಡಿದ್ರೂ ಕ್ಯಾರೇ ಎನ್ನದ ಪತಿ

Published : May 07, 2026, 12:01 PM IST

ಶಾರದಾ ಮತ್ತು ಮಹೇಶ್ ದಂಪತಿಗಳ ಮದುವೆಯಾಗಿ ಕೇವಲ ಎಂಟು ತಿಂಗಳು ಕಳೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಹಣಕ್ಕಾಗಿ ಪತಿ ಮಹೇಶ್ ಪೀಡಿಸುತ್ತಿದ್ದ ಎಂಬುದು ಕುಟುಂಬದ ಗಂಭೀರ ಆರೋಪವಾಗಿದೆ. ಘಟನಾ ಸ್ಥಳದ ಮಹಜರು ಪ್ರಕ್ರಿಯೆಯಲ್ಲಿ ಪೊಲೀಸರು ಲೋಪ ಎಸಗಿದ್ದಾರೆ ಎಂದು ಶಾರದಾ ಪೋಷಕರು ಆರೋಪಿಸಿದ್ದಾರೆ. 

PREV
13
ನವವವಾಹಿತೆಯ ಸಾವು

ಗಂಡ ಮನೆಯಲ್ಲಿರುವಾಗಲೇ ಪತ್ನಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಶವಂತರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಾರದಾ ಮೃತ ಮಹಿಳೆ.

23
ಎಂಟು ತಿಂಗಳ ಹಿಂದೆಯಷ್ಟೇ ಮದುವೆ

ಎಂಟು ತಿಂಗಳ ಹಿಂದೆಯಷ್ಟೇ ಶಾರದಾ ಮದುವೆ ಮಹೇಶ್ ಎಂಬಾತನೊಂದಿಗೆ ನಡೆದಿದೆ. ಮದುವೆ ಬಳಿಕ ಮಹೇಶ್ ಹಣಕ್ಕಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂಬ ಗಂಭೀರ ಆರೋಪವನ್ನು ಶಾರದಾ ಕುಟುಂಬಸ್ಥರು ಮಾಡುತ್ತಿದ್ದಾರೆ.

33
ಪೊಲೀಸರ ವಿರುದ್ಧವೂ ಆರೋಪ ಮಾಡಿರುವ ಶಾರದಾ ಪೋಷಕರು

ಇದರ ಜೊತೆಗೆ ಪೊಲೀಸರು ಘಟನೆ ವೇಳೆ ಸ್ಥಳ ಮಹಜರು ಸರಿಯಾಗಿ ನಡೆಸಿಲ್ಲ ಎಂದು ಆರೋಪಿಸಿ ಗೃಹಸಚಿವರಿಗೆ ದೂರು ನೀಡಿದ್ದಾರೆ. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮಗಳ ಸಾವಿನ ಬಗ್ಗೆ ಶಾರದಾ ಪೋಷಕರು ದೂರು ದಾಖಲಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories