ಕೊರೋನಾ ಹೆಚ್ಚೋವಾಗ ಮನೆಯಲ್ಲಿ ಆಕ್ಸಿಮೀಟರ್ ಯಾಕೆ ಇರಬೇಕು?

Suvarna News   | Asianet News
Published : May 01, 2021, 01:19 PM IST

ಇತ್ತೀಚಿನ ದಿನಗಳಲ್ಲಿ ಸುದ್ದಿ ಮತ್ತು ಅಂತರ್ಜಾಲದಲ್ಲಿ, ಎಲ್ಲಿ ನೋಡಿದರೂ ಕೊರೋನಾದ ಕುರಿತಾಗಿಯೇ ಮಾಹಿತಿ ನೀಡಲಾಗಿದೆ. ಯಾಕೆಂದರೆ ದೇಶದಲ್ಲಿ ಕೊರೋನಾ ಸ್ಥಿತಿ ಭೀಕರವಾಗಿದೆ. ಕೊರೋನಾ, ಆಕ್ಸಿಜನ್ ಸಿಲಿಂಡರ್ ಮತ್ತು ಇನ್ನೂ ಒಂದು ವಿಷಯದ ಬಗ್ಗೆ ಸಾಕಷ್ಟು ಕೇಳಲಾಗುತ್ತಿದೆ ಮತ್ತು ಜೊತೆಗೆ ಇತ್ತೀಚಿನ ದಿನಗಳಲ್ಲಿ ಆಕ್ಸಿಮೀಟರ್ ಕುರಿತಾಗಿಯೂ ಮಾಹಿತಿ ಕೇಳಿಬರುತ್ತಿದೆ. ಕೊರೋನಾ ಸಮಯದಲ್ಲಿ ಆಕ್ಸಿಮೀಟರ್ ಮನೆಯಲ್ಲಿ ಇರಲಿ ಎಂದು ತಜ್ಞರು ಹೇಳುವುದನ್ನು ಕೇಳಿದ್ದೇವೆ. ಇದರ ಬಗ್ಗೆ ನಿಮಗೆ ಮಾಹಿತಿ ಇದೆಯೇ?

PREV
110
ಕೊರೋನಾ ಹೆಚ್ಚೋವಾಗ ಮನೆಯಲ್ಲಿ ಆಕ್ಸಿಮೀಟರ್ ಯಾಕೆ ಇರಬೇಕು?

ಏನಿದು ಆಕ್ಸಿಮೀಟರ್ ? ಈ ಸಾಧನ ಯಾವುದು, ಅದು ಹೇಗೆ ಕೆಲಸ ಮಾಡುತ್ತದೆ? ಮತ್ತು ಕರೋನಾ ಯುಗದಲ್ಲಿ ಅದು ಏಕೆ ಬಹಳ ಮಹತ್ವದ್ದಾಗಿದೆ, ಈ ಎಲ್ಲದರ ಬಗ್ಗೆ ಇಲ್ಲಿ ವಿವರವಾಗಿ ನೀಡಲಾಗಿದೆ. ಈ ಮಾಹಿತಿಯನ್ನು ತಿಳಿದು ಆದಷ್ಟು ಬೇಗ ಮನೆಯಲ್ಲಿಯೂ ಆಕ್ಸಿಮೀಟರ್ ತಂದು ಇರಿಸಿ. ಇದರಿಂದ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಹಾಯವಾಗುತ್ತದೆ. 

210

ಆಕ್ಸಿಮೀಟರ್ ಎಂದರೇನು?
ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು ಆಕ್ಸಿಮೀಟರ್ ಒಂದು ಸಣ್ಣ ಯಂತ್ರವಾಗಿದೆ, ಇದು ಬಟ್ಟೆ ಅಥವಾ ಕಾಗದದ ಕ್ಲಿಪ್‌ ನಂತೆ ಕಂಡು ಬರುತ್ತದೆ. 

310

ಈ ಆಕ್ಸಿಮೀಟರ್ ತುಂಬಾ ಸಣ್ಣದಾಗಿರುತ್ತದೆ, ಆದುದರಿಂದ ಇದನ್ನು ಎಲ್ಲಿ ಬೇಕಾದರೂ ಸಾಗಿಸಬಹುದು. ಬಹುಶಃ ಈ ಕಾರಣಕ್ಕಾಗಿ ಇದನ್ನು ಪೋರ್ಟಬಲ್ ಆಕ್ಸಿಮೀಟರ್ ಎಂದೂ ಕರೆಯಲಾಗುತ್ತದೆ.

