ಯಾವತ್ತೂ ಈ ಔಷಧ ಚಹಾ, ಕಾಫಿಯೊಂದಿಗೆ ಸೇವಿಸಲೇ ಬೇಡಿ

First Published Mar 31, 2024, 4:09 PM IST

ಚಹಾ ಮತ್ತು ಕಾಫಿಯಲ್ಲಿ ಕಂಡುಬರುವ ಕೆಫೀನ್ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಯಾವುದೇ ಔಷಧಿಯೊಂದಿಗೆ ಸೇವಿಸಿದರೆ, ಕೆಫೀನ್ ದೇಹದಲ್ಲಿ ಆ ಔಷಧಿಯ ಪರಿಣಾಮವನ್ನು ಕಡಿಮೆ ಮಾಡುತ್ತೆ.
 

ಚಹಾ ಮತ್ತು ಕಾಫಿಯನ್ನು ನಮ್ಮ ಜನರು ತುಂಬಾನೇ ಇಷ್ಟಪಡ್ತಾರೆ, ಅದು ಬೆಳಿಗ್ಗೆ ಉಪಾಹಾರ (breakfast), ಸಂಜೆ ತಿಂಡಿ ಅಥವಾ ಊಟದ ವಿರಾಮವಾಗಿರಬಹುದು. ಎಲ್ಲಾ ಸಂದರ್ಭದಲ್ಲೂ ಚಹಾ -ಕಾಫಿ ಬೇಕೇ ಬೇಕು. ಚಹಾ ಕುಡಿಯದೆ, ಜನರ ದಿನವೇ ಆರಂಭವಾಗೋದಿಲ್ಲ. ಇಂತಹ ಸಂದರ್ಭದಲ್ಲಿ ಕೆಲವರು ಔಷಧಗಳನ್ನು ಚಹಾ ಅಥವಾ ಕಫಿ ಜೊತೆ ಸೇವಿಸುತ್ತಾರೆ. ಇದು ಸರಿಯೇ? ತಪ್ಪೇ? ಅನ್ನೋದನ್ನು ತಿಳಿಯೋಣ. 

ಚಹಾ ಮತ್ತು ಕಾಫಿಯೊಂದಿಗೆ (Tea and Coffee) ಔಷಧಿಗಳ ಸೇವನೆಯು ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುವುದಲ್ಲದೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಚಹಾ ಮತ್ತು ಕಾಫಿಯೊಂದಿಗೆ ಯಾವ ರೀತಿಯ ಔಷಧಿಗಳು ಹಾನಿಕಾರಕವಾಗಬಹುದು ಎಂಬುದರ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ನೀವು ತಿಳಿದುಕೊಳ್ಳೋದು ಒಳ್ಳೆಯದು. 
 

ಚಹಾ ಮತ್ತು ಕಾಫಿಯಲ್ಲಿ ಕಂಡುಬರುವ ಕೆಫೀನ್ ಜೀರ್ಣಕ್ರಿಯೆ (digestion)ಮತ್ತು ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವುಗಳನ್ನು ಔಷಧಿಯೊಂದಿಗೆ ಸೇವಿಸಿದರೆ,  ದೇಹದಲ್ಲಿ ಆ ಔಷಧಿಯ ಹೀರಿಕೊಳ್ಳುವಿಕೆ, ವಿತರಣೆ, ಚಯಾಪಚಯ ಮತ್ತು ವಿಸರ್ಜನೆಯ ಮೇಲೆ ಕೆಫೀನ್ ಪರಿಣಾಮ ಬೀರುತ್ತದೆ. ಚಹಾ ಮತ್ತು ಕಾಫಿಯೊಂದಿಗೆ ಯಾವ ಔಷಧಿ ಸೇವಿಸೋದು ಹಾನಿಕಾರಕ ಅನ್ನೋದನ್ನು ತಿಳಿಯೋಣ. 

