ಅಲ್ಲಿ ಮ್ಯಾನ್‌ಸ್ಕೇಪ್ ಮಾಡುವ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕು 5 ವಿಷಯಗಳು!

First Published | Apr 3, 2021, 5:39 PM IST

ಕೇವಲ ಹೆಂಗಸರು ಮಾತ್ರವಲ್ಲ ಈಗ ಹೆಚ್ಚಿನ ಗಂಡಸರು ದೇಹದ ಮೇಲೆ ಬೇಡದ ಕೂದಲನ್ನು ನಿಯಮಿತವಾಗಿ ಶುಚಿಗೊಳಿಸಿ ಟ್ರಿಮ್ ಮಾಡುತ್ತಾರೆ . ಎದೆ ಅಥವಾ ಕಂಕುಳ ಕೂದಲನ್ನು ಶೇವಿಂಗ್ ಮಾಡುವುದು ಅಥವಾ ಕತ್ತರಿಸುದು ಸುಲಭದ ಕೆಲಸ ವಾಗಿರಬಹುದು. ಆದರೆ ಪ್ಯೂಬಿಕ್ ಕೂದಲನ್ನು ಕತ್ತರಿಸಿ ಕೊಳ್ಳುವುದು ಒಂದು ಕಠಿಣ ಕೆಲಸ. ಮತ್ತು ಅದನ್ನು ಮಾಡಲು ಸರಿಯಾದ ಟ್ರಿಕ್ ಅನ್ನು ಪ್ರತಿಯೊಬ್ಬ ಪುರುಷನೂ ಕಲಿಯಬೇಕಾದುದು ಬಹಳ ಮುಖ್ಯ, 

ಸೂಕ್ಷ್ಮ ಪ್ರದೇಶಗಳಲ್ಲಿ ಶೇವಿಂಗ್ ಮಾಡುವ ಮುನ್ನ ಎಚ್ಚರದಿಂದಿರಬೇಕು. ಯಾಕೆಂದರೆ ಖಂಡಿತವಾಗಿಯೂ ಎಲ್ಲಾ ಕ್ಷೌರಿಕನಿಗೆ ಬ್ರೆಜಿಲಿಯನ್ ವ್ಯಾಕ್ಸ್ ಬರುವುದಿಲ್ಲ. ಮ್ಯಾನ್ಸ್ಕೇಪ್ ಮಾಡುವ ಮುನ್ನ ಪ್ರತಿಯೊಬ್ಬ ಪುರುಷನು ಗಮನದಲ್ಲಿಟ್ಟುಕೊಳ್ಳಬೇಕಾದ 5 ಅಂಶಗಳು ಇಲ್ಲಿವೆ.
1. ಶೇವ್ ಮಾಡುವ ಮೊದಲು ಸ್ನಾನ ಮಾಡಿಶೇವ್ಗೆ ಹೋಗುವ ಮುನ್ನ ಬಿಸಿ ಸ್ನಾನ ಮಾಡುವುದರಿಂದ ಕೆಲಸ ಸುಲಭವಾಗುತ್ತದೆ ಏಕೆಂದರೆ ಪ್ಯೂಬಿಕ್ ಕೂದಲು ಮೃದುವಾಗುತ್ತದೆ ಮತ್ತು ಟ್ರಿಮ್ಮರ್ ಅಥವಾ ಶೇವರ್ನಿಂದ ಸುಲಭವಾಗಿ ತೆಗೆಯಬಹುದು.
Tap to resize

2. ಮಾಯಿಶ್ಚರೈಸರ್ ಅಥವಾ ಕಂಡೀಷನರ್ ಬಳಸಿಕೂದಲನ್ನು ಶೇವ್ ಮಾಡಲು ಯೋಚಿಸುತ್ತಿದ್ದರೆ, ಈ ಗ್ರೂಮಿಂಗ್ ಹ್ಯಾಕ್ ಅನ್ನು ಅನುಸರಿಸಬಹುದು ಮತ್ತು ಹೋಗುವ ಮುನ್ನ ಹೇರ್ ಕಂಡೀಷನರ್ ಅಥವಾ ಬಾಡಿ ಮಾಯಿಶ್ಚರೈಸರ್ ಅನ್ನು ಬಳಸಬಹುದು. ಇದರಿಂದ ಅನಗತ್ಯ ಕಟ್ಗಳಿಂದ ರಕ್ಷಿಸುತ್ತದೆ.
3. ಬಳಸುವ ಮುನ್ನ ಕತ್ತರಿ ಅಥವಾ ಟ್ರಿಮ್ಮರ್ ಅನ್ನು ಸೋಂಕು ರಹಿತಗೊಳಿಸಲು ಮರೆಯಬೇಡಿಪ್ಯೂಬಿಕ್ ಪ್ರದೇಶವನ್ನು ಸ್ವಚ್ಛಗೊಳಿಸಲು ಬಳಸುವ ಕತ್ತರಿ ಅಥವಾ ರೇಜರ್ ಅನ್ನುದೇಹದ ಇತರ ಯಾವುದೇ ಭಾಗದಲ್ಲಿ ನೈರ್ಮಲ್ಯದ ಉದ್ದೇಶಗಳಿಗಾಗಿ ಬಳಸಬಾರದು.
ಟ್ರಿಮ್ ಮಾಡಲು ಬಳಸುವ ಮೊದಲು ಮತ್ತು ನಂತರ ರೇಜರ್ ಅಥವಾ ಟ್ರಿಮ್ಮರ್ ಅನ್ನು ಯಾವಾಗಲೂ ಸರಿಯಾಗಿ ಸ್ವಚ್ಛಗೊಳಿಸಿ ಸೋಂಕು ರಹಿತವಾಗಿಸಬೇಕು.
4. ಅನುಪಾತವನ್ನು ಸಮತೋಲನಗೊಳಿಸಿಪ್ಯೂಬಿಕ್ ಕೂದಲಿನ ಬುಡವನ್ನು ಟ್ರಿಮ್ ಮಾಡುವಾಗ, ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಇದು ಅನುಪಾತದಲ್ಲಿರಬೇಕು.
5. ಕ್ರೀಮ್ ಬಳಸಿತುರಿಕೆಯ ಕ್ರೀಮ್ ಬಳಸುವುದು ಕೂದಲನ್ನು ಶೇವ್ ಮಾಡಿದ ನಂತರ ತುರಿಕೆಯಿಂದ ರಕ್ಷಿಸುತ್ತದೆ. ಇದು ಸಾರ್ವಜನಿಕವಾಗಿ ತುರಿಕೆಯನ್ನುಂಟು ಮಾಡುವ ಪ್ರಚೋದನೆಯನ್ನು ಹೊಂದಿರುವ ಆ ಮುಜುಗರದ ಕ್ಷಣಗಳಿಂದ ರಕ್ಷಿಸುತ್ತದೆ.

Latest Videos

click me!