ಪ್ರತಿದಿನ ಸ್ನಾನ ಮಾಡದೇ ಇರುವವರು ಭಾರತೀಯರಲ್ಲಿ ತೀರ ಕಡಿಮೆ.
ಹೀಗೆ ದಿನಾ ಸ್ನಾನ ಮಾಡೋದು ನಮ್ಮ ಹೃದಯಕ್ಕೆ ಬಹಳ ಒಳ್ಳೆಯದು ಅಂತ ಇದೀಗ ಸಂಶೋಧಕರು ಹೇಳಿದ್ದಾರೆ.
ನಿತ್ಯ ಸ್ನಾನ ಮಾಡೋದರಿಂದ ಸ್ಟ್ರೋರ್ಕ್, ಹಾರ್ಟ್ ಅಟ್ಯಾಕ್ ಆಗಿ ಸಾವು ಸಂಭವಿಸುವುದೂ ಕ್ಷೀಣಿಸುತ್ತೆ ಅಂತಾರವರು.
ಇದರ ಜೊತೆಗೆ ಟಬ್‌ನಲ್ಲಿ ಸ್ನಾನ ಮಾಡೋದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಅಷ್ಟಾಗಿ ಬರೋದಿಲ್ಲ
ಹೈಪರ್ ಟೆನ್ಶನ್‌ನಂಥಾ ಹೃದಯ ರೋಗಕ್ಕೆ ಪೂರಕವಾಗುವ ಸಮಸ್ಯೆಗಳು ನಿತ್ಯದ ಎರಡು ಸಲ ಟಬ್‌ನಲ್ಲಿ ಸ್ನಾನ ಮಾಡೋದರಿಂದ ಕಡಿಮೆಯಾಗುತ್ತವೆ
ಚೆನ್ನಾಗಿ ಸ್ನಾನ ಮಾಡಿದರೆ ನಿದ್ರೆಯೂ ಚೆನ್ನಾಗಿ ಬರುತ್ತದೆ.
ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು
ಹೀಗಾಗಿ ನಿಮ್ಮ ನಿತ್ಯದ ಸ್ನಾನದ ಬಗ್ಗೆ ಹೆಮ್ಮೆ ಪಡಿ.
ನೀರಿನ ಸಮಸ್ಯೆ ಇಲ್ಲದೇ ಹೋದರೆ ದಿನಕ್ಕೆ ಎರಡು ಬಾರಿ ಹೆಚ್ಚು ಸೋಪು ಬಳಸದೇ ಸ್ನಾನ ಮಾಡಿದರೆ ಇನ್ನೂ ಉತ್ತಮ.
Suvarna News