ಥೈರಾಯ್ಡ್ ಔಷಧಿಗಳು (Thyroid Medicine): ಥೈರಾಯ್ಡ್ ಔಷಧಿಯನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ, ಇದರಿಂದ ಅದು ದೇಹದಲ್ಲಿ ಚೆನ್ನಾಗಿ ಹೀರಲ್ಪಡುತ್ತದೆ. ಆದ್ದರಿಂದ, ಥೈರಾಯ್ಡ್ ಔಷಧಿಯನ್ನು ತೆಗೆದುಕೊಂಡ ಕನಿಷ್ಠ ಒಂದು ಗಂಟೆಯ ನಂತರ ಮಾತ್ರ ಚಹಾ ಮತ್ತು ಕಾಫಿಯನ್ನು ಸೇವಿಸಬೇಕು ಅನ್ನೋದು ನೆನಪಲ್ಲಿರಲಿ. ಇಲ್ಲದಿದ್ದರೆ, ಚಹಾ ಮತ್ತು ಕಾಫಿಯಲ್ಲಿರುವ ಕೆಫೀನ್ ಥೈರಾಯ್ಡ್ ಔಷಧಿಯ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಜೊತೆಗೆ ದೇಹದಲ್ಲಿ ಥೈರಾಯ್ಡ್ ಅಸಮತೋಲನವಾಗುವ ಸಾಧ್ಯತೆ ಇದೆ. 

ಶೀತ ಔಷಧಿ: ಸಾಮಾನ್ಯವಾಗಿ, ಜನರಿಗೆ ಶೀತ ಇದ್ದರೆ ಚಹಾ ಮತ್ತು ಕಾಫಿಯನ್ನು ಹೆಚ್ಚು ಸೇವಿಸುತ್ತಾರೆ, ಆದರೆ, ಶೀತ ಅಥವಾ ಅಲರ್ಜಿಗಳಿಗೆ ಬಳಸುವ ಔಷಧಿಗಳ ಸೇವನೆಯು ಚಹಾ-ಕಾಫಿಯೊಂದಿಗೆ ಬೆರೆತಾಗ ಹಾನಿಕಾರಕವಾಗುತ್ತೆ. ಅಂತಹ ಔಷಧಿಗಳು ಹೆಚ್ಚಾಗಿ ಸೂಡೋಪೆಡ್ರಿನ್ ಅನ್ನು ಹೊಂದಿರುತ್ತವೆ, ಇದು ಕೇಂದ್ರ ನರಮಂಡಲಕ್ಕೆ ಉತ್ತೇಜಕವಾಗಿ ಕಾರ್ಯನಿರ್ವಹಿಸುತ್ತದೆ. ಕೆಫೀನ್ ಚಹಾ ಮತ್ತು ಕಾಫಿಯಲ್ಲಿ ಇರುವ ಉತ್ತೇಜಕ ಅಂಶವಾಗಿದೆ, ಆದ್ದರಿಂದ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಆತಂಕ ಮತ್ತು ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಮಧುಮೇಹ ಔಷಧಿಗಳು: ಚಹಾ-ಕಾಫಿಯೊಂದಿಗೆ ಮಧುಮೇಹ (diabetes) ಔಷಧಿ ಸೇವಿಸೋದು ಹಾನಿಕಾರಕವಾಗಿದೆ. ವಾಸ್ತವವಾಗಿ, ನೀವು ಚಹಾ ಮತ್ತು ಕಾಫಿಗೆ ಸಕ್ಕರೆ ಅಥವಾ ಹಾಲನ್ನು ಸೇರಿಸಿದರೆ, ಅದು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮ ಸಕ್ಕರೆ ಮಟ್ಟವು ಅನಿಯಂತ್ರಿತವಾಗಬಹುದು. ಇದಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿನ ಅಧ್ಯಯನಗಳು ಕೆಫೀನ್ ಮಧುಮೇಹದ ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು ತೋರಿಸುತ್ತದೆ. ಒಟ್ಟಲ್ಲಿ ಮಧುಮೇಹ ಔಷಧಿಗಳೊಂದಿಗೆ ಚಹಾ ಕಾಫಿ ಕುಡಿದ್ರೆ ಸಆರೋಗ್ಯ ಹಾಡಾಗುತ್ತದೆ. 

