ಜೇಡ ಕಚ್ಚಿದ್ರೆ ಭಯ ಬಿಡಿ, ಈ ಮನೆಮದ್ದು ಟ್ರೈ ಮಾಡಿ

First Published | Feb 25, 2023, 2:50 PM IST

ಜೇಡ ಸಣ್ಣ ಕೀಟ ತಾನೇ? ಕಚ್ಚಿದ್ರೆ ಏನೂ ಆಗಲ್ಲ ಎಂದು ನಾವು ನಿರ್ಲಕ್ಷಿಸುವಂತಿಲ್ಲ, ಯಾಕಂದ್ರೆ ಜೇಡ ಕಚ್ಚೋದ್ರಿಂದ ಹಲವು ಸಮಸ್ಯೆಗಳು ಆಗುವ ಸಾಧ್ಯತೆ ಇದೆ. ಅಲ್ಲದೇ ಕೆಲವೊಂದು ವಿಷ ಜೇಡಗಳು ಕಚ್ಚಿದ್ರೆ ಜೀವವೇ ಹೋಗುವ ಸಾಧ್ಯತೆ ಇದೆ. ಆದುದರಿಂದ ಎಚ್ಚರ ವಹಿಸಬೇಕಾದ್ದು ಅಗತ್ಯ. 

ಜೇಡ ಕಚ್ಚಿದ್ದರೆ (spider bite), ಅದು ಅಲರ್ಜಿ, ಚರ್ಮದ ಮೇಲೆ ನೋವಿನಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಕೆಲವೊಮ್ಮೆ ಗಂಭೀರ ಪರಿಸ್ಥಿತಿಗೂ ಕಾರಣವಾಗಬಹುದು. ಆದಾರೆ ನೀವು ಅಂತಹ ಪರಿಸ್ಥಿತಿಯಲ್ಲಿ, ಭಯಪಡಬೇಡಿ. ಯಾಕಂದ್ರೆ ತಕ್ಷಣ ಕೆಲವು ಸುಲಭವಾದ ಮನೆಮದ್ದುಗಳ ಸಹಾಯದಿಂದ ಪರಿಹಾರ ಕಂಡುಕೊಳ್ಳಬಹುದು. ಇದು ನಿಮಗೆ ಪರಿಹಾರವನ್ನು ನೀಡುತ್ತದೆ ಮತ್ತು ನೀವು ತಕ್ಷಣ ಅಲರ್ಜಿಯಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತೆ.

ಜೇಡದ ಬಳಿ ಹೋಗೋದನ್ನು ನೀವು ತಪ್ಪಿಸೋದೆ ಒಳ್ಳೆಯದು. ಒಂದು ವೇಳೆ ಜೇಡ ಕಚ್ಚಿದರೆ ಸ್ವಲ್ಪವೂ ತಡಮಾಡದೆ, ಇಲ್ಲಿ ತಿಳಿಸಿದ ಮನೆಮದ್ದುಗಳನ್ನು ಬಳಕೆ ಮಾಡಬಹುದು. ಅಲರ್ಜಿ ಒಂದು ವೇಳೆ ಹೆಚ್ಚಾದರೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಲು ತಡಮಾಡಬೇಡಿ. ಜೇಡ ಕಚ್ಚಿದರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ.
 

Latest Videos


ಅರಿಶಿಣ (turmeric)
ಅರಿಶಿನವು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಅದು ನೋವು ಮತ್ತು ಉರಿಯೂತವನ್ನು ನಿವಾರಿಸುತ್ತದೆ. ಇದಕ್ಕಾಗಿ, ನೀವು ಒಂದು ಟೀಸ್ಪೂನ್ ಅರಿಶಿನ ಪುಡಿ ಮತ್ತು ಒಂದು ಟೀಸ್ಪೂನ್ ಆಲಿವ್ ಎಣ್ಣೆಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈಗ ಅದನ್ನು ಜೇಡ ಕಚ್ಚಿದ ಜಾಗಕ್ಕೆ ಹಚ್ಚಿ. ಒಂದು ಗಂಟೆ ಕಾಲ ಹಾಗೆ ಬಿಡಿ. ಪರಿಣಾಮವು ಗೋಚರಿಸುತ್ತದೆ.

