ದೇಹವನ್ನು ಆರೋಗ್ಯವಾಗಿಡಲುನೀವು ರಾಜಕುಮಾರನಂತೆ ಉಪಾಹಾರ ಮತ್ತು ಬಡಮನುಷ್ಯನಂತೆ ಊಟ ತಿನ್ನಬೇಕು ಎಂಬ ಮಾತನ್ನು ಕೇಳಿರಬಹುದು. ಆದರೆ ಕೆಲವರು ಈ ಗಾದೆಯನ್ನು ಅನುಸರಿಸಿ ರಾತ್ರಿ ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಮಲಗಲು ಬಯಸುತ್ತಾರೆ. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವ ಈ ವಿಧಾನ ದೇಹಕ್ಕೆ ಸಾಕಷ್ಟು ಹಾನಿಕಾರಕ.
ರಾತ್ರಿ ಊಟ ಮಾಡದೆ ಮಲಗಬಾರದು ಏಕೆಂದರೆ ಇದು ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳು ಮತ್ತು ರೋಗಗಳ ಅಪಾಯವನ್ನು ಉಂಟುಮಾಡುತ್ತದೆ. ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ದೇಹದಲ್ಲಿ ಯಾವೆಲ್ಲಾ ಸಮಸ್ಯೆಗಳು ಉಂಟಾಗಬಹುದು ಎಂಬುದನ್ನು ತಿಳಿಯೋಣ...
ನಿದ್ರಾಹೀನತೆಯು ಸಮಸ್ಯೆಯಾಗಬಹುದು:ಆಗಾಗ್ಗೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದರೆ, ನಿದ್ರೆ ಬಾರದೆ ತೊಂದರೆ ಉಂಟಾಗಬಹುದು. ಏಕೆಂದರೆ ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದಾಗ ಮನಸ್ಸು ಏನಾದರೂ ತಿನ್ನಬೇಕು ಎಂದು ಬಯಸುತ್ತದೆ, ಇದು ಪದೇ ಪದೇ ಹಸಿವಿಗೆ ಕಾರಣವಾಗುತ್ತದೆ.
ಏನನ್ನೂ ತಿನ್ನದಿದ್ದಾಗ, ಅದು ನಿದ್ರೆಗೆ ಭಂಗ ತರುತ್ತದೆ. ಕ್ರಮೇಣ ಇದು ಅಭ್ಯಾಸವಾಗುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆ ಹೊಂದಲು ಪ್ರಾರಂಭಿಸುತ್ತೀರಿ.
ಸ್ನಾಯುಗಳು ದುರ್ಬಲವಾಗಬಹುದು:ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಸ್ನಾಯುಗಳು ದುರ್ಬಲವಾಗಬಹುದು. ವಾಸ್ತವವಾಗಿ ಖಾಲಿ ಹೊಟ್ಟೆಯಲ್ಲಿ ಮಲಗುವುದು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಸ್ನಾಯು ದೌರ್ಬಲ್ಯ ಉಂಟಾಗುತ್ತದೆ.
ಸ್ನಾಯುಗಳನ್ನು ಬಲವಾಗಿಡಲು, ಸರಿಯಾದ ಸಮಯದಲ್ಲಿ ಮತ್ತು ಸರಿಯಾಗಿ ತಿನ್ನುವುದು ಮುಖ್ಯ. ತಿನ್ನದೇ ಇದ್ದರೆ ಹಲವು ಸಮಸ್ಯೆಗಳು ಉಂಟಾಗುತ್ತದೆ.
ಶಕ್ತಿಯ ಮಟ್ಟವು ಕಡಿಮೆಯಾಗಬಹುದು:ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗಿದರೆ ಶಕ್ತಿಯ ಮಟ್ಟವು ಕಡಿಮೆ ಆಗುತ್ತದೆ. ಇದರಿಂದ ನಿಶ್ಯಕ್ತಿ ಮತ್ತು ದಣಿವನ್ನು ಅನುಭವಿಸಬಹುದು. ಇದು ದೀರ್ಘಾವಧಿಯಲ್ಲಿ ದೇಹಕ್ಕೆ ದೊಡ್ಡ ಸಮಸ್ಯೆಯಾಗಬಹುದು.
ಕೋಪ ಬರುತ್ತೆ:ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಮನಸ್ಥಿತಿ ಬದಲಾವಣೆಆಗುತ್ತದೆ. ಇದು ಕೋಪ ಮತ್ತು ಕಿರಿಕಿರಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಕ್ರಮೇಣ ಅದು ನಿಮ್ಮ ವ್ಯಕ್ತಿತ್ವದ ಭಾಗವಾಗಲು ಪ್ರಾರಂಭಿಸುತ್ತದೆ.
ಖಾಲಿ ಹೊಟ್ಟೆಯಿಂದಾಗಿ ನಿಮ್ಮ ಇಮೇಜ್ ನಕಾರಾತ್ಮಕವಾಗಿ ತೋರಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಮಲಗುವ ಅಭ್ಯಾಸವನ್ನು ಕಡೆಗಣಿಸಿ ರಾತ್ರಿ ಏನಾದರೂ ತಿನ್ನಬೇಕು. ಇದರಿಂದ ದೇಹವು ಸಂಪೂರ್ಣವಾಗಿ ಆರೋಗ್ಯಕರವಾಗಿರುತ್ತದೆ