ತ್ವಚೆಯಲ್ಲಿ ಕೊರೋನಾ ವಾಸ: ವೈರಸ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯ ಇದು

Suvarna News   | Asianet News
Published : Oct 11, 2020, 05:21 PM ISTUpdated : Oct 11, 2020, 06:18 PM IST

ವಿಶ್ವಾದ್ಯಂತ ಕೊರೋನಾ ವೈರಸ್ ಹೆಚ್ಚುತ್ತಲೇ ಇದೆ. ದೇಶದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಸಹ ಕರ್ನಾಟಕದಲ್ಲಿ ಕೊರೋನಾ ವೈರಸ್ ಹೆಚ್ಚುತ್ತಿದೆ. ,ಇನ್ನು ಕೊರೋನಾ ವ್ಯಾಕ್ಸಿನ್ ಕಂಡು ಹಿಡಿಯಲು ಸಾಲು ಸಾಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಯಾವಾಗ ವ್ಯಾಕ್ಸಿನ್ ಲಭ್ಯವಾಗುತ್ತದೆ ಎನ್ನುವ ಬಗ್ಗೆ ಸಹ ಸರಿಯಾದ ಮಾಹಿತಿ ಇಲ್ಲ. ಆದುದರಿಂದ ಅಲ್ಲಿವರೆಗೆ ನಾವು ಸಾಧ್ಯವಾದಷ್ಟು ಎಚ್ಚರ ವಹಿಸಬೇಕಾಗುತ್ತದೆ. 

PREV
19
ತ್ವಚೆಯಲ್ಲಿ ಕೊರೋನಾ ವಾಸ: ವೈರಸ್ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯ ಇದು

ಫ್ಲೂ ಅಥವಾ ಶೀತ ಬಂದಾಗ ಕಾಣಿಸುವ ಲಕ್ಷಣಗಳೇ ಕರೋನ ವೈರಸ್ ಸೋಂಕಿನಲ್ಲೂ ಇರುತ್ತವೆ. ಸೋಂಕಿತ ವ್ಯಕ್ತಿಯಲ್ಲಿ ಜ್ವರ, ವಿಪರೀತ ಕೆಮ್ಮು, ಉಸಿರಾಟ ತೊಂದರೆ ಇರುತ್ತದೆ. ಕೆಲವರಿಗೆ ಹೊಟ್ಟೆ ನೋವು, ಬೇಧಿ ಇರುತ್ತದೆ. ಸೋಂಕು ತಗುಲಿದ ಕೂಡಲೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಮೂರ್ನಾಲ್ಕು ದಿನಗಳ ನಂತರ ತೊಂದರೆಗಳು ಗೋಚರಿತವಾಗುತ್ತವೆ. ಈ ಬಗ್ಗೆ ಇದೀಗ ಹೊಸ ಸಂಶೋಧನೆ ವರದಿಯಾಗಿದೆ. 

29

ಇದೀಗ ಹೊಸದಾಗಿ ಬಂದ ಸಂಶೋಧನೆಯಲ್ಲಿ ಕೊರೋನಾ ವೈರಸ್ ಜೀವಿತಾವಧಿ ಬಗ್ಗೆ ಹೊಸದೊಂದು ಮಾಹಿತಿ ಲಭ್ಯವಾಗಿದೆ. ಅದೇನೆಂದರೆ ಕೊರೋನಾವೈರಸ್ ಮನುಷ್ಯನ ಚರ್ಮದ ಎಷ್ಟು ಹೊತ್ತಿನವರೆಗೆ ಜೀವಂತವಾಗಿರಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದೆ. ಇದನ್ನು ಕೇಳಿದರೆ ನೀವು ಗಾಬರಿಯಾಗೋದು ಖಂಡಿತಾ. 

39

ಸ್ವಚ್ಚತೆ ಮಾಡದೇ ಇದ್ದರೆ ಹೊಸ ಕರೋನವೈರಸ್  ಮಾನವ ಚರ್ಮದ ಮೇಲೆ ಸುಮಾರು ಒಂಬತ್ತು ಗಂಟೆಗಳ ಕಾಲ ಜೇವಿಸಬಲ್ಲದು ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ.