world alzheimer's day

ಅಲ್ಝೈಮರ್ ಔಷಧೋಪಚಾರ: ನೀವು ಅಲ್ಝೈಮರ್ ಔಷಧಿಗಳನ್ನು (alzheimer medicine) ತೆಗೆದುಕೊಳ್ಳುತ್ತಿದ್ದರೆ, ಅದನ್ನು ಎಂದಿಗೂ ಚಹಾ ಅಥವಾ ಕಾಫಿಯೊಂದಿಗೆ ಸೇವಿಸಬಾರದು ಎಂಬುದನ್ನು ನೆನಪಿಡಿ. ವಾಸ್ತವವಾಗಿ, ಆಲ್ಝೈಮರ್ನ ಔಷಧಿಗಳಾದ ಡೆಡ್ಪೆಗಿಲ್, ರಿವಾಸ್ಟಿಗ್ಮೈನ್ ಮತ್ತು ಗ್ಯಾಲಂಟಮೈನ್ ಕೆಫೀನ್ನಿಂದ ಪ್ರಭಾವಿತವಾಗುತ್ತವೆ. ಇದಲ್ಲದೆ, ಚಹಾ ಮತ್ತು ಕಾಫಿಯಲ್ಲಿರುವ ಕೆಫೀನ್ ಮೆದುಳಿನಲ್ಲಿ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ, ಇದು ಮೆದುಳಿಗೆ ಔಷಧಿಯ ಪ್ರವೇಶವನ್ನು ತಡೆಯುತ್ತದೆ. ಇದರಿಂದ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ. 

ಅಲ್ಝೈಮರ್ನ ಔಷಧಿಗಳು ನರಪ್ರೇಕ್ಷಕ ಅಸಿಟೈಲ್ಕೋಲಿನ್ ಅನ್ನು ರಕ್ಷಿಸಲು ಕೆಲಸ ಮಾಡುತ್ತವೆ ಮತ್ತು ಕೆಫೀನ್ ದೊಡ್ಡ ಪ್ರಮಾಣದಲ್ಲಿ ದೇಹವನ್ನು ತಲುಪಿದಾಗ ಈ ರಕ್ಷಣಾತ್ಮಕ ಪರಿಣಾಮವನ್ನು ದುರ್ಬಲಗೊಳಿಸಬಹುದು. ಇದರಿಂದ ಅಲ್ಝೈಮರ್ ರೋಗಿಗಳ ಸಮಸ್ಯೆ ಹೆಚ್ಚುತ್ತದೆ. 
 

Image: Getty

ಈ ಔಷಧಿಗಳ ಹೊರತಾಗಿ, ರಕ್ತದೊತ್ತಡ, ಅಸ್ತಮಾ, ಆಸ್ಟಿಯೊಪೊರೋಸಿಸ್ ಮತ್ತು ಖಿನ್ನತೆ ವಿರೋಧಿ ಔಷಧಿಗಳನ್ನು ಸಹ ಚಹಾ ಮತ್ತು ಕಾಫಿಯೊಂದಿಗೆ ಸೇವಿಸಬಾರದು. ಆದ್ದರಿಂದ, ನೀವು ಈ ಯಾವುದೇ ಔಷಧಿಗಳನ್ನು ತೆಗೆದುಕೊಂಡರೆ ಮತ್ತು ವಿಶೇಷವಾಗಿ ಆ ಔಷಧಿಯನ್ನು ಬೆಳಿಗ್ಗೆ ಸೇವಿಸಬೇಕಾದರೆ,  ಔಷಧಿ ಕುಡಿದು ಕೆಲ ಸಮಯದ ನಂತರವಷ್ಟೇ ಚಹಾ -ಕಾಫಿ ಕುಡಿಯಿರಿ. ಇಲ್ಲಾಂದ್ರೆ ಸಮಸ್ಯೆ ಹೆಚ್ಚುತ್ತೆ. ಗ್
 

click me!