ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿ ಮುಟ್ಟಿದ್ರೆ ಏನಾಗುತ್ತೆ?

Published : Jun 12, 2022, 11:58 AM IST

ಪಿರಿಯಡ್ಸ್ ಗೆ ಸಂಬಂಧಿಸಿದ ಮಿಥ್ಯೆಗಳನ್ನು ನಾವು ಯಾವಾಗಲೂ ಕೇಳುತ್ತಿರುತ್ತೇವೆ. ನೀವು ಅದಕ್ಕೆ ಸಂಬಂಧಿಸಿದ ಅನೇಕ ವಿಚಿತ್ರ ಸನ್ನಿವೇಶಗಳನ್ನು ಅನೇಕ ಬಾರಿ ಎದುರಿಸಿರಬಹುದು. ಅನೇಕ ಸ್ಥಳಗಳಲ್ಲಿ ಈ ಒಂದು ಮಿಥ್ಯೆ ಭಾರಿ ಚಾಲ್ತಿಯಲ್ಲಿದೆ. ಅದ್ಯಾವುದು ಎಂದ್ರೆ ಪಿರಿಯಡ್ಸ್ ಸಮಯದಲ್ಲಿ (periods time) ಉಪ್ಪಿನಕಾಯಿಯಿಂದ ದೂರವಿರಲು ಮಹಿಳೆಯರಿಗೆ ಸೂಚಿಸಲಾಗಿದೆ. ಪಿರಿಯಡ್ಸ್ ಸಮಯದಲ್ಲಿ ಉಪ್ಪಿನಕಾಯಿ ಹಾಳಾಗುತ್ತದೆ ಎಂದು ನಂಬಲಾಗಿದೆ.

PREV
18
ಮುಟ್ಟಿನ ಸಮಯದಲ್ಲಿ ಉಪ್ಪಿನಕಾಯಿ ಮುಟ್ಟಿದ್ರೆ ಏನಾಗುತ್ತೆ?

ನಿಮ್ಮ ಅಜ್ಜಿ ಅಥವಾ ಹಿರಿಯರು ಪಿರಿಯಡ್ಸ್ ಸಮಯದಲ್ಲಿ ಉಪ್ಪಿನಕಾಯಿ ಭರಣಿ ಸ್ಪರ್ಶಿಸೋದನ್ನು ನಿಷೇಧಿಸುತ್ತಿದ್ದ ಬಾಲ್ಯದ ದಿನಗಳನ್ನು ನೀವು ನೆನಪಿಸಿಕೊಳ್ಳುತ್ತೀರಿ. ಏಕೆಂದರೆ ಪಿರಿಯಡ್ಸ್ ಸಮಯದಲ್ಲಿ (periods time) ನೀವು ಉಪ್ಪಿನಕಾಯಿ ಭರಣಿ ಮುಟ್ಟಿದರೆ, ಅದು ಹಾಳಾಗುತ್ತದೆ ಎಂದು ನಂಬಲಾಗಿದೆ. 
 

28

 ಇದು ಕೇವಲ ನಿಮ್ಮ ಕಥೆಯಲ್ಲ, ಆದರೆ ಭಾರತದ ಹೆಚ್ಚಿನ ಮಹಿಳೆಯರು ಈ ರೀತಿಯ ನಂಬಿಕೆಯ ಸಂಪ್ರದಾಯವನ್ನು (traditions) ಒಂದಲ್ಲ, ಒಂದು ಬಾರಿ ನೀವೂ ಎದುರಿಸಿರಬಹುದು. ಸಾಂಪ್ರದಾಯಿಕವಾಗಿ ಪಿರಿಯಡ್ಸ್ ಸಮಯದಲ್ಲಿ ಭರಣಿಯನ್ನು ಸ್ಪರ್ಶಿಸುವುದರಿಂದ ಆಹಾರವು ಅಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 
 

38

 ಈ ಸಂಪ್ರದಾಯವು ಶತಮಾನಗಳಷ್ಟು ಹಳೆಯದಾಗಿರಬಹುದು ಆದರೆ ಇಂದಿಗೂ ಉಪ್ಪಿನಕಾಯಿ (pickle) ಅಥವಾ ಚಟ್ನಿಯ ಪಾತ್ರೆ ಸ್ಪರ್ಶಿಸುವುದರಿಂದ ಅದು ಅಶುದ್ಧವಾಗುತ್ತದೆ ಎಂದು ನಂಬಲಾದ ಅನೇಕ ಸ್ಥಳಗಳಿವೆ, ಈ ಸಂಪ್ರದಾಯದ ಹಿಂದಿನ ವಾಸ್ತವ ಏನೆಂದು ತಿಳಿಯಲು ನೀವೂ ಬಯಸಿದರೆ ಇಲ್ಲಿದೆ ಸಂಪೂರ್ಣ ಮಾಹಿತಿ…

