ಮೂಲಂಗಿ ತಿಂದು ಹಾಲು ಕುಡಿತೀರಾ? ಆ ತಪ್ಪು ಮಾಡ್ಲೇ ಬೇಡಿ

First Published May 27, 2021, 4:41 PM IST

ಕೆಲವು ವಸ್ತುಗಳನ್ನು ಜೊತೆಗೆ ತಿನ್ನುವ ಮೂಲಕ ಅಥವಾ ಒಂದೇ ಸಮಯದಲ್ಲಿ ತಿನ್ನುವುದರಿಂದ ನಮ್ಮ ದೇಹಕ್ಕೆ ಅದು ವಿಷವಾಗುತ್ತದೆ. ಆದ್ದರಿಂದ, ಒಂದೇ ಸಮಯದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ತಿನ್ನುವುದು ಎಷ್ಟು ಅಪಾಯಕಾರಿ ಎಂದು ತಿಳಿಯುವುದು ಬಹಳ ಮುಖ್ಯ. ಆಯುರ್ವೇದದಲ್ಲಿ ಯಾವ ಆಹಾರಗಳನ್ನು ಇನ್ನೊಂದು ಆಹಾರದ ಜೊತೆಗೆ ತಿನ್ನಬಾರದೆಂದು ಸೂಚಿಸಲಾಗಿದೆ, ಇಲ್ಲದಿದ್ದರೆ ಇದರ ಪ್ರತಿಕ್ರಿಯೆಯಿಂದ ಆರೋಗ್ಯವು ಹಾನಿಗೊಳಗಾಗಬಹುದು. 