ಅಲೋವೆರಾ ಜೆಲ್ (aloe vera gel)
ಅಲೋವೆರಾ ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಜೇಡ ಕಡಿತದರೆ ಆ ಜಾಗಕ್ಕೆ ಅಲೋವೆರಾ ಜೆಲ್ ಹಚ್ಚಿ. ಇದರಿಂದ ನೀವು ಕೂಡಲೇ ನೋವು ಮತ್ತು ಊತದಿಂದ ಪರಿಹಾರವನ್ನು ಪಡೆಯುತ್ತೀರಿ. ಇದನ್ನು ದಿನಕ್ಕೆ 3 ರಿಂದ 4 ಬಾರಿ ಇದನ್ನು ಹಚ್ಚೋದನ್ನು ಮರೆಯಬೇಡಿ..
 

ಬೇಕಿಂಗ್ ಸೋಡಾ (baking Soda)
ನೀವು ಬೇಕಿಂಗ್ ಸೋಡಾದ ಪೇಸ್ಟ್ ಅನ್ನು ಪೀಡಿತ ಪ್ರದೇಶದ ಮೇಲೆ ಹಚ್ಚಬಹುದು. ಇದಕ್ಕಾಗಿ, ಒಂದು ಕಪ್ ನಲ್ಲಿ ಸ್ವಲ್ಪ ನೀರು, ಮೂರು ಟೀಸ್ಪೂನ್ ಅಡುಗೆ ಸೋಡಾವನ್ನು ಸೇರಿಸಿ. ಇದನ್ನು ದಪ್ಪ ಪೇಸ್ಟ್ ಮಾಡಿ ನೋವಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಶೀಘ್ರದಲ್ಲೇ ಅದರ ಪರಿಣಾಮ ಗೋಚರಿಸುತ್ತದೆ.

ಬೆಳ್ಳುಳ್ಳಿ ಪೇಸ್ಟ್ (garlic paste)
ಬೆಳ್ಳುಳ್ಳಿ ಗಾಯಗಳನ್ನು ಅಥವಾ ಅಲರ್ಜಿಗಳನ್ನು ವೇಗವಾಗಿ ಗುಣಪಡಿಸುತ್ತದೆ. ಅದರ ಬಳಕೆಗಾಗಿ, ಮೂರು-ನಾಲ್ಕು ಬೆಳ್ಳುಳ್ಳಿ ತೆಗೆದುಕೊಂಡು ಅದನ್ನು ರುಬ್ಬಿ ಪೇಸ್ಟ್ ಮಾಡಿ. ಈಗ ಅದನ್ನು ಜೇಡ ಕಚ್ಚಿದ ಜಾಗಕ್ಕೆ ಹಚ್ಚಿ. ನೀವು ಅದನ್ನು ರಾತ್ರಿಯಲ್ಲಿ ಗಾಯದ ಮೇಲೆ ಹಾಕಿ ಕರವಸ್ತ್ರದಿಂದ ಕಟ್ಟಿ,. ಬೆಳಿಗ್ಗೆ ನೀರಿನಿಂದ ತೊಳೆಯಿರಿ. ಬೆಳಿಗ್ಗೆಯ ಹೊತ್ತಿಗೆ, ಕಿರಿಕಿರಿ ಮತ್ತು ಕೆಂಪಾಗುವುದು ಮಾಯವಾಗುತ್ತದೆ.

ಜೇಡ ಕಚ್ಚಿದಾಗ ಇದನ್ನು ಮೊದಲು ಮಾಡಿ
ಮಯೋಕ್ಲಿನಿಕ್ ಪ್ರಕಾರ, ಮೊದಲನೆಯದಾಗಿ, ಜೇಡ ಕಚ್ಚಿದ ಸ್ಥಳವನ್ನು ಸಾಬೂನಿನಿಂದ ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ನಂತರ ಯಾವುದೇ ರೀತಿಯ ಆಂಟಿಬಯಾಟಿಕ್ ಕ್ರೀಮ್ ಹಚ್ಚಿ. ಪ್ರತಿ ಗಂಟೆಗೊಮ್ಮೆ ಕೋಲ್ಡ್ ಕಂಪ್ರೆಸ್ (cold compress) ನೀಡಿ ಮತ್ತು ಅಪಾಯಕಾರಿ ಜೇಡ ಕಚ್ಚಿದ್ದರೆ, ವೈದ್ಯರ ಬಳಿಗೆ ಹೋಗಿ.

click me!