ದಿಂಬು ಬಳಸಿ ಮಲಗುವುದರಿಂದ ಮನಸಿಗೆ ಹಿತ: ದೇಹಕ್ಕೆ..?

First Published | Jan 20, 2021, 2:54 PM IST

ದಿನವಿಡೀ ಕೆಲಸ, ಒಂದೊಂದು ಟೆನ್ಶನ್,  ಇದೆಲ್ಲಾ ಕಳೆದು ರಾತ್ರಿ ವೇಳೆ  ಹಾಸಿಗೆಗೆ ಹೋಗುವುದು ಆರಾಮದಾಯಕವಾಗಿರುತ್ತದೆ. ಎಲ್ಲರೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕು ಎಂದು ಬಯಸುತ್ತಾರೆ, ಇದರಿಂದ ಮರುದಿನ  ಫ್ರೆಶ್ ಮೂಡ್ ನೊಂದಿಗೆ ಕೆಲಸಕ್ಕೆ ಹೋಗಬಹುದು. ಚೆನ್ನಾಗಿ ನಿದ್ರೆ ಮಾಡಬೇಕು ಎಂದರೆ ಕೆಲವರಿಗೆ ದಿಂಬು ಬೇಕೇ ಬೇಕು. ದಿಂಬು ಇಟ್ಟು ಮಲಗಿದ್ರೆ ಏನಾಗುತ್ತೆ?

ಕೆಲವರಿಗೆ ಮಲಗುವಾಗ ದಿಂಬು ಬೇಕು. ದಿಂಬುಗಳಿಲ್ಲದೆ ಅವರು ನಿದ್ರಿಸುವುದಿಲ್ಲ. ಕೆಲವರು ಮಲಗುವ ಸಮಯದಲ್ಲಿ ತಲೆಯ ಕೆಳಗೆ ದಪ್ಪನೆಯ ದಿಂಬನ್ನುಹೊಂದಿದ್ದರೆ, ಕೆಲವರು 3-4 ದಿಂಬುಗಳನ್ನು ಇಟ್ಟು ಮಲಗುತ್ತಾರೆ. ಇದು ಆರಾಮದಾಯಕ ಎಂದು ಅನಿಸಬಹುದು. ಆದರೆ ಇದರಿಂದ ಬಹಳಷ್ಟುಹಾನಿಯಾಗುತ್ತದೆ ಅನ್ನೋದು ತಿಳಿದಿರಬೇಕು. ಹೆಚ್ಚು ದಿಂಬು ಇಟ್ಟು ಮಲಗುವುದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ ಮಾಹಿತಿ ಇಲ್ಲಿದೆ...
ತಲೆದಿಂಬಿನ ಹಾನಿ:ಪ್ರತಿಯೊಬ್ಬರಿಗೂ ಅವರದ್ದೇ ಆದ ನಿದ್ದೆಯ ಅಭ್ಯಾಸಗಳಿವೆ. ದಿಂಬು ಬಳಸುವುದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ಎದುರಿಸಬೇಕಾಗಬಹುದು.ದಿಂಬಿನ ಅಡ್ಡ ಪರಿಣಾಮಗಳ ಬಗ್ಗೆ ಇಂದು ತಿಳಿಯಿರಿ.
Tap to resize

ಬೆನ್ನುಹುರಿಗೆ ಹಾನಿ:ತಲೆದಿಂಬು ಇಟ್ಟುಕೊಂಡು ಮಲಗಿದರೆ ಎಚ್ಚರ. ದಿಂಬುಗಳನ್ನು ಬಳಸುವುದರಿಂದ ನಿಮ್ಮ ಬೆನ್ನುಹುರಿಯನ್ನು ಹಾನಿಗೊಳಿಸಬಹುದು. ದಿಂಬು ನಿಧಾನವಾಗಿ ಬೆನ್ನುಮೂಳೆಯನ್ನು ವಕ್ರವಾಗಿಸಲು ಪ್ರಾರಂಭಿಸುತ್ತದೆ. ಹಾಗಾಗಿ ತಲೆದಿಂಬು ಬಳಸಬೇಡಿ. ಇದನ್ನು ಬಳಸದೇ ಇರುವುದೂ ಬೆನ್ನು ನೋವು ನಿವಾರಣೆಮಾಡುತ್ತದೆ.
ಕುತ್ತಿಗೆ ಹಿಗ್ಗುತ್ತದೆ:ತಲೆದಿಂಬಿನ ಮೇಲೆ ಮಲಗಿದರೆ ಕುತ್ತಿಗೆಯ ಒತ್ತಡವುಂಟಾಗಬಹುದು. ಅಲ್ಲದೆ ಕುತ್ತಿಗೆ ನೋವಿನ ಸಮಸ್ಯೆಯೂ ಹೆಚ್ಚಾಗುತ್ತದೆ. ಆದ್ದರಿಂದ ಮಲಗುವಾಗ ತಲೆದಿಂಬುಗಳನ್ನು ಬಳಸಬಾರದು. ರಕ್ತ ಪರಿಚಲನೆಯು ಯಾವುದೇ ಕುಶನ್ ಇಲ್ಲದೆ ಸರಿಯಾಗಿ ಕೆಲಸ ಮಾಡುತ್ತದೆ.
ಮುಖದ ಮೇಲಿನ ಸುಕ್ಕುಗಳು:ತಲೆದಿಂಬು ಬಳಸಿದರೆ ಬೇಗನೆ ವಯಸ್ಸಾದಂತೆ ಕಾಣಲು ಪ್ರಾರಂಭಿಸುತ್ತೀರಿ. ರಾತ್ರಿ ದಿಂಬಿನೊಂದಿಗೆ ಮಲಗುವಾಗ ಕೆನ್ನೆಗಳು ದಿಂಬಿನ ಮೇಲೆಇರುವುದರಿಂದ ಕ್ರಮೇಣ ಮುಖದ ಮೇಲೆ ಸುಕ್ಕುಗಳು ಉಂಟಾಗುತ್ತವೆ. ಆದ್ದರಿಂದ ದಿಂಬು ಬಳಸುವುದನ್ನು ತಪ್ಪಿಸಬೇಕು.
ಸೌಂದರ್ಯದ ಮೇಲೆ ಪರಿಣಾಮ :ತಲೆದಿಂಬುಗಳ ಬಳಕೆಯಿಂದ ಕ್ರಮೇಣ ಸೌಂದರ್ಯವು ಕಡಿಮೆಯಾಗುತ್ತದೆ. ಹೆಚ್ಚು ತಲೆ ದಿಂಬು ಬಳಕೆ ಮಾಡಿದಷ್ಟು ಮುಖದ ಮೇಲೆ ಸುಕ್ಕು ಉಂಟಾಗಿ ಮುಖಕಳಾಹೀನವಾಗುತ್ತದೆ. ಇದರಿಂದ ಬೇಗನೆ ವಯಸ್ಸಾದವರಂತೆ ಕಾಣುತ್ತದೆ.
ಮಕ್ಕಳ ತಿರುಚಿದ ಶ್ವಾಸನಾಳ:ಕೆಲವರು ಮಕ್ಕಳಿಗೆ ದಿಂಬು ಇಡುತ್ತಾರೆ. ದಿಂಬನ್ನು ಇಡುವುದರಿಂದ ಉಸಿರಾಟನಾಳಕ್ಕೆ ಅಪಾಯವು೦ಟಾಗುತ್ತವೆ.ಆದ್ದರಿಂದ ಮಕ್ಕಳಿಗೆ ತಲೆದಿಂಬು ಇಡಬೇಡಿ.

Latest Videos

click me!