ಹಲವು ದೇಶಗಳಿಗೆ ಹರಡಿರುವ ಚೀನಾ ಮೂಲದ ಮಾರಣಾಂತಿಕ ಕೊರೋನಾ ವೈರಸ್ ಒಂದು ಅಂಟು ರೋಗ. ಭಯ ಬೇಡ ಕರೋನಾ ಬಂದ ತಕ್ಷಣ ಸಾಯೋಲ್ಲ ಆದರೆ ಬರದಂತೆ ನೋಡಿಕೊಳೋಣ.
undefined
ತೀವ್ರ ಶೀತ , ನ್ಯುಮೋನಿಯಾ ಹಾಗೂ ಶ್ವಾಸಕೋಶದ ಸಮಸ್ಯೆ ಇದರ ಮುಖ್ಯ ಲಕ್ಷಣ.
undefined
ತಲೆನೋವು, ಹೊಟ್ಟೆ ನೋವು ಕೂಡಾ ಕೊರೋನಾದಿಂದ ಬರುತ್ತದೆ. ಅನಾರೋಗ್ಯದ ಜನರಿಂದ ಸಾಧ್ಯವಾದಷ್ಟು ದೂರವಿರಿ. ಸಂಪರ್ಕ ಬೇಡ.
undefined
ಎಲ್ಲ ಜ್ವರವೂ ಕೊರೋನಾ ಲಕ್ಷಣವಲ್ಲ. ಭಯ ಬೇಡ. ರಕ್ತ ಮತ್ತು ಉಸಿರಾಟದ ಪರೀಕ್ಷೆ ಮಾಡಿಸಿಕೊಳ್ಳಿ. ಅನಾರೋಗ್ಯವಿದ್ದರೆ ಮನೆಯಲ್ಲೇ ಉಳಿಯಿರಿ.
undefined
ಶೀನು ಮತ್ತು ಕೆಮ್ಮಿನ ಗಾಳಿಯಿಂದ ಹರಡುತ್ತೆ. ಸ್ಪರ್ಶ ಹಸ್ತಲಾಘವ ಬೇಡ. ಕೈಗಳ ಸ್ವಚ್ಛತೆಯ ಬಗ್ಗೆ ನಿಗಾ ಇರಲಿ.
undefined
ವೈರಸ್ ಇರುವ ವಸ್ತುವನ್ನು ಮುಟ್ಟುವುದು. ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದ್ರೂ ವೈರಸ್ ತಗಲುವ ಸಾಧ್ಯತೆ ಹೆಚ್ಚು.
undefined
ಕೊರೋನಾ ವೈರಸ್ ಕೆಮ್ಮು, ಸೀನಿನಿಂದ ಕೂಡ ಇತರರಿಗೆ ಹರಡುತ್ತದೆ. ಹಾಗಾಗಿ ಕೆಮ್ಮು, ಸೀನು ಬಂದಾಗ ಟಿಶ್ಶೂ ಬಳಸಿ ಎಸೆಯಿರಿ, ಮರು ಬಳಕೆ ಬೇಡ. ಕೈಗಳನ್ನು ತೊಳೆಯಿರಿ.
undefined
ಸ್ವಚ್ಛ ನೀರಿನಲ್ಲಿ ಸೋಪು ಬಳಸಿ ಕನಿಷ್ಠ 20 ಸೆಕೆಂಡ್ ಕೈಗಳನ್ನು ಸ್ವಚ್ಛಗೊಳಿಸಿ. ಪದೇಪದೇ ಹೀಗೆ ಮಾಡುವುದರಿಂದ ಸೋಂಕನ್ನು ತಡೆಗಟ್ಟಬಹುದು.
undefined
60%-95% ಆಲ್ಕೋಹಾಲ್ ಅಂಶ ಇರುವ ಸ್ಯಾನಿಟೈಜರ್ ಬಳಸಿ. ಸ್ಯಾನಿಟೈಜರ್ ಇಲ್ಲದೆ ಇದರೂ ಆತಂಕ ಬೇಡ. ಸ್ವಚ್ಛ ನೀರು ಸಾಕು ವೈರಸ್‌ನ್ನು ದೂರ ಇಡಲು.
undefined
ತೊಳೆಯದೆ ಮುಖ, ಮೂಗು ಅಥವಾ ಬಾಯಿಯನ್ನು ಮುಟ್ಟಲು ಹೋಗಬೇಡಿ. ಫೋನ್, ಟ್ಯಾಬ್ಲೆಟ್ಸ್ ಅಥವಾ ಪದೇ ಪದೇ ಬಳಸುವ ವಸ್ತುಗಳನ್ನು ಸ್ವಚ್ಛವಾಗಿಟ್ಟು ವೈರಸ್ ಹರಡದಂತೆ ಕೇರ್ ತೆಗೆದುಕೊಳ್ಳಿ.
undefined