19 ವರ್ಷದ ಲಲಿತ್ ಮತ್ತು 35 ವರ್ಷದ ವಿವಾಹಿತೆ ಆರತಿ ಅಕ್ರಮ ಸಂಬಂಧ ಹೊಂದಿದ್ದರು. ದೀಪಾವಳಿ ರಾತ್ರಿ ಎಲ್ಲರೂ ಸಂಭ್ರಮದಲ್ಲಿರುವಾಗ ಮನೆಯಿಂದ ಜೂಟ್ ಆಗಿದ್ದಾರೆ. ವಿವಾಹಿತೆಯಾಗಿರುವ ಆರತಿ ಎರಡು ಮಕ್ಕಳ ತಾಯಿ.
ದೀಪಾವಳಿ ರಾತ್ರಿ ಎಲ್ಲರೂ ಬೆಳಕಿನ ಹಬ್ಬ ಆಚರಿಸುತ್ತಿದ್ರೆ, 19ರ ಯುವಕನೋರ್ವ, ತನ್ನ 35 ವಯಸ್ಸಿನ ಪ್ರೇಯಸಿ ಜೊತೆ ಕಾಡಿನೊಳಗೆ ಹೋಗಿದ್ದಾನೆ. ರಾತ್ರಿ ಕಾಡಿನೊಳಗೆ ಹೋಗಿದ್ದ ಇವರಿಬ್ಬರು ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಲಲಿತ್ (19) ಮತ್ತು ಆರತಿ (35) ಎಂದು ಗುರುತಿಸಲಾಗಿದೆ.
25
ಗಂಡನಿದ್ರೂ ಅಕ್ರಮ ಸಂಬಂಧ
ಮೃತ ಆರತಿ ವಿವಾಹಿತೆಯಾಗಿದ್ದು, ಎರಡು ಮಕ್ಕಳ ತಾಯಿಯಾಗಿದ್ದಾಳೆ. ಗಂಡನಿದ್ರೂ ತನಗಿಂತ 16 ವರ್ಷದ ಚಿಕ್ಕವನಾದ ಲಲಿತ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹುಸೇನ್‌ಪುರ ಎಂಬ ಗ್ರಾಮ ದಲ್ಲಿ ಈ ಘಟನೆ ನಡೆದಿದೆ. ಆರತಿ ಮತ್ತು ಲಲಿತ್ ಒಂದೇ ಗ್ರಾಮದ ನಿವಾಸಿಗಳಾಗಿದ್ದರು.
35
ಓಡಿ ಹೋಗಿದ್ರು
ಇಬ್ಬರ ಸಂಬಂಧ ತುಂಬಾ ದಿನಗಳವರೆಗೆ ರಹಸ್ಯವಾಗಿತ್ತು. ಈ ವಿಷಯ ಗ್ರಾಮದಲ್ಲಿ ಎಲ್ಲರಿಗೂ ತಿಳಿಯುತ್ತಿದ್ದಂತೆ ಅಕ್ಟೋಬರ್ 10ರಂದು ಆರತಿ ಮತ್ತು ಲಲಿತ್ ಓಡಿ ಹೋಗಿದ್ದರು. ಆರತಿ ಕಾಣದಿದ್ದಾಗ ಪತಿ ಜಗಮೋಹನ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗ್ರಾಮದ ಲಲಿತ್ ಎಂಬ ಯುವಕ ಪತ್ನಿಯನ್ನು ಅಪಹರಿಸಿದ್ದಾನೆ ಎಂದು ಜಗಮೋಹನ್ ಆರೋಪಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಗ್ರಾಮದಿಂದ ಪಲಾಯನ ಆಗಿದ್ದ ಲಲಿತ್ ಮತ್ತು ಆರತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಗಂಡನೊಂದಿಗೆ ಹೋಗುವುದಾಗಿ ಆರತಿ ಹೇಳಿದ್ದಳು. ನಂತರ ಜಗಮೋಹನ್ ಪತ್ನಿ ಆರತಿಯನ್ನು ಕರೆದುಕೊಂಡು ಹೋಗಿದ್ದನು. ಇಷ್ಟೆಲ್ಲಾ ಆದ್ರೂ ಆರತಿ ಮಾತ್ರ ಲಲಿತ್ ಜೊತೆಗಿನ ಸಂಬಂಧವನ್ನು ರಹಸ್ಯವಾಗಿಯೇ ಮುಂದುವರಿಸಿದ್ದಳು.
ಸೋಮವಾರ ಹುಸೇನ್‌ಪುರ ಗ್ರಾಮದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಎಲ್ಲರೂ ದೀಪಾವಳಿ ಸಂಭ್ರಮದಲ್ಲಿರುವಾಗ ಲಲಿತ್ ಜೊತೆ ಆರತಿ ಮತ್ತೊಮ್ಮೆ ಗ್ರಾಮದಿಂದ ಜೂಟ್ ಆಗಿದ್ದರು. ಆರತಿ ಮತ್ತು ಲಲಿತ್ ಕಾಣದಿದ್ದಾಗ ಸ್ಥಳೀಯರು ಮತ್ತು ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಕೂಡಲೇ ಇಬ್ಬರನ್ನು ಬಿಜ್ನೋರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ಇಬ್ಬರು ವಿಷ ಸೇವಿಸಿದ್ರು ಎಂಬುದರ ಬಗ್ಗೆ ವರದಿಯಾಗಿದೆ.