ಮೂಲಂಗಿಯನ್ನು ಸಲಾಡ್‌ನಂತೆಮತ್ತು ತರಕಾರಿಯಾಗಿಯೂ ಸೇವಿಸಲಾಗುತ್ತದೆ. ಇದರಿಂದ ತಯಾರಿಸಿದ ಪಲ್ಯ ಮತ್ತು ಪರೋಟಗಳು ತುಂಬಾ ರುಚಿಯಾಗಿರುತ್ತವೆ. ಆದರೆ ಮೂಲಂಗಿಸೇವನೆಯು ಇತರ ಅನೇಕ ಆಹಾರಗಳೊಂದಿಗೆ ಸೇವಿಸಿದರೆ ಹಾನಿಕಾರಕಎಂದು ತಿಳಿದಿದೆಯೇ. ಆದ್ದರಿಂದ ಮೂಲಂಗಿಯಿಂದ ದೂರವಿಡಬೇಕಾದ ಕೆಲವು ಆಹಾರಗಳ ಬಗ್ಗೆ ತಿಳಿಯೋಣ. ..
undefined
ಮೂಲಂಗಿಯಲ್ಲಿ ಫೋಲಿಕ್ ಆಸಿಡ್, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಥೋಸಯಾನಿಗಳಂಥಸಾಕಷ್ಟು ಪೋಷಕಾಂಶಗಳಿವೆ. ಇದಲ್ಲದೆ, ಮೂಲಂಗಿಯಲ್ಲಿ ಆಂಟಿ-ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ, ಇದು ಬಾಯಿ, ಹೊಟ್ಟೆ, ಕರುಳು, ಮೂತ್ರಪಿಂಡ, ಮಧುಮೇಹದಿಂದ ಕ್ಯಾನ್ಸರ್‌ವರೆಗಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
undefined
ಸೌತೆಕಾಯಿಗಳೊಂದಿಗೆ ಮೂಲಂಗಿಯನ್ನು ತಿನ್ನಬೇಡಿಜನರು ಹೆಚ್ಚಾಗಿ ಸೌತೆಕಾಯಿ ಮತ್ತು ಮೂಲಂಗಿ ಎರಡನ್ನೂ ಸಲಾಡ್‌ನಲ್ಲಿ ಬಳಸುತ್ತಾರೆ ಮತ್ತು ಅದು ತುಂಬಾ ಹಾನಿಕಾರಕ.
undefined
ಸೌತೆಕಾಯಿಯಲ್ಲಿ ಆಸ್ಕೋರ್ಬಿನೇಸ್ ಕಂಡುಬರುತ್ತದೆ, ಇದು ವಿಟಮಿನ್ ಸಿ ಅನ್ನು ಹೀರಿಕೊಳ್ಳಲು ಕಾರ್ಯನಿರ್ವಹಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ಸಮಯದಲ್ಲಿ ಸೌತೆಕಾಯಿ ಅಥವಾ ಮೂಲಂಗಿಯಲ್ಲಿ ಒಂದನ್ನು ಮಾತ್ರ ಸೇವಿಸಿ.
undefined
ಹಾಲಿನೊಂದಿಗೆ ಮೂಲಂಗಿಹಾಲು ಮತ್ತು ಮೂಲಂಗಿಯನ್ನು ಯಾವಾಗಲೂ ಪರಸ್ಪರ ದೂರವಿಡಬೇಕು. ಮೂಲಂಗಿಯನ್ನು ಆಹಾರದಲ್ಲಿ ಸೇವಿಸಿದ್ದರೆ, ಕನಿಷ್ಠ ಎರಡು ಮೂರು ಗಂಟೆಗಳ ನಂತರ ಮಾತ್ರ ಹಾಲನ್ನು ಸೇವಿಸಿ. ಹಾಗೆ ಮಾಡದಿರುವುದು ಚರ್ಮಕ್ಕೆ ಹಾನಿಕಾರಕವಾಗಿದೆ.
undefined
ಕಿತ್ತಳೆ ಜೊತೆ ಸೇವಿಸಬೇಡಿಕಿತ್ತಳೆ ಮುಂತಾದ ಹುಳಿ ವಸ್ತುಗಳನ್ನು ಮೂಲಂಗಿಯೊಂದಿಗೆ ಸೇವಿಸಬಾರದು. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಎರಡರ ಸಂಯೋಜನೆ ವಿಷದಂತೆ ಪರಿಗಣಿಸಲಾಗುತ್ತದೆ, ಇದು ಹೊಟ್ಟೆಗೆ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕಿತ್ತಳೆ ತಿನ್ನುತ್ತಿದ್ದರೆ, ಕನಿಷ್ಠ 10 ಗಂಟೆಗಳ ನಂತರ ಮೂಲಂಗಿಯನ್ನು ಸೇವಿಸಿ.
undefined
ಹಾಗಲಕಾಯಿ - ಮೂಲಂಗಿಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದ್ದರೂ, ಇದರೊಂದಿಗೆ ಮೂಲಂಗಿಯನ್ನು ತಿನ್ನಬೇಡಿ. ಈ ಎರಡು ಆಹಾರಗಳ ಸ್ವರೂಪವು ಪರಸ್ಪರ ಹೊಂದಿಕೆಯಾಗುವುದಿಲ್ಲ.
undefined
ಹಾಗಲಕಾಯಿ ಮತ್ತು ಮೂಲಂಗಿ ಒಟ್ಟಿಗೆ ತಿನ್ನುವುದು ದೇಹದಲ್ಲಿ ವಿಭಿನ್ನವಾಗಿ ಕ್ರಿಯೆಯಾಗಿ ಉಸಿರಾಟದ ತೊಂದರೆಗಳಿಗೆ ಕಾರಣವಾಗಬಹುದು. ಇದು ಉಸಿರಾಟ ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಲಕಾಯಿ ತಿನ್ನುತ್ತಿದ್ದರೆ, ಕನಿಷ್ಠ 24 ಗಂಟೆಗಳ ಕಾಲ ಮೂಲಂಗಿಯನ್ನು ಸೇವಿಸಬೇಡಿ.
undefined
ನೀರು ಮತ್ತು ಮೂಲಂಗಿಮೂಲಂಗಿಯನ್ನು ಸೇವಿಸಿದ ನಂತರ ನೀರು ಕುಡಿಯಬಾರದು.ನೋಯುವ ಗಂಟಲು ಅಥವಾ ಕೆಮ್ಮು ಸಮಸ್ಯೆ ಬರುವ ಸಾಧ್ಯತೆ ಇದೆ. ಮೂಲಂಗಿ ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವುದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ,
undefined
ಮೂಲಂಗಿಯೊಂದಿಗೆ ಹಾಲನ್ನುಕುಡಿಯಬಾರದು. ಈ ರೀತಿ ಸೇವಿಸುವುದರಿಂದ ನೀರಿಗಿಂತ ಹೆಚ್ಚು ಹಾನಿಕಾರಕವೆಂದು ಸಾಬೀತುಪಡಿಸಬಹುದು. ಮೂಲಂಗಿ ಪರೋಟ ಅಥವಾ ಪಲ್ಯ ತಿಂದಾಗಲೂ ಹಾಲನ್ನು ಸೇವಿಸಬಾರದು ಎಂಬುದನ್ನು ಗಮನಿಸಬೇಕು
undefined
click me!