8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ, ಬೆದರಿಸಿ ಚಿನ್ನ ದೋಚಿದ್ದ 10ನೇ ಕ್ಲಾಸ್ ಹುಡುಗ ಅರೆಸ್ಟ್

Published : Dec 14, 2025, 12:28 AM IST

Firozabad Minor Girl Assault Case: ಮದುವೆ ಸಮಾರಂಭವೊಂದರಲ್ಲಿ ಹುಡುಗ ಮತ್ತು ಹುಡುಗಿ ಪರಿಚಯವಾಗಿದ್ದು, ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ಸ್ನೇಹ ಪ್ರೀತಿಗೆ ತಿರುಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

PREV
15
ಫಿರೋಝಾಬಾದ್‌ನಲ್ಲಿ 8ನೇ ಕ್ಲಾಸ್ ಹುಡುಗಿ ಮೇಲೆ ಬಲತ್ಕಾರ

ಉತ್ತರ ಪ್ರದೇಶದ ಫಿರೋಝಾಬಾದ್‌ನಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಮೇಲೆ ಬಲತ್ಕಾರ ಎಸಗಿ, ಬೆದರಿಸಿ ಚಿನ್ನ ದೋಚಿದ ಪ್ರಕರಣದಲ್ಲಿ 10ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

25
ಮದುವೆಯಲ್ಲಿ ಶುರುವಾದ ಪರಿಚಯ, ಬಲತ್ಕಾರದಲ್ಲಿ ಅಂತ್ಯ
ಆರು ತಿಂಗಳ ಹಿಂದೆ ಮದುವೆ ಸಮಾರಂಭವೊಂದರಲ್ಲಿ ಇಬ್ಬರೂ ಪರಿಚಯವಾಗಿದ್ದು, ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು.
35
ಖಾಸಗಿ ದೃಶ್ಯ ಬಳಸಿ ಬ್ಲ್ಯಾಕ್‌ಮೇಲ್
ಇಬ್ಬರ ಖಾಸಗಿ ದೃಶ್ಯಗಳನ್ನು ಬಳಸಿ ಬಾಲಕ, ಬಾಲಕಿಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ. ಫೋಟೋಗಳನ್ನು ಬಹಿರಂಗಪಡಿಸುವುದಾಗಿ ಹೆದರಿಸಿ ಚಿನ್ನವನ್ನು ಪಡೆದಿದ್ದ.
45
ಚಿನ್ನ ಕಳೆದುಹೋದಾಗ ಬಯಲಾಯ್ತು ಅಸಲಿ ಸತ್ಯ!
ಮನೆಯಲ್ಲಿ ಚಿನ್ನ ಕಾಣೆಯಾದಾಗ ಅನುಮಾನಗೊಂಡ ಪೋಷಕರು ಮಗಳನ್ನು ವಿಚಾರಿಸಿದಾಗ, ಆಕೆ ನಡೆದ ಘಟನೆಯನ್ನು ಬಾಯಿಬಿಟ್ಟಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
55
ಆರೋಪಿ ಬಾಲಕನಿಂದ ಚಿನ್ನಾಭರಣ ವಶ: ಮೊಬೈಲ್ ಫೋನ್‌ಗಳು ಸೀಝ್
ಪೊಲೀಸರು ಆರೋಪಿ ಬಾಲಕನಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಗಾಗಿ ಇಬ್ಬರೂ ಬಳಸುತ್ತಿದ್ದ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories