ಯಾವುದೇ ಲಕ್ಷಣವಿಲ್ಲದೇ ಮೌನವಾಗಿ ಮನುಷ್ಯನನ್ನು ಕೊಲ್ಲವ 5 ರೋಗಗಳು!!!

Suvarna News   | Asianet News
Published : Apr 03, 2021, 05:23 PM IST

ಕ್ಯಾನ್ಸರ್, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಂತಹ ಅನೇಕ ದೀರ್ಘಕಾಲೀನ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವಿಕೆ ಪ್ರಮುಖವಾಗಿದೆ. ಆದಾಗ್ಯೂ, ಕೆಲವು ರೋಗಗಳನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚುವುದು ಕಷ್ಟ, ಏಕೆಂದರೆ ಅವುಗಳು ತುಂಬಾ ತಡವಾದರೂ ಯಾವುದೇ ಲಕ್ಷಣಗಳನ್ನು ತೋರುವುದಿಲ್ಲ. 

PREV
112
ಯಾವುದೇ ಲಕ್ಷಣವಿಲ್ಲದೇ ಮೌನವಾಗಿ ಮನುಷ್ಯನನ್ನು ಕೊಲ್ಲವ 5 ರೋಗಗಳು!!!

ಕೊರೊನಾವೈರಸ್ ಎಂಬ ವೈರಸ್ ನ ಸೋಂಕಿಗೆ ಒಳಗಿರುವ ಕೆಲವು ಜನರು ಸಹ ಅಸಿಂಪ್ಟಮೆಟಿಕ್. ಅಂದರೆ ವೈರಸ್‌ನ ಯಾವುದೇ ಲಕ್ಷಣಗಳನ್ನೂ ಪ್ರದರ್ಶಿಸುವುದಿಲ್ಲ. ಬಹುತೇಕ ವಿಧದ ಕ್ಯಾನ್ಸರ್ಸ್ ತಮ್ಮ ಆರಂಭಿಕ ಹಂತದಲ್ಲಿ ಇದೇ ರೀತಿ ಆಗಿರುತ್ತದೆ. ತಡವಾಗಿ ಪತ್ತೆಯಾಗುವುದರಿಂದಾಗಿ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕ್ಯಾನ್ಸರ್ ಮರಣಗಳಿಗೆ ಕಾರಣವಾಗುತ್ತದೆ. ಅರಿವಿಲ್ಲದೆಯೇ  ನರಳಬಹುದಾದ 5 ಕಾಯಿಲೆಗಳನ್ನು ಕೆಳಗೆ ನೀಡಲಾಗಿದೆ. ಈ ರೋಗಗಳನ್ನು ಹೇಗೆ ಬೇಗ ಪತ್ತೆ ಹಚ್ಚಬಹುದು ಎಂಬುದನ್ನು ಸಹ ತಿಳಿದುಕೊಳ್ಳಿ.

212

ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡ ಇರುವವರಲ್ಲಿ ಅರ್ಧದಷ್ಟು ಜನರಿಗೆ ಯಾವುದೇ ಸ್ಪಷ್ಟ ಲಕ್ಷಣಗಳು ಗೊತ್ತಾಗುವುದಿಲ್ಲ. ಈ ಕಾರಣಕ್ಕಾಗಿಯೇ ಅಧಿಕ ರಕ್ತದೊತ್ತಡವನ್ನು 'ಸೈಲೆಂಟ್ ಕಿಲ್ಲರ್' ಎಂದು ಕರೆಯಲಾಗುತ್ತದೆ. ರಕ್ತದೊತ್ತಡದ ಪೂರ್ವ  ರಕ್ತದೊತ್ತಡವು 120 ರಿಂದ 129 mmHg (ಸಿಸ್ಟೊಲಿಕ್ ಅಥವಾ ಮೇಲಿನ ಸಂಖ್ಯೆ) ಮತ್ತು/ಅಥವಾ 80 ರಿಂದ 89 mmHg (ಡಯಾಸ್ಟೊಲಿಕ್, ಅಥವಾ ಕಡಿಮೆ ಸಂಖ್ಯೆ) ಇದ್ದರೆ,  ರಕ್ತದೊತ್ತಡವು 140/90 mmHg ಗಿಂತ ಹೆಚ್ಚು ಇರುತ್ತದೆ. 

312

ಅಧಿಕ ರಕ್ತದೊತ್ತಡವು ಹೃದಯ, ಅಪಧಮನಿಗಳು ಮತ್ತು ಇತರ ಅಂಗಗಳಿಗೆ ಹಾನಿಯಾಗುವವರೆಗೆ ಗಮನದಲ್ಲಿರದೆ ಹೋಗಬಹುದು. ಇದನ್ನು ದೀರ್ಘಕಾಲದಿಂದ ಅನಿಯಂತ್ರಿತವಾಗಿ ಬಿಟ್ಟಾಗ, ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ, ಕಣ್ಣು ಹಾನಿ ಅಥವಾ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಆದ್ದರಿಂದ, ಯಾವುದೇ ಅಪಾಯದ ಅಂಶವಿಲ್ಲದಿದ್ದರೂ ವರ್ಷಕ್ಕೊಮ್ಮೆ ರಕ್ತದೊತ್ತಡವನ್ನು ಪರೀಕ್ಷಿಸುವುದು ತುಂಬಾ ಮುಖ್ಯ.

