ದಿನಾ ಚಿಕನ್ ತಿಂತೀರಾ..? ನಿಮ್ಮ ದೇಹದ ಮೇಲಾಗೋ ಪರಿಣಾಮಗಳಿವು

First Published | Oct 11, 2020, 9:58 PM IST

ನೀವು ಚಿಕನ್ ಪ್ರಿಯರಾ..? ದಿನಕ್ಕೊಂದು ಚಿಕನ್ ರೆಸಿಪಿ ಇಲ್ಲದೆ ಊಟ ಮಾಡಲ್ವಾ..? ಯಮ್ಮೀ ಚಿಕನ್ ಬಾಯಿಗೆ ರುಚಿ, ದೇಹಕ್ಕೆ..? ಇಲ್ಲಿ ನೋಡಿ

ಪ್ರೊಟೀನ್ ವಿಚಾರಕ್ಕೆ ಬಂದರೆ ಚಿಕನ್ ಎಲ್ಲರಿಗೂ ಫೇವರೇಟ್. ರುಚಿಯೂ ಬಹಳಷ್ಟು ಜನಕ್ಕೆ ಫೇವರೇಟ್.
ಬಹಳಷ್ಟು ಜನ ಚಿಕನ್‌ ರೆಸಪಿಗಳನ್ನು ಟ್ರೈ ಮಾಡಿ ವಿವಿಧ ಖಾದ್ಯ ರುಚಿ ಸವಿಯುತ್ತಾರೆ.
Tap to resize

ಫಿಟ್‌ನೆಸ್ ವಿಚಾರ ನೋಡಿದರೆ ಚಿಕನ್ ಪ್ರಿಫರ್ ಮಾಡುತ್ತಾರೆ. ಆದರೆ ದಿನಾ ಚಿಕನ್ ತಿನ್ನೋದು ಸರೀನಾ..? ಸಂಶೋಧನೆಗಳ ಪ್ರಕಾರ ದಿನಾ ಚಿಕನ್ ತಿನ್ನೋದ್ರಿಂದ ದೇಹದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ.
ದಿನಾ ಚಿಕನ್ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದಾ..? ಹೀಟ್ ಆಗುತ್ತಾ..? ಇಲ್ಲಿ ನೋಡಿ
ವೇಯಿಟ್ ಲಾಸ್:ಕಾರ್ಬೋಹೈಡ್ರೇಟ್‌ಗಳಿಗಿಂದ ಪ್ರೊಟೀನ್ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ನಿಮಗೆ ಹೊಟ್ಟೆತುಂಬಿದ ಭಾವವನ್ನು ಕೊಡುತ್ತದೆ.
ಇದು ಇನ್ನಷ್ಟು ಆಹಾರ ಸೇವಿಸುವುದರಿಂದ ತಡೆಯುತ್ತದೆ. ಇದು ಕ್ರಮೇಣ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.
ತೂಕ ಹೆಚ್ಚಳ: ನೀವು ದಿನವೂ ಚಿಕನ್ ತಿನ್ನುವುದರಿಂದ ಹೆಚ್ಚಿನ ಪ್ರೊಟೀನ್ ದೇಹದಲ್ಲಿ ಸಂಗ್ರಹವಾಗುತ್ತದೆ. ಇದು ಒಳ್ಳೆಯದಲ್ಲ. ಇದು ಫ್ಯಾಟ್ ಬರ್ನ್ ಆಗಲು ತಡೆಯಾಗುತ್ತದೆ. ಇದರಿಂದ ತೂಕ ಹೆಚ್ಚಾಗಬಹುದು. ಹಾಗಾಗಿ ದಿನಾ ಚಿಕನ್ ಸೇವಿಸೋದು ಒಳ್ಳೆಯದಲ್ಲ.
ಆನೆ: ಆನೆಯ ಪ್ರಬೇಧವನ್ನು ಆಹಾರಕ್ಕಾಗಿ ಬಳಸಲಾಗುತ್ತದೆ. ಕ್ಯಾಮರೂನ್, ಮಧ್ಯ ಆಫ್ರಿಕಾ, ಕಾಂಗೋದಲ್ಲಿ ಎಲ್ಲಾ ಜಾತಿಯ ಆನೆಗಳನ್ನು ಅವುಗಳ ಮಾಂಸಕ್ಕಾಗಿಯೇ ಬೇಟೆಯಾಡಲಾಗುತ್ತದೆ. ಕಳ್ಳ ಬೇಟೆಗಾರರು ​​ದಂತ ಬೇಟೆಯ ಸಮಯದಲ್ಲಿ, ಮಾಂಸವನ್ನು ಮಾರಾಟ ಅಥವಾ ಬೇಟೆಯಾಡುವ ತಂಡಕ್ಕೆ ಆಹಾರಕ್ಕಾಗಿ ಬಳಸುತ್ತಾರೆ.
ಮಸಲ್ ಹೆಚ್ಚಿಸೋದು: ಪ್ರೊಟೀನ್ ಮಸಲ್ಸ್ ಹೆಚ್ಚಿಸೋಕೆ ನೆರವಾಗುತ್ತದೆ. ಚಿಕನ್ ಕಂಪ್ಲೀಟ್ ಪ್ರೊಟಿನ್. ಇದರಲ್ಲಿರೋ ಅಮಿನೋ ಆಸಿಡ್ ಮಸಲ್ಸ್ ಹೆಚ್ಚಿಸಲು ನೆರವಾಗುತ್ತದೆ.
ಸೋಡಿಯಂ: ಚಿಕನ್‌ನಲ್ಲಿ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಇದನ್ನು ಮಾಡರೇಷನ್‌ ಮಾಡಿ ಸೇವಿಸಬೇಕು.
ಇಲ್ಲದಿದ್ದರೆ ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿ ದೇಹ ಸೇರಿ ರಕ್ತದೊತ್ತಡ ಹೆಚ್ಚಿಸಬಹುದು.
ಹೃದಯ ಸಂಬಂಧಿ ಕಾಯಿಲೆ: ಡಿನವೂ ಚಿಕನ್ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತದೆ.
ಮಲಬದ್ಧತೆ: ಹೈ ಪ್ರೊಟೀನ್ ಆಹಾರಗಳಲ್ಲಿ ಕಡಿಮೆ ಫೈಬರ್ ಇರುತ್ತದೆ. ಇದು ಮಲಬದ್ಧತೆಗೆ ಕಾರಣವಾಗಬಹುದು.
ಅದಕ್ಕಾಗಿ ಚಿಕನ್ ಜೊತೆ ಕ್ಯಾರೆಟ್, ಬ್ರೌನ್ ರೈಸ್‌ ಬಳಸಿ.
ಕ್ಯಾನ್ಸರ್: ಹೆಚ್ಚಾಗಿ ಚಿಕನ್ ಸೇವಿಸೋದು ಕ್ಯಾನ್ಸರ್ ರಿಸ್ಕ್ ಹೆಚ್ಚಿಸುತ್ತದೆ. ಪ್ರೋಸ್ಟೇಟ್ ಕ್ಯಾನ್ಸರ್‌ಗೆ ಕಾರಣವಾಗಬಹುದು.

Latest Videos

click me!