ಒಂದು ಸ್ಫೂರ್ತಿಯ ಕತೆ.. 116ರ ಹರೆಯದಲ್ಲಿ ತಿರುಮಲದ 3,550 ಮೆಟ್ಟಿಲು ಹತ್ತಿದ ಕರ್ನಾಟಕದ ಅಜ್ಜಿ!

Published : Jul 04, 2026, 06:08 PM IST

ಕರ್ನಾಟಕದ 116 ವರ್ಷದ ಲಕ್ಷ್ಮವ್ವ ಎಂಬ ಅಜ್ಜಿಯೊಬ್ಬರು, ಇಳಿವಯಸ್ಸಿನಲ್ಲೂ ದೈಹಿಕ ದೌರ್ಬಲ್ಯವನ್ನು ಮೀರಿ ತಿರುಮಲದ 3,550 ಮೆಟ್ಟಿಲುಗಳನ್ನು ಹತ್ತಿದ್ದಾರೆ.  'ಗೋವಿಂದ' ನಾಮಸ್ಮರಣೆಯೊಂದಿಗೆ ತನ್ನ ಆರಾಧ್ಯ ದೈವದ ದರ್ಶನ ಪಡೆದ ಈ ಅಜ್ಜಿಯ ಅಚಲ ಭಕ್ತಿ ಮತ್ತು ಮನೋಬಲದ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.

PREV
16
ಆರಾಧ್ಯ ದೈವದ ದರ್ಶನ

ವಯಸ್ಸು 60 ದಾಟುತ್ತಿದ್ದಂತೆ ಮಂಡಿ ನೋವು, ಆಯಾಸ, ದೈಹಿಕ ದೌರ್ಬಲ್.. ಅಯ್ಯೋ, ಗೋಳು ಅಂತಾ ಬಹುತೇಕರು ವಿಶ್ರಾಂತಿ ಬಯಸುತ್ತಾರೆ.ಇನ್ನು ಕೆಲವರು ಹತ್ತು ಹೆಜ್ಜೆ ನಡೆಯಲು ಪರದಾಡುತ್ತಾರೆ. ಇಂತಹ ಕಾಲಘಟ್ಟದಲ್ಲಿ 116 ವರ್ಷದ ವೃದ್ಧೆಯೊಬ್ಬರು ತೋರಿದ ಮನೋಬಲ ಮತ್ತು ಅಚಲ ಭಕ್ತಿಗೆ ದೇಶವೇ ಬೆರಗಾಗುವಂತೆ ಮಾಡಿದೆ. ಹೌದು, ಕರ್ನಾಟಕದ ಅಜ್ಜಿಯೊಬ್ಬರು ಇಳಿವಯಸ್ಸಿನಲ್ಲೂ ತಿರುಮಲದ ಕಡಿದಾದ ಮೆಟ್ಟಿಲುಗಳನ್ನು ಹತ್ತಿ ತನ್ನ ಆರಾಧ್ಯ ದೈವದ ದರ್ಶನ ಪಡೆದಿದ್ದಾರೆ!

26
ಯಾರು ಈ ಸ್ಫೂರ್ತಿಯ ಚಿಲುಮೆ?

ಕರ್ನಾಟಕದ ಮೂಲದ ಲಕ್ಷ್ಮವ್ವ (ಇವರನ್ನು ಭೀಮವ್ವ ಎಂದೂ ಕರೆಯುತ್ತಾರೆ) ಅವರಿಗೆ ಈಗ ಬರೋಬ್ಬರಿ 116 ವರ್ಷ. ಕುಟುಂಬದ ಸದಸ್ಯರ ಪ್ರಕಾರ ಇವರು ಶತಾಯುಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆಧುನಿಕ ಜೀವನಶೈಲಿಯ ಅಬ್ಬರವಿಲ್ಲದ ಕಾಲದಲ್ಲಿ ಹುಟ್ಟಿ ಬೆಳೆದ ಇವರಲ್ಲಿ ಇಂದಿಗೂ ಯುವಕರಿಗೂ ನಾಚಿಸುವಂತಹ ಶಕ್ತಿಯಿದೆ. ಇವರು ಎಲ್ಲಿಯವರು ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಖತ್ ವೈರಲ್ ಆಗ್ತಿದೆ.