48

 ಶತಮಾನಗಳಷ್ಟು ಹಳೆಯದಾದ ನಂಬಿಕೆಗಳ ಪ್ರಕಾರ, ಮುಟ್ಟಿನ ಸಮಯದಲ್ಲಿ ಮಹಿಳೆಯರು ಅಡುಗೆಮನೆಗೆ (kitchen) ಪ್ರವೇಶಿಸಲು ಅಥವಾ ಉಪ್ಪಿನಕಾಯಿ ಮುಟ್ಟಲು ಅನುಮತಿ ನೀಡುತ್ತಿರಲಿಲ್ಲ. ಈ ಸಮಯದಲ್ಲಿ ಅವರು ಅಶುದ್ಧರಾಗಿರುತ್ತಾರೆ, ಹಾಗಾಗಿ ಮುಟ್ಟಿದ್ದೆಲ್ಲಾ ಅಶುದ್ಧವಾಗುತ್ತದೆ ಎಂದು ನಂಬಲಾಗಿತ್ತು. ಇಂಟ್ರೆಸ್ಟಿಂಗ್ ವಿಷ್ಯ ಏನೆಂದರೆ, ಆಹಾರವನ್ನು ಪವಿತ್ರವೆಂದು ಪರಿಗಣಿಸಲಾಗಿತ್ತು, ಹಾಗಾಗಿ ಅಶುದ್ಧವಾದುದು ಯಾವುದೂ ಕೂಡ ಆಹಾರಗಳನ್ನು ಸ್ಪರ್ಷಿಸಬಾರದು ಎಂದು ಜನ ನಂಬಿದ್ದರು. 

58

ಇಂದಿಗೂ ದೇಶದ ವಿವಿಧ ಭಾಗಗಳಲ್ಲಿನ ಅನೇಕ ಮಹಿಳೆಯರು ಆ ದಿನಗಳಲ್ಲಿ ಅಡುಗೆ ಮಾಡುವುದರಿಂದ ಅಥವಾ ಅಡುಗೆಮನೆ ಪ್ರವೇಶಿಸುವುದರಿಂದ ದೂರವಿರುತ್ತಾರೆ ಮತ್ತು 4-5 ದಿನಗಳನ್ನು ಏಕಾಂಗಿಯಾಗಿ ಕಳೆಯುತ್ತಾರೆ. ನಾಲ್ಕನೇ ದಿನ ಸ್ನಾನ ಮಾಡಿದ ಬಳಿಕ ಮಡಿ ಮೈಲಿಗೆ ದೂರವಾಗಿ ಶುದ್ಧರಾಗುತ್ತಾರೆ ಎನ್ನುವ ನಂಬಿಕೆ ಇದೆ. 

68

 ಆದರೆ ಋತುಚಕ್ರವು (periods) ನಿಜವಾಗಿಯೂ ಆಹಾರದ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಅದನ್ನು ಅಶುದ್ಧವಾಗಿಸುತ್ತದೆಯೇ ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು? ಹಾಗಾದರೆ ಈ ಬಗ್ಗೆ ವಿಜ್ಞಾನವು ಏನು ಹೇಳುತ್ತದೆ ಎಂದು ತಿಳಿದುಕೊಳ್ಳೋಣವೇ?

78

ಇದು ನಿಜವೇ ಅಥವಾ ಕೇವಲ ಮಿಥ್ಯೆಯೇ?

ಋತುಸ್ರಾವದ ಸಮಯದಲ್ಲಿ, ಅಶುದ್ಧ ರಕ್ತವು ದೇಹದಿಂದ ಹರಿಯುತ್ತದೆ, ಈ ಸಮಯದಲ್ಲಿ ಸೋಂಕು ಮತ್ತು ರೋಗಗಳನ್ನು ತಪ್ಪಿಸಲು ಉತ್ತಮ ನೈರ್ಮಲ್ಯದ (clean)  ಅಗತ್ಯವಿದೆ. ಈ ಮೊದಲು, ಮಹಿಳೆಯರು ಆ ದಿನಗಳಲ್ಲಿ ನೈರ್ಮಲ್ಯವನ್ನು ನಿರ್ವಹಿಸಲು ಬಟ್ಟೆ ಬಳಸುತ್ತಿದ್ದರು, ಆದರೆ ಸಮಯ ಕಳೆದಂತೆ ಆರೋಗ್ಯಕರ ನೈರ್ಮಲ್ಯ ಕಾಪಾಡಿಕೊಳ್ಳಲು ಮತ್ತು ಸೋಂಕಿನ (infection) ಸಾಧ್ಯತೆ ಕಡಿಮೆ ಮಾಡಲು ಅನೇಕ ಮಾರ್ಗಗಳನ್ನು ಕ್ಂಡುಕೊಳ್ಳಲಾಯಿತು.

88

ಒಂದು ಸಿದ್ಧಾಂತದ ಪ್ರಕಾರ, ಅಶುದ್ಧ ರಕ್ತ, ಸೋಂಕು ಮೊದಲಾದವುಗಳನ್ನು ತಪ್ಪಿಸಲು ಮತ್ತು ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಗಳನ್ನು ಮಾಡಲಾಗಿದೆ ಎಂದು ನಂಬಲಾಗಿತ್ತು, ಆದರೆ ಕೆಲವರು ಇದನ್ನು ಮಹಿಳೆಯರಿಗೆ ಕೆಲಸದಿಂದ ವಿರಾಮ ನೀಡಲು ಮೂರು ದಿನ ದೂರವಿರುವಂತೆ ಮಾಡಲಾಗಿದೆ ಎಂದು ನಂಬಲಾಗಿದೆ. ಆದುದರಿಂದ ಈ ಸಮಯದಲ್ಲಿ ಉಪ್ಪಿನಕಾಯಿ ಮಾಡಲು ಮತ್ತು ಅದನ್ನು ಮುಟ್ಟಲು ಬಿಡುತ್ತಿರಲಿಲ್ಲ ಎನ್ನಲಾಗಿದೆ. 

Read more Photos on
click me!

Recommended Stories