ಗೋಧಿ, ಮೈದಾ... ಇವೆರಡರಲ್ಲಿ ಅರೋಗ್ಯಕ್ಕೆ ಯಾವುದು ಒಳಿತು?

Suvarna News   | Asianet News
Published : Nov 20, 2020, 02:11 PM IST

ಪ್ರಪಂಚದಾದ್ಯಂತ ಅತೀ ಹೆಚ್ಚು ಬೆಳೆಯುವ ಹಾಗು ಉಪಯೋಗಿಸುವ ಧಾನ್ಯ ಗೋಧಿ. ಏಕದಳ ಧಾನ್ಯಕ್ಕೆ ಸೇರಿರುವ ಗೋಧಿಯಲ್ಲಿ ಅನೇಕ ವಿಧಗಳಿವೆ. ಬೇರೆ ಬೇರೆ ದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ. ಇದರಲ್ಲಿ ಮುಖ್ಯವಾಗಿ 6 ವಿಧಗಳಿವೆ. ಕಾಮನ್ ವೀಟ್ ಅಥವಾ ಬ್ರೆಡ್ ವೀಟ್, ಸ್ಪೆಲ್ಟ್, ದುರುಮ್, ಖೋರಸಂ, ಇಂಕೊರಾನ್, ಎಮರ್ ಇವು ಮುಖ್ಯ ವಿಧಗಳಾಗಿವೆ. ಅಕ್ಕಿ, ಜೋಳ ಬಿಟ್ಟರೆ ಅತೀ ಹೆಚ್ಚು ಪ್ರೊಟೀನ್ ಇರುವ ಆಹಾರ ಗೋಧಿ.

PREV
110
ಗೋಧಿ, ಮೈದಾ... ಇವೆರಡರಲ್ಲಿ ಅರೋಗ್ಯಕ್ಕೆ ಯಾವುದು ಒಳಿತು?

ಗೋಧಿಯಲ್ಲಿ ಪೌಷ್ಟಿಕಾಂಶ ಅಧಿಕವಾಗಿರುವುದರಿಂದ ಇದರ ಉಪಯೋಗ ಆಹಾರದಲ್ಲಿ ಅತೀ ಅವಶ್ಯಕ. ಇದರಲ್ಲಿ ಹೆಚ್ಚು ನಾರಿನ ಅಂಶಗಳಿವೆ. ಹಾಗಾಗಿ ಇದನ್ನು ಡಯಟರಿ ಪುಡ್ ಆಗಿ ಉಪಯೋಗಿಸುತ್ತಾರೆ.

210

ಬ್ರೆಡ್ ವೀಟ್ ಅಥವಾ ಕಾಮನ್ ವೀಟ್ ಅನ್ನು ಪ್ರಪಂಚದಾದ್ಯಂತ ಶೇಕಡಾ 95 % ಬೆಳೆಸುತ್ತಾರೆ. ಗೋಧಿಯಲ್ಲಿರುವ ವಿಟಮಿನ್, ಮಿನರಲ್, ಫೈಬರ್, ಆಂಟಿಓಕ್ಸಿಡೆಂಟ್, ಪೊಟ್ಯಾಸಿಯಂ, ಮೆಗ್ನೇಶಿಯಂ ಹೇರಳವಾಗಿದೆ. 

310

ಗೋಧಿಯಲ್ಲಿ 340 gm ಕ್ಯಾಲೋರಿ ಇದೆ . 11 % ನೀರು, 13.2 gm ಪ್ರೊಟೀನ್, ಕಾರ್ಬ್ 72 gm , ಶುಗರ್ 0.4 %, ಫೈಬರ್ 10.7 gm, ಫ್ಯಾಟ್ 2.5 gm. ಆರೋಗ್ಯದ ದೃಷ್ಟಿಯಿಂದ  ಬಿಳಿ ಗೋಧಿ ಒಳ್ಳೆಯದಲ್ಲ. ಕೆಲವರು ಗೋಧಿಯಲ್ಲಿರುವ ಗ್ಲುಟಿನ್ ಜೀರ್ಣ ಕ್ರಿಯೆಗೆ ಒಳ್ಳೆಯದಲ್ಲ ಎನ್ನುತ್ತಾರೆ. 

410

ಪೂರ್ತಿಯಾದ ಗೋಧಿ ಅಂದರೆ ಪಾಲಿಶ್ ಮಾಡದ ಹೊಟ್ಟು ತೆಗೆಯದ ಗೋಧಿ ದೇಹಕ್ಕೆ ಬಹಳ ಒಳ್ಳೆಯದು. ಇದು ಬಹಳ ಪೌಷ್ಟಿಕತೆಯಿಂದ ಕೂಡಿದ್ದು ಜೀರ್ಣಕ್ರಿಯೆಗೆ ಒಳ್ಳೆಯದು. ಇಂತಹ ಗೋಧಿಯ ಉಪಯೋಗ ಮಕ್ಕಳಲ್ಲಿ ಮಲಬದ್ಧತೆ ಕಡಿಮೆ ಮಾಡುತ್ತದೆ. ಅಲ್ಲದೆ ಜೀರ್ಣಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. 

510

ಗೋಧಿಯನ್ನು ಮಿಲ್ಲಿನಲ್ಲಿ ಹುಡಿ ಮಾಡಲಾಗುತ್ತದೆ. ನಂತರ ಇದನ್ನು ನಂತರದ ಆಹಾರಗಳಲ್ಲಿ ಉಪಯೋಗಿಸುತ್ತಾರೆ. ಅವುಗಳು ಬ್ರೆಡ್, ನೂಡಲ್ಸ್, ಪಾಸ್ತಾ, ಪೇಸ್ಟ್ರಿಸ್, ಕೂಕಿಸ್, ಬಿಸ್ಕಿಟ್, ಸ್ವೀಟ್, ತಿಂಡಿ, ಚಪಾತಿ ಹೀಗೆ ಅನೇಕ ವಿಧದ ಆಹಾರಗಳಲ್ಲಿ ಉಪಯೋಗಿಸುತ್ತಾರೆ. 

610

ಗೋಧಿಯನ್ನು ತಿನ್ನೋದರಿಂದ ತೂಕ ಹೆಚ್ಚಾಗುವುದಿಲ್ಲ. ಅದರಲ್ಲಿ ಇರುವ ಕ್ಯಾಲೋರಿ ನಮ್ಮ ದೇಹಕ್ಕೆ ಬೇಕಿರುವಂತದ್ದು . ಅದರ ಜೊತೆ ಹೆಚ್ಚು ತರಕಾರಿ, ಹಣ್ಣುಗಳನ್ನು ತಿನ್ನಬೇಕು. 

710

ಮಧುಮೇಹಿಗಳಿಗೆ ಗೋಧಿಯ ಆಹಾರ ಬಹಳ ಒಳ್ಳೆದು. ಅಕ್ಕಿಯಲ್ಲಿರುವ ಗ್ಲೈಸಮಿಕ್, ಸಕ್ಕರೆ ಅಂಶವನ್ನು ರಕ್ತದಲ್ಲಿ ಒಮ್ಮೆಲೇ ಹೆಚ್ಚಿಸುತ್ತದೆ. ಹಾಗಾಗಿ ಚಪಾತಿ ಮಧುಮೇಹಿಗಳಿಗೆ ಬಹಳ ಒಳ್ಳೇದು. 

810

ಚಳಿಗಾಲ ಮತ್ತು ವಸಂತ ಕಾಲದ ಬೆಳೆ ಎಂದು 2 ಮುಖ್ಯ ವಿಧವಾಗಿ ಗೋಧಿಯನ್ನು ಪರಿಗಣಿಸಿದ್ದಾರೆ. ಚಳಿಗಾಲದ ಗೋಧಿಯನ್ನು ಶರತ್ಕಾಲದಲ್ಲಿ ಬಿತ್ತನೆ ಮಾಡಿ ಪಡೆಯುತ್ತಾರೆ. ವಸಂತಕಾಲ ಗೋಧಿಯನ್ನು ವಸಂತಕಾಲದಲ್ಲಿ ಬಿತ್ತನೆ ಮಾಡಿ ಬೆಳೆ ತೆಗೆಯುತ್ತಾರೆ.

910

ಯಾವುದೇ ರೀತಿಯ ಕೀಟನಾಶಕ ರಸಗೊಬ್ಬರ ಬಳಸದೆ ಸಾವಯವ ಕ್ರಮದಲ್ಲಿ ಬೆಳೆಸಿದ ಗೋಧಿ ಆರೋಗ್ಯಕ್ಕೆ ಬಹಳ ಉತ್ತಮ. ಇದನ್ನು ಬಹಳ ಕಾಲ ಶೇಖರಿಸಿ ಇಡಬಹುದು. 
ಮೈದಾ ಗೋಧಿಯಿಂದ ಮಾಡಿದರು . ಮೈದಾವು ಸಂಸ್ಕರಿಸಿದ ಹಿಟ್ಟು ಹಾಗಾಗಿ ಇದು ಬಹಳ ನಾಜೂಕು ಮತ್ತು ಮೆತ್ತಗೆ ಇರುತ್ತದೆ. 

1010

ಮೈದಾ ಸೇವನೆ ದೇಹದಲ್ಲಿ ತೂಕ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಮಧುಮೇಹಿಗಳಿಗೆ ಇದು ಒಳ್ಳೆಯದಲ್ಲ. ಇದರ ಸೇವನೆ ಅತಿಯಾದರೆ ಆರೋಗ್ಯದಲ್ಲಿ ಏರುಪೇರು ಆಗುವ ಸಾದ್ಯತೆ ಹೆಚ್ಚು. ಹಾಗಾಗಿ ಗೋಧಿಯ ಉಪಯೋಗ ಬಹಳ ಒಳ್ಳೆಯದು.

click me!

Recommended Stories