36
3,550 ಮೆಟ್ಟಿಲು ಹತ್ತಿದ 'ಮಹಾತಾಯಿ'

ಸಾಮಾನ್ಯವಾಗಿ ತಿರುಮಲಕ್ಕೆ ಹೋಗುವ ಭಕ್ತರು ಬಸ್ ಅಥವಾ ಕಾರಿನ ಮೊರೆ ಹೋಗುತ್ತಾರೆ. ನಡೆಯುವ ದಾರಿಯನ್ನು ಆರಿಸಿಕೊಂಡವರೂ ಅರ್ಧಕ್ಕೆ ಸುಸ್ತಾಗಿ ಕುಳಿತುಬಿಡುತ್ತಾರೆ. ಆದರೆ, ಭೀಮವ್ವ ಅವರು ಅಲಿಪಿರಿ ಕಾಲ್ನಡಿಗೆ ಮಾರ್ಗವನ್ನು ಆರಿಸಿಕೊಂಡರು. ಸುಮಾರು 3,550 ಮೆಟ್ಟಿಲುಗಳಿರುವ ಈ ದಾರಿಯನ್ನು ಅವರು ಯಾರ ಸಹಾಯವೂ ಇಲ್ಲದೆ, ಕೇವಲ ಒಂದು ಕೋಲಿನ ಆಸರೆಯಿಂದ ಹತ್ತಿ ಮುಗಿಸಿದ್ದಾರೆ. ಪ್ರತಿ ಮೆಟ್ಟಿಲು ಏರುವಾಗಲೂ ಅವರ ಬಾಯಲ್ಲಿ ಕೇಳಿಬರುತ್ತಿದ್ದುದು ಒಂದೇ ಮಂತ್ರ: 'ಗೋವಿಂದ... ಗೋವಿಂದ...'

46
ಭಕ್ತರಲ್ಲಿ ಮೂಡಿದ ಅಚ್ಚರಿ

ಅಜ್ಜಿಯ ಸಾಹಸ ಕಂಡ ಸಹಯಾತ್ರಿಕರು ದಬ್ಬೇಬಕ್ಕಾಗಿದ್ದಾರೆ. ಎಷ್ಟೋ ಯುವಕರು ಆಯಾಸಗೊಂಡು ಮೆಟ್ಟಿಲುಗಳ ಮೇಲೆ ಕುಳಿತಿದ್ದರೆ, ಈ ಅಜ್ಜಿ ಮಾತ್ರ ಲವಲವಿಕೆಯಿಂದ ಸಾಗುತ್ತಿದ್ದುದು ಕಂಡು ಎಲ್ಲರೂ ಭಕ್ತಿಯಿಂದ ಕೈಮುಗಿದರು. ಇದು ಕೇವಲ ದೈಹಿಕ ಶಕ್ತಿಯಲ್ಲ, ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿರುವ ದೃಢವಾದ ಭಕ್ತಿಯೇ ಇವರನ್ನು ಮುನ್ನಡೆಸಿದೆ ಎಂದು ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

56
ನಮಗೆಲ್ಲರಿಗೂ ಒಂದು ಪಾಠ

ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಭೀಮವ್ವ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನನ್ನಿಂದ ಇದು ಸಾಧ್ಯವಿಲ್ಲ ಎಂದು ಹತಾಶರಾಗುವವರಿಗೆ ಈ ಅಜ್ಜಿ ಒಂದು ಜೀವಂತ ಸ್ಫೂರ್ತಿ. ಮನಸ್ಸಿನಲ್ಲಿ ದೃಢ ಸಂಕಲ್ಪವಿದ್ದರೆ ಮತ್ತು ಗುರಿಯ ಮೇಲೆ ನಂಬಿಕೆಯಿದ್ದರೆ ಎಂತಹ ಕಷ್ಟದ ಹಾದಿಯನ್ನೂ ಸುಲಭವಾಗಿ ಕ್ರಮಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ.

66
ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಶರೀರಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಬಾರದು ಎಂಬ ಮಾತಿನಂತೆ, ಭೀಮವ್ವ ಅವರ ತಿರುಮಲ ಯಾತ್ರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾವಿರಾರು ಜನರಿಗೆ ಸ್ಫೂರ್ತಿ ನೀಡುತ್ತಿದೆ. ಇಂದಿನ ಪೀಳಿಗೆಯವರು ಈ ಅಜ್ಜಿಯ ಆರೋಗ್ಯದ ರಹಸ್ಯ ಮತ್ತು ಅಚಲವಾದ ವಿಶ್ವಾಸದಿಂದ ಕಲಿಯುವುದು ಬಹಳಷ್ಟಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories