ಟಾಲ್ಕಮ್ ಪೌಡರ್ ಮುಖಕ್ಕೆ ಮಾತ್ರವಲ್ಲ ಹೀಗೂ ಬಳಸಬಹುದು

First Published | Feb 24, 2021, 5:44 PM IST

ಟಾಲ್ಕಮ್ ಪೌಡರ್ ಇದರ ಆಪ್ತತೆ ನಮ್ಮೆಲ್ಲರಲ್ಲೂ ಇದೆ ಅಂದರೆ ಸುಳ್ಳಾಗದು.  ನೆನಪಿರಬಹುದು ಎಂಭತ್ತು ,ತೊಂಭತ್ತರ ದಶಕಗಳಲ್ಲಿ ನಮ್ಮ ಅಜ್ಜಿ, ಅಮ್ಮ, ಅತ್ತೆ, ನಮ್ಮ ಸುತ್ತಮುತ್ತಲಿನವರು ಪರಿಮಳಭರಿತವಾದ ಟಾಲ್ಕಮ್ ಪೌಡರ್ ಬಳಸುತ್ತಿದ್ದರು ಅದರ ಸುವಾಸನೆ ಶ್ರೀಗಂಧ, ಲೆಮನ್, ಲ್ಯಾವೆಂಡರ್, ರೋಸ್, ಜಾಸ್ಮಿನ್, ಹೀಗೆ ಇದರ ಬಳಕೆಯನ್ನು ಸ್ನಾನದ ಬಳಿಕ ಮಾಡುತ್ತಿದ್ದರು. ಆ ಪರಿಮಳವನ್ನು ನಾವು ಒಮ್ಮೊಮ್ಮೆ ಆಸ್ವಾಧಿಸಿ ನಗುತ್ತಿದ್ದೆವು.

ಹೆಂಗಸರು ತಮ್ಮ ಸಾಮಾನುಗಳ ಪಟ್ಟಿಯಲ್ಲಿ ಟಾಲ್ಕಮ್ ಪೌಡರ್ ನ ಹೆಸರನ್ನು ಬರೆಯಲು ಮರೆಯುತ್ತಿರಲಿಲ್ಲ . ಬೇರೆಬೇರೆ ಪರಿಮಳದ ಟಾಲ್ಕಮ್ ಪೌಡರ್ ಅನ್ನು ಒಂದೇ ಮನೆಯ ಸದಸ್ಯರು ಬಳಸುತ್ತಿದ್ದರು . ಸಮಯ ಮುಂದೆ ಹೋದ ಹಾಗೆ ಡಿಯೋ, ಪರ್ಫ್ಯೂಮ್ ಗಳ ಬಳಕೆ ಪ್ರಾರಂಭವಾದರೂ ಟಾಲ್ಕಮ್ ಪೌಡರ್ ಬಳಸುವವರ ಸಂಖ್ಯೆ ಕಡಿಮೆ ಆಗಿಲ್ಲ. ಅದರ ಬಳಕೆ ಮಾಡುವವರು ಇನ್ನು ಇದ್ದಾರೆ. ಈ ಟಾಲ್ಕಮ್ ಪೌಡರ್ ಅನ್ನು ಕೇವಲ ಸೌಂದರ್ಯ ವರ್ಧಕವಾಗಿ ಉಪಯೋಗಿಸದೆ ಇದರಲ್ಲಿ ಹಲವು ಸಮಸ್ಯೆ ನಿವಾರಣೆ ಮಾಡುವ ಗುಣವು ಇದೆ ಎಂಬುವುದನ್ನು ಮರೆಯಬೇಡಿ .
1. ಮುಖದಲ್ಲಿ ಜಿಡ್ಡಿನ ಅಂಶ ಹೆಚ್ಚಿದ್ದರೆ ಟಾಲ್ಕಮ್ ಪೌಡರ್ ಬಳಕೆ ಮಾಡಿದಾಗ ಇದು ಜಿಡ್ಡನ್ನು ಹೀರಿ ಮುಖದ ಚರ್ಮ ಒಣಗಿಸಿ, ಮೃದುತ್ವವನ್ನು ನೀಡುತ್ತದೆ.
Tap to resize