49

ಕೋವಿಡ್ -19 ಒಬ್ಬರಿಂದ ಒಬ್ಬರಿಗೆ ಹರಡಲು ಮುಖ್ಯ ಕಾರಣ ಸೀನಿದಾಗ ಬರುವ ಹನಿಗಳು, ಇದು ಗಾಳಿಯಲ್ಲಿ ಶೇಖರವಾಗಿ, ಅದೇ ಗಾಳಿಯನ್ನು ಇನ್ನೊಬ್ಬ ಮನುಷ್ಯ ಉಸಿರಾಡಿದರೆ ಕೊರೋನಾ ವೈರಸ್ ಹರಡುತ್ತದೆ ಎಂದು ಅಧ್ಯಯನಗಳು ತೋರಿಸಿದೆ. ಇದೆಲ್ಲದರ ನಡುವೆ ನಾವು ನೈರ್ಮಲ್ಯ ಕಾಪಾಡುವುದು ಮುಖ್ಯವಾಗಿದೆ.  

59

 ಸಾಂಕ್ರಾಮಿಕ ರೋಗಗಳ ಬಗ್ಗೆ  ಪ್ರಕಟವಾದ ಹೊಸ ಅಧ್ಯಯನದಲ್ಲಿ ಲೇಖಕರು, "SARS-CoV-2 ಸೋಂಕುಗಳು ಹರಡುವುದನ್ನು ತಡೆಯಲು ಸರಿಯಾದ ಕೈ ನೈರ್ಮಲ್ಯ ಮುಖ್ಯವಾಗಿದೆ. ಇಲ್ಲವಾದರೆ ಕೊರೋನಾ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುವ ಸಾಧ್ಯತೆ ಇದೆ ಎಂದು ಹೇಳಿದರು.

69

ಆರೋಗ್ಯಕರ ಸ್ವಯಂಸೇವಕರಿಗೆ ಸೋಂಕು ತಗುಲಿಸುವುದನ್ನು ತಪ್ಪಿಸಲು, ಸಂಶೋಧಕರು ಶವದ ಚರ್ಮವನ್ನು ಬಳಸಿಕೊಂಡು ಲ್ಯಾಬ್ ಪ್ರಯೋಗಗಳನ್ನು ನಡೆಸಿದರು. ಆ ಮೂಲಕ ಅವರು ಚರ್ಮದಲ್ಲಿ ಕೊರೋನಾ ವೈರಸ್ ಒಂಬತ್ತು ಗಂಟೆ ಜೀವಿಸಲಿದೆ ಎಂದು ತಿಳಿಸಿದೆ. 

79

ಇನ್ಫ್ಲುಯೆನ್ಸ ಎ ವೈರಸ್ ಮಾನವ ಚರ್ಮದ ಮೇಲೆ ಎರಡು ಗಂಟೆಗಳಿಗಿಂತಲೂ ಕಡಿಮೆ ಉಳಿದಿದ್ದರೆ, ಕರೋನವೈರಸ್ ಒಂಬತ್ತು ಗಂಟೆಗಳಿಗಿಂತ ಹೆಚ್ಚು ಕಾಲ ಉಳಿದುಕೊಂಡಿತು. ಇದನ್ನು ನಿರ್ಮೂಲನೆ ಮಾಡಲು ಶೇ .80 ರಷ್ಟು ಆಲ್ಕೋಹಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಜರ್ ಮೂಲಕ 15 ಸೆಕೆಂಡುಗಳಲ್ಲಿ ಚೆನ್ನಾಗಿ ಕೈತೊಳೆಯಬೇಕು. ಹಾಗಿದ್ದರೆ ಮಾತ್ರ ಕೊರೋನಾ ವೈರಸ್ ಸಂಪೂರ್ಣವಾಗಿ ನಿರ್ಮೂಲನೆಯಾಗಲು ಸಹಾಯವಾಗುತ್ತದೆ. 

89

ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಸರ್ ಬಳಸಲು ಅಥವಾ ಕನಿಷ್ಠ 20 ಸೆಕೆಂಡುಗಳ ಕಾಲ ಸೋಪ್ ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆಯಲು ಶಿಫಾರಸು ಮಾಡುತ್ತದೆ.

99

ಇದಲ್ಲದೆ ಮಾಸ್ಕ್ ಧರಿಸಿ ಉಸಿರಾಡುವುದು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಿಲ್ಲ. ಮಾಸ್ಕ್ ಧರಿಸುವುದರಿಂದ ಅನಾನುಕೂಲವಾಗಬಹುದು ಆದರೆ ಶ್ವಾಸಕೋಶಕ್ಕೆ ಆಮ್ಲಜನಕದ ಹರಿವನ್ನು ಸೀಮಿತಗೊಳಿಸುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ, ತೀವ್ರ ಶ್ವಾಸಕೋಶದ ಕಾಯಿಲೆ ಇರುವ ಜನರಲ್ಲಿ ಸಹ ಇದರಿಂದ ಹೆಚ್ಚಿನ ಸಮಸ್ಯೆ ಆಗುವುದಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.

click me!

Recommended Stories