19ರ ನಂತರ ಬಂತು 40 ನಿಮಿಷದ ವಿಡಿಯೋ; ಟ್ರೆಂಡಿಂಗ್ ವೈರಲ್ ಕ್ಲಿಪ್‌ಗಾಗಿ ತೀವ್ರ ಹುಡುಕಾಟ!

Published : Dec 16, 2025, 12:19 PM IST

ಇತ್ತೀಚೆಗೆ ಸಂಚಲನ ಸೃಷ್ಟಿಸಿರುವ '40 ನಿಮಿಷದ ವಿಡಿಯೋ' ಹುಡುಕಾಟವು ಒಂದು ದೊಡ್ಡಮಟ್ಟದಲ್ಲಿ ಶುರುವಾಗಿದೆ. 40-minute viral video ಎಂದ ಪದಗಳು ಗೂಗಲ್‌ ಟ್ರೆಂಡ್‌ನಲ್ಲಿದ್ದು, ಜನರು ಇದು ಯಾವ ವಿಡಿಯೋ ಎಂದು ಸೋಶಿಯಲ್ ಮೀಡಿಯಾದಲ್ಲಿ ಸರ್ಚ್ ಮಾಡುತ್ತಿದ್ದಾರೆ.

PREV
110
19ರ ನಂತರ 40 ನಿಮಿಷದ ವಿಡಿಯೋ

ಕಳೆದ ಕೆಲ ದಿನಗಳ ಹಿಂದೆ ಜೋಡಿಯ 19 ನಿಮಿಷ ವಿಡಿಯೋ (19-minute viral video) ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಇದೀಗ ಮತ್ತೆ 40 ನಿಮಿಷ ಹೆಸರಿನ ವಿಡಿಯೋಗಾಗಿ (40-minute viral video) ಇಂಟರ್‌ನೆಟ್‌ನಲ್ಲಿ ಹುಡುಕಾಟ ಆರಂಭವಾಗಿದೆ. 

210
ಸೈಬರ್ ತಜ್ಞರು

ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ 40 ನಿಮಿಷದ ವಿಡಿಯೋ ಟ್ರೆಂಡ್ ಆರಂಭವಾಗಿದೆ. ಈ ವಿಡಿಯೋದಲ್ಲಿರೋರು ಯಾರು? ಯಾಕೆ ಈ ಟ್ರೆಂಡ್ ಆರಂಭವಾಗಿದೆ? ಎಂಬುದಕ್ಕೆ ಸೈಬರ್ ತಜ್ಞರು ಮಾಹಿತಿಯನ್ನು ನೀಡಿದ್ದಾರೆ.

310
ಸ್ಕ್ಯಾಮ್‌ವುಳ್ಳ ಮೆಸೇಜ್‌ಗಳು

ಇದು 40 ನಿಮಿಷದ ಒಂದೇ ವಿಡಿಯೋ ಎಂದು ಯಾವುದೇ ಅಧಿಕೃತ ಲಭ್ಯವಾಗಿಲ್ಲ. 40 ನಿಮಿಷ ವಿಡಿಯೋ ಕ್ಲಿಪ್ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾದಂತೆ ವಿವಿಧ ಪೋಸ್ಟ್‌, ಕ್ಲಿಪ್‌ಗಳು ಮುನ್ನಲೆಗೆ ಬರುತ್ತಿವೆ. ಯಾವುದು 40 ನಿಮಿಷದ ವಿಡಿಯೋ ಎಂಬುದರ ಬಗ್ಗೆಯೂ ನಿಖರತೆ ಇಲ್ಲ. ಈ ಟ್ರೆಂಡ್ ಸ್ಪ್ಯಾಮ್ ಲಿಂಕ್‌, ತಪ್ಪು ಮಾಹಿತಿಯುಳ್ಳ ಲಿಂಕ್ ಎಂದು ವರದಿಯಾಗಿದೆ.