410

ಈ ಉಪಕರಣವು ಹೇಗೆ ಕಾರ್ಯನಿರ್ವಹಿಸುತ್ತದೆ?
ಆಕ್ಸಿಮೀಟರ್ ನಮ್ಮ ದೇಹದಲ್ಲಿ ಆಮ್ಲಜನಕ ಮಟ್ಟ ಎಷ್ಟು ಇದೆ ಎಂಬುದನ್ನು ನಿಖರವಾಗಿ ಲೆಕ್ಕ ಹಾಕುತ್ತದೆ. ಆಮ್ಲಜನಕದ ಮಟ್ಟದ ಪರಿಶೀಲನೆಗಾಗಿ, ಅದನ್ನು ಯಾವುದೇ ಕೈ ಬೆರಳಿನಲ್ಲಿ ಇರಿಸಿಕೊಳ್ಳಬಹುದು. 

510

ಪರೀಕ್ಷೆಯ ಸಮಯದಲ್ಲಿ,  ಬೆರಳನ್ನು ಆಕ್ಸಿಮೀಟರ್‌ನಲ್ಲಿ ಸರಿಯಾಗಿ ಹೊಂದಿಸಿ. ಏಕೆಂದರೆ ನೀವು ಇದನ್ನು ಮಾಡದಿದ್ದರೆ,  ಅದು ದೇಹದಲ್ಲಿರುವ ಆಮ್ಲಜನಕ ಮಟ್ಟವನ್ನು ಸರಿಯಾಗಿ ಪತ್ತೆ ಹಚ್ಚಲು ಸಾಧ್ಯವಾಗದೆ ಇರಬಹುದು. 

610

ಆಕ್ಸಿಮೀಟರ್ ಹೃದಯ ಬಡಿತವನ್ನು ಆಮ್ಲಜನಕದ ಮಟ್ಟದಿಂದ ಪರಿಶೀಲಿಸುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಎಲ್ಲಾ ಮಾಹಿತಿಗಳು ಆಕ್ಸಿಮೀಟರ್ ಪರದೆಯಲ್ಲಿ ತೋರಿಸಲಾರಂಭಿಸುತ್ತವೆ.

710

ಆಮ್ಲಜನಕದ ಮಟ್ಟ ಹೇಗಿರಬೇಕು?
ಆರೋಗ್ಯಕರ ದೇಹದ ಆಮ್ಲಜನಕದ ಮಟ್ಟ 95 ರಿಂದ 100 ರವರೆಗೆ ಇರುತ್ತದೆ. ಆದರೆ ಕರೋನಾ ಸೋಂಕಿನಿಂದಾಗಿ ಇದು 92, 90 ರವರೆಗೆ ಬರುತ್ತಿದೆ. ಈ ಬದಲಾವಣೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ. 

810

ನೀವು ಯಾವ ನಗರದಲ್ಲಿದ್ದರೂ, ವೆಂಟಿಲೇಟರ್‌ಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳು ಲಭ್ಯವಿರುವ ಅಂತಹ ಆಸ್ಪತ್ರೆಗಳ ಬಗ್ಗೆ ತನಿಖೆ ಪ್ರಾರಂಭಿಸಿ. ಕರೋನಾ-ಸೋಂಕಿತ ವ್ಯಕ್ತಿಗಳನ್ನು ಪ್ರತಿ ಗಂಟೆಗೆ ಆಕ್ಸಿಮೀಟರ್ ಮೂಲಕ ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಬೇಕು.

910

ಇದಕ್ಕಾಗಿಯೇ ಮನೆಯಲ್ಲಿ ಆಕ್ಸಿಮೀಟರ್ ಇರುವುದು ಮುಖ್ಯವಾಗಿದೆ
ಕರೋನದ ಗಂಭೀರ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆಕ್ಸಿಮೀಟರ್ ಅನ್ನು ಮನೆಯಲ್ಲಿಯೇ ಇರಿಸಲು ತಜ್ಞರು ಸಲಹೆ ನೀಡುತ್ತಿದ್ದಾರೆ ಇದರಿಂದ ಜನರು ತಮ್ಮ ಆಮ್ಲಜನಕದ ಮಟ್ಟವನ್ನು ಪರಿಶೀಲಿಸುತ್ತಾರೆ.  

1010

ಆಕ್ಸಿಮೀಟರ್ ಬಳಕೆಯಿಂದ ಆಮ್ಲಜನಕ ಮಟ್ಟವನ್ನು ತಿಳಿಸುತ್ತದೆ. ಇದರಿಂದ ಪರಿಸ್ಥಿತಿ ಗಂಭೀರವಾಗುವುದಕ್ಕೆ ಮುಂಚಿತವಾಗಿ, ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದರ ಜೊತೆಗೆ ಚಿಕಿತ್ಸೆ ಪಡೆಯಬಹುದು.

click me!

Recommended Stories