ಕೆಲವೊಮ್ಮೆ ನಮಗೆ ಅತಿಯಾಗಿ ಕೋಪ ಬಂದಾಗ, ತಡೆಯಲಾರದೆ ಕಣ್ಣೀರು ಬರುತ್ತೆ. ಆ ಕ್ಷಣದಲ್ಲಿ, ನಾವು ಏಕೆ ಅಳುತ್ತಿದ್ದೇವೆ ಅನ್ನೋದು ನಮಗೆ ಅರ್ಥ ಆಗೋದಿಲ್ಲ. ಕೋಪಗೊಂಡ ಕಣ್ಣುಗಳಿಂದ ಗಂಗಾ-ಯಮುನಾ ಹರಿಯಲು ಪ್ರಾರಂಭಿಸುತ್ತದೆ. ಇದು ಯಾರಿಗೂ ವಿವರಿಸಲು ಸಾಧ್ಯವಾಗದ ಭಾವನೆ.
"ಹೇಯ್, ನೀನು ಕೋಪಗೊಂಡಿದ್ದೆ, ಹಾಗಾದರೆ ಇದ್ದಕ್ಕಿದ್ದಂತೆ ಏಕೆ ಅಳುತ್ತಿರುವೆ? ಎಂದು ಯಾರಾದ್ರೂ ಕೇಳಿದ್ರೆ ಖಂಡಿತಾ ಅದಕ್ಕೆ ಸರಿಯಾದ ಉತ್ತರ ಇಲ್ಲ. ಆದರೆ ಇದು ಹೆಚ್ಚಿನ ಜನರಿಗೆ ಸಂಭವಿಸುತ್ತೆ. ತೀವ್ರ ಕೋಪದ ಮಧ್ಯೆ ಕಣ್ಣುಗಳಿಂದ ಕಣ್ಣೀರು (tears in eyes) ಬರಲು ಪ್ರಾರಂಭಿಸಿದಾಗ, ಅದು ಗೊಂದಲಮಯ ಮತ್ತು ಹೆಚ್ಚು ನೋವಿನಿಂದ ಕೂಡಿರುತ್ತದೆ. ಆ ಸಮಯದಲ್ಲಿ ನಾವು ನಮ್ಮ ದೇಹವನ್ನು ಅರ್ಥಮಾಡಿಕೊಳ್ಳುವುದಿಲ್ಲ.
ಹಾಗಿದ್ರೆ ಕೋಪಗೊಂಡಾಗ ಕಣ್ಣಿರು ಯಾಕೆ ಬರುತ್ತೆ? ಕೋಪಗೊಂಡಾಗ, ದೇಹದಲ್ಲಿ ಅನೇಕ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಈ ಕಾರಣದಿಂದಾಗಿ, ಮುಖವು ಕೆಂಪಾಗುತ್ತದೆ, ಬೆವರಲು ಪ್ರಾರಂಭಿಸುತ್ತದೆ, ಜೊತೆಗೆ ಕಣ್ಣಲ್ಲಿ ನೀರು ಸಹ ಬರುತ್ತೆ. ಇದು ಒಂದು ರೀತಿಯ ಪ್ರತಿಕ್ರಿಯೆ. ಅಳುವುದು ಕೋಪವನ್ನು ಶಾಂತಗೊಳಿಸುತ್ತದೆ ಮತ್ತು ಒಂದು ರೀತಿಯಲ್ಲಿ ಅದು ಕೋಪವನ್ನು ದುರ್ಬಲಗೊಳಿಸುತ್ತದೆ.
ನಾವು ಕೋಪಗೊಂಡಾಗ ಏಕೆ ಅಳುತ್ತೇವೆ?: ಸಹೋದರನೊಂದಿಗೆ ಜಗಳವಾಡುವಾಗ ಅಥವಾ ಸ್ನೇಹಿತನ ಬಗ್ಗೆ ಅಸಮಾಧಾನಗೊಂಡಿದ್ದರೆ ಆವಾಗ ಕೋಪ ಬಂದಾಗ ನಾವು ಅಳುತ್ತೇವೆ. ನಾವು ಈ ಭಾವನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಇದಕ್ಕೆ ಒಂದು ಸರಳ ಕಾರಣವೆಂದರೆ ನಮಗೆ ನೋವಾದಾಗ, ಕೋಪದಲ್ಲೂ ನಾವು ಅಳಲು (crying when angry) ಪ್ರಾರಂಭಿಸುತ್ತೇವೆ.
ಅನೇಕ ಬಾರಿ ನಾವು ಏನನ್ನೂ ಹೇಳಲು ಸಾಧ್ಯವಾಗೋದಿಲ್ಲ ಮತ್ತು ಕೋಪದಿಂದ ಅಳಲು ಪ್ರಾರಂಭಿಸುತ್ತೇವೆ. ಇದಕ್ಕೆ ಕೆಲವೊಂದು ಕಾರಣಗಳು ಹೀಗೂ ಇರಬಹುದು..
ಸಾಮಾಜಿಕ ನಿರೀಕ್ಷೆಗಳು: ಸಮಾಜವು ನಿಗದಿಪಡಿಸಿದ ಮಾನದಂಡಗಳು ನಾವು ನಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ಈ ಒತ್ತಡದಿಂದಾಗಿ ಅನೇಕ ಬಾರಿ, ನಾವು ಕೋಪಗೊಳ್ಳುತ್ತೇವೆ ಮತ್ತು ಅಳಲು ಪ್ರಾರಂಭಿಸುತ್ತೇವೆ. ಕೋಪದಿಂದ ಅಳುವುದು ಆ ಸಾಂಪ್ರದಾಯಿಕ ಪ್ರತಿಕ್ರಿಯೆಗಳಿಗೆ ವಿರುದ್ಧವಾಗಿರಬಹುದು, ಆದರೆ ಇದು ವ್ಯಕ್ತಿಯ ಅಧಿಕೃತ ಪ್ರತಿಕ್ರಿಯೆಯನ್ನು ತೋರಿಸುತ್ತದೆ.
ಇಮೋಷನಲ್ ಇಂಟೆನ್ಸಿಟಿ: ಕೋಪವು ಒಂದು ಶಕ್ತಿಯುತ ಭಾವನೆ ಎಂದು ನಿಮಗೆ ತಿಳಿದಿದೆ. ನಾವು ಕೋಪಗೊಂಡಾಗ ನಮ್ಮನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಹತ್ತಿರದವರಿಂದಲೇ ನಾವು ಕೋಪಕ್ಕೆ ಒಳಗಾದರೆ ಆ ಸಂದರ್ಭದಲ್ಲಿ ಕೋಪ ತಡೆಯಲು ಸಾಧ್ಯವಾಗದೇ ಕಣ್ಣೀರು ಬರುತ್ತೆ.
ಕ್ಯಾಥರ್ಸಿಸ್: ಕೋಪಗೊಂಡಾಗ ನಮ್ಮ ಅಳು ಭಾವನೆಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ಭಾವನಾತ್ಮಕ ಬಿಡುಗಡೆಯ ಒಂದು ಭಾಗವಾಗಿದೆ, ನಂತರ ಒತ್ತಡ ಹತಾಶೆ ಕಡಿಮೆಯಾಗುತ್ತೆ. ಮನಸ್ಸಿಗೆ ಸಮಾಧಾನ ಸಿಗುತ್ತೆ.
ಸಂವಹನ: ಕೋಪದಲ್ಲಿ ಅಳುವುದು ನಮ್ಮ ಸುತ್ತಲಿನವರೊಂದಿಗೆ ನಾವು ಹೊಂದಿರುವ ಒಂದು ರೀತಿಯ ಸಂವಹನವಾಗಿದೆ. ಇದು ನಮ್ಮ ಸಮಸ್ಯೆಯನ್ನು ಮುಂದಿಡುತ್ತದೆ. ಕೋಪಗೊಂಡಾಗ ಅಳುವುದು ನಮಗೆ ಗೊತ್ತಿರದೇ ಆಗುವ ಪ್ರತಿಕ್ರಿಯೆ ಇರಬಹುದು, ಆದರೆ ಇದು ಭಾವನಾತ್ಮಕ ಸಂಕಟವನ್ನು ಸೂಚಿಸುತ್ತದೆ.
ಕೋಪದಲ್ಲಿ ಅಳುವುದು ಸಾಮಾನ್ಯವೇ?: ಕೋಪದಲ್ಲಿ ಅಳುವುದು ಸಾಮಾನ್ಯ ಪ್ರತಿಕ್ರಿಯೆ ಮಾತ್ರವಲ್ಲ, ಅನೇಕ ರೀತಿಯಲ್ಲಿ ನಿಮಗೆ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಅಳುವುದು ನಮ್ಮ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಪ್ರೊಲ್ಯಾಕ್ಟಿನ್ ನಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇವು ನಿಮ್ಮ ಹೃದಯ ಬಡಿತವನ್ನು (heart beat) ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.