410
full leaked videos ಅವಲೇಬಲ್ ಎಂಬ ಮೆಸೇಜ್

ವಿವಾದಾತ್ಮಕ 19 ನಿಮಿಷದ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದಾದ ಬಳಿಕ ಇದಕ್ಕೆ ಸಂಬಂಧಿಸಿದ ಟ್ಯಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಅತ್ಯಧಿಕವಾಗಿ ಬಳಕೆ ಮಾಡಲಾಯ್ತು. ನಂತರ ಈ ಟ್ಯಾಗ್‌ಗಳನ್ನು ಫ್ಲ್ಯಾಗ್ ಮಾಡಲಾಗಿತ್ತು. ಈಗ ಇದಕ್ಕೆ ಪರ್ಯಾಯವಾಗಿ 40-minute viral video ಬಳಕೆ ಮಾಡಲಾಗ್ತಿದೆ ಎಂಬುದರ ಬಗ್ಗೆ ಶಂಕೆ ವ್ಯಕ್ತವಾಗಿವೆ. ಕ್ಲಿಕ್‌ಬೈಟ್ ಪೋಸ್ಟ್‌ಗಳು “full leaked videos” ಎಂಬ ಭರವಸೆಯನ್ನು ಬಳಕೆದಾರರಿಗೆ ನೀಡುತ್ತಿವೆ. ಸದ್ಯ 40 ನಿಮಿಷ ವಿಡಿಯೋ ಎಂಬ ಪದ ಡಿಜಿಟಲ್ ಭೂತದಂತೆ ಎಲ್ಲೆಡೆ ಸರ್ಚ್ ಆಗ್ತಿದೆ.

510
40 ನಿಮಿಷದ ವಿಡಿಯೋ ಇದೆಯಾ?

“40-minute viral video” ಎಂಬ ಸಾಲು ಗೂಗಲ್ ಹುಡುಕಾಟದ ಟ್ರೆಂಡ್‌ಗಳಲ್ಲಿ ಏರಿಕೆಯಾಗಿದೆ. ಆಂಧ್ರಪ್ರದೇಶ, ಒಡಿಶಾ, ತೆಲಂಗಾಣ, ದೆಹಲಿ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರ್ಚ್ ಏರಿಕೆಯಾಗುತ್ತಿದೆ. ಸರ್ಚಿಂಗ್ ಡೇಟಾ ನಂಬರ್ಸ್ ಹೆಚ್ಚಾಗಿದೆ ಎಂದು ವರದಿಯಾಗಿದೆ. ನಿಜವಾಗಿಯೂ 40 ನಿಮಿಷದ ವಿಡಿಯೋ ಇದೆಯಾ ಎಂಬುದರ ಬಗ್ಗೆ ಸೈಬರ್ ಭದ್ರತಾ ತಜ್ಞರು ಮಾಹಿತಿ ನೀಡಿದ್ದಾರೆ.

610
40 ನಿಮಿಷಗಳ ವೈರಲ್ ವಿಡಿಯೋ' ಇದೆಯೇ?

ಇದು ಯಾವುದೇ ಒಂದು ವಿಡಿಯೋ ಸಂಬಂಧಿಸಿದ ಟ್ಯಾಗ್ ಅಲ್ಲ ಎಂದು ವರದಿಗಳು ಹೇಳುತ್ತವೆ. ದಾರಿತಪ್ಪಿಸುವ ಥಂಬ್‌ನೇಲ್‌ಗಳು ಬಳಕೆದಾರರನ್ನು ಸೆಳೆಯುತ್ತಿವೆ. ವಿಡಿಯೋದಲ್ಲಿ ಏನಿದೆ ಎಂದು ತಿಳಿಯದೇ ಬಳಕೆದಾರರು ಲಿಂಕ್ ಓಪನ್ ಮಾಡಿ ಸೈಬರ್ ವಂಚಕರ ಬಲೆಗೆ ಸಿಲುಕುವ ಸಾಧ್ಯತೆಗಳಿವೆ. ಸೈಬರ್ ವಂಚಕರು ಟ್ರೆಂಡಿಂಗ್ ಟ್ಯಾಗ್ ಬಳಸಿಯೇ ವಂಚನೆಗೆ ಇಳಿಯುತ್ತಾರೆ ಎಂದು ಸೈಬರ್ ಭದ್ರತಾ ತಜ್ಞರು ಎಚ್ಚರಿಸಿದ್ದಾರೆ.