2. ಬೆವರಿನಿಂದ ಆಗುವ ಫಂಗಲ್ ಇನ್ಫೆಕ್ಷನ್ ಇವುಗಳಿಗೆ ಟಾಲ್ಕಮ್ ಪೌಡರ್ ಬಳಕೆ ಬಹಳ ಪರಿಣಾಮಕಾರಿಯಾಗಿದೆ .
3.ಜಾಗಿಂಗ್ ಹೋಗುವಾಗ ಬೆವರಿನಿಂದಾಗಿ ತೊಡೆ ಅಥವಾ ಪಾದ ಒದ್ದೆಯಾಗಿ ಇರಿಟೇಶನ್ ಆಗುತ್ತಿದ್ದರೆ, ಜಾಗಿಂಗ್ ಹೋಗುವ ಮೊದಲು ತೊಡೆಗೆ ಮತ್ತು ಪಾದಗಳಿಗೆ ಟಾಲ್ಕಮ್ ಪೌಡರ್ ಬಳಸಿ ಬೆವರಿನಿಂದ ಆಗುವ ಅರಚುವಿಕೆ ಮಾಯವಾಗುತ್ತದೆ.
4. ಶೂ ಗಳಲ್ಲಿ ವಾಸನೆ ಬರುತ್ತಿದ್ದರೆ ಸ್ವಲ್ಪ ಟಾಲ್ಕಮ್ ಪೌಡರ್ ಅನ್ನು ಶೂ ಒಳಗೆ ಉದುರಿಸಿ ಅದರಿಂದ ಬರುವ ವಾಸನೆ ಮಾಯವಾಗುತ್ತದೆ.
5. ಗಂಡಸರು ಗಡ್ಡ ತೆಗೆದ ಬಳಿಕ ಬೇಬಿ ಪೌಡರ್ ಬಳಸುವುದರಿಂದ ಆಫ್ಟರ್ ಶೇವ್ ಹಾಗೆ ಕೆಲಸ ಮಾಡುತ್ತದೆ.
6. ಹೆಂಗಸರು ಕೂಡ ಕಾಲಿನ ಕೂದಲು ತೆಗೆದ ಬಳಿಕ ಟಾಲ್ಕಮ್ ಪೌಡರ್ ಅನ್ನು ಕಾಲಿಗೆ ಹಚ್ಚಿದರೆ ಚರ್ಮ ನಯವಾಗಿ ಮೃದುವಾಗಿ ಇರುತ್ತದೆ. ಅಲ್ಲದೆ ಯಾವುದೇ ಕಿರಿಕಿರಿ ಇರುವುದಿಲ್ಲ.
7 . ವಾಕ್ಸಿಂಗ್ ಮಾಡುವಾಗ ಟಾಲ್ಕಮ್ ಪೌಡರ್ ಬಳಕೆ ಮಾಡುತ್ತಾರೆ . ಇದರಿಂದ ಕೂದಲನ್ನು ತೆಗೆಯಲು ಸುಲಭವಾಗುತ್ತದೆ ಅಲ್ಲದೆ ಯಾವುದೇ ಕಿರಿಕಿರಿ ಇರುವುದಿಲ್ಲ.
8. ಬಟ್ಟೆ ಗಳಲ್ಲಿ ಗ್ರೀಸ್ ಕಲೆಯಾಗಿದ್ದರೆ ಆ ಜಾಗಕ್ಕೆ ಸ್ವಲ್ಪ ಟಾಲ್ಕಮ್ ಪೌಡರ್ ಹಚ್ಚಿ ತಿಕ್ಕಿ ಕಲೆ ಇದ್ದ ಜಾಗ ಅಷ್ಟಾಗಿ ಕಾಣಿಸುವುದಿಲ್ಲ.
9 . ಬಟ್ಟೆ ಇಡುವ ಕಪಾಟುಗಳಲ್ಲಿ ಬಟ್ಟೆ ಫ್ರೆಶ್ ಆಗಿರಬೇಕೆಂದರೆ ಟಾಲ್ಕಮ್ ಪೌಡರ್ ಅನ್ನು ಸ್ವಲ್ಪ ಹಾಕಿ ಪರಿಮಳ ಬರುತ್ತದೆ ಅಲ್ಲದೆ ಫ್ರೆಶ್ ಆಗಿವು ಇರುತ್ತದೆ.

Latest Videos

click me!