710
ವಂಚನೆಗಳು

19 ನಿಮಿಷಗಳ ಹಿಂದಿನ ವಿವಾದದ ಸಮಯದಲ್ಲಿ ಕಂಡುಬಂದಂತೆ, ಈ ಬಾರಿ 40 ನಿಮಿಷ ವಿಡಿಯೋದಲ್ಲಿ ವಂಚನೆಗಳು ಕಂಡು ಬರುತ್ತಿವೆ. ಬಳಕೆದಾರರ ಮಾಹಿತಿಯನ್ನು ಕಳ್ಳತನ ಮಾಡಲು ಕೆಲವೊಮ್ಮೆ ಈ ರೀತಿ ಕೃತಕವಾಗಿ ಟ್ರೆಂಡ್ ಸೃಷ್ಟಿಸಲಾಗುತ್ತದೆ. ಈ ಕೃತಕ ಟ್ರೆಂಡ್‌ಗಳು malware ವೈರಸ್ ಹೊಂದಿದ್ದು, ನಿಮ್ಮ ಕಂಪ್ಯೂಟರ್/ಮೊಬೈಲ್‌ಗಳಿಗೆ ಹಾನಿಯನ್ನುಂಟು ಮಾಡುತ್ತವೆ. 

810
pop-ups ಮೆಸೇಜ್

ಸ್ಕ್ರೀನ್ ಮೇಲೆ ಕಾಣುವ pop-ups ಆಕ್ರಮಣಕಾರಿಯಾಗಿದ್ದು, ಕೆಲವೇ ನಿಮಿಷಗಳಲ್ಲಿ ನಿಮ್ಮ ಸಿಸ್ಟಮ್‌ನಿಂದ ಖಾಸಗಿ ಮಾಹಿತಿ ಕದಿಯುತ್ತವೆ. ಈ ಮಾಹಿತಿಯ ಕೊರತೆಯಿಂದ ಬಳಕೆದಾರರು ವಂಚನೆಗೆ ಒಳಗಾಗುತ್ತಿದ್ದಾರೆ.

910
ಕೃತಕ ಬುದ್ಧಿಮತ್ತೆ ಬಳಸಿ ರಚನೆ ಮಾಡಿರುವ ವಿಡಿಯೋ

ಈ ಕುರಿತು ಹರಿಯಾಣ ಎನ್‌ಸಿಬಿ ಸೈಬರ್ ಸೆಲ್ ಅಧಿಕಾರಿ ಅಮಿತ್ ಯಾದವ್ ಪ್ರತಿಕ್ರಿಯಿಸಿದ್ದು, ವೈರಲ್ ವಿಡಿಯೋವನ್ನು ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾಗಿದೆ. ಈ ರೀತಿಯ ಚಟುವಟಿಕೆಯನ್ನು ಭಾಗಿಯಾಗೋದು ಕಾನೂನಿನ ಪ್ರಕಾರ ಅಪರಾಧ. 

1010
ಏನು ಶಿಕ್ಷೆ?

ಇಂತಹ ವಿಡಿಯೋ ಸೇವ್, ಶೇರ್ ಮಾಡಿಕೊಂಡ್ರೆ ಐಪಿಸಿ ಸೆಕ್ಷನ್ 67, 67A ಮತ್ತು 66 ರ ಅಡಿಯಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ₹ 2 ಲಕ್ಷದವರೆಗೆ ದಂಡ ಅಥವಾ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೊಳಗಾಗಹುದು. ಹಾಗಾಗಿ ಲೀಕ್ ಆಗಿರುವ ವಿಡಿಯೋವನ್ನು ಸರ್ಚ್, ಶೇರ್ ಮಾಡೋದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: 

Read more Photos on
click me!

Recommended Stories