412

ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಪಿಸಿಒಎಸ್
ಇದು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಪುರುಷ ಹಾರ್ಮೋನುಗಳು (ಆಂಡ್ರೋಜೆನ್‌ಗಳು) ಇರುವ ಒಂದು ಸ್ಥಿತಿ. ಈ ಹಾರ್ಮೋನ್ ಅಸಮತೋಲನವು ಅಂಡೋತ್ಪತ್ತಿಗೆ ಅಡ್ಡಿಯುಂಟು ಮಾಡಬಹುದು ಮತ್ತು ಈ ಸ್ಥಿತಿ ಇರುವ ಮಹಿಳೆಯರಿಗೆ ಗರ್ಭಧಾರಣೆಯನ್ನು ಕಷ್ಟಕರವಾಗಿಸಬಹುದು. ಇದು ಹೃದ್ರೋಗ ಮತ್ತು ಟೈಪ್ 2 ಮಧುಮೇಹದಂತಹ ಇತರ ದೀರ್ಘಕಾಲೀನ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸಬಹುದು. 

512

ಅಂದಾಜಿನ ಪ್ರಕಾರ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಶೇ.10 ಎಲ್ಲಾ ವಯಸ್ಸಿನ ಮಹಿಳೆಯರಲ್ಲಿ ಕಾಣಿಸುತ್ತಿದೆ. ಆದರೆ ಈ ಮಹಿಳೆಯರಲ್ಲಿ ಅರ್ಧದಷ್ಟು ಮಹಿಳೆಯರಲ್ಲಿ ರೋಗಪತ್ತೆ ಮಾಡಲು ಕಷ್ಟವಾಗುವುದು. ಅನಿಯಮಿತ ಋತುಚಕ್ರಗಳು ಅಥವಾ ತಪ್ಪಿದ ಋತುಚಕ್ರಗಳು ಪಿಸಿಒಎಸ್‌ನ ಪ್ರಮುಖ ಚಿಹ್ನೆಯಾಗಿದೆ. 

612

ಗರ್ಭಧಾರಣೆಯನ್ನು ತಪ್ಪಿಸಲು ಪಿಲ್ಸ್ ಅನ್ನು ತೆಗೆದುಕೊಳ್ಳುವ ಮಹಿಳೆಯರು ಈ ಚಿಹ್ನೆಯನ್ನು ವರ್ಷಾನು ಕಾಲ ಕಳೆದುಕೊಳ್ಳಬಹುದು. ಪಿಸಿಒಎಸ್ ನ ಇತರ ಸಂಭಾವ್ಯ ಚಿಹ್ನೆಗಳು ಮತ್ತು ಲಕ್ಷಣಗಳೆಂದರೆ ವಯಸ್ಕರ ಮೊಡವೆ, ಮುಖ ಅಥವಾ ದೇಹದ ಕೂದಲು, ಮತ್ತು ನಿಮ್ಮ ತಲೆಯ ಮೇಲೆ ತೆಳುವಾದ ಕೂದಲು. 

712

ಶ್ವಾಸಕೋಶದ ಕ್ಯಾನ್ಸರ್
ಇದು ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಸಾವಿಗೆ ಪ್ರಮುಖ ಕಾರಣವಾಗಿದ್ದು, ಕ್ಯಾನ್ಸರ್‌ನ ಮರಣದ ಪ್ರಮಾಣವು ಶೇಕಡಾ 25ರಷ್ಟು ಇದೆ ಎಂದು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ತಿಳಿಸಿದೆ. ದುರದೃಷ್ಟವಶಾತ್, ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ಅದರ ಆರಂಭಿಕ ಹಂತದಲ್ಲಿ ಲಕ್ಷಣಗಳನ್ನು ಹೊಂದಿರುವುದಿಲ್ಲ. ರೋಗವು ಮುಂದುವರಿದಾಗ, ಅನೇಕ ವೇಳೆ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ, ಇದು ಮರಣ ಪ್ರಮಾಣವು ಹೆಚ್ಚುಸುತ್ತವೆ. 

812

ಶ್ವಾಸಕೋಶದ ಕ್ಯಾನ್ಸರ್ ನ ನಂತರದ ಹಂತಗಳಲ್ಲಿ, ಒಣ ಕೆಮ್ಮು, 2 ಅಥವಾ 3 ವಾರಗಳ ನಂತರ ಹೋಗದೇ ಇರುವ ಒಣ ಕೆಮ್ಮು, ಎದೆನೋವು, ಉಸಿರಾಟದ ತೊಂದರೆ, ರಕ್ತ ಕೆಮ್ಮು, ನಿರಂತರ ಸುಸ್ತು ಅಥವಾ ಶಕ್ತಿಯ ಕೊರತೆ ಉಂಟಾಗಬಹುದು.  ಸಿಟಿ ಸ್ಕ್ಯಾನ್ ಶ್ವಾಸಕೋಶದ ಕ್ಯಾನ್ಸರ್ ನಿಂದ ಬರುವ ಸಾವುಗಳನ್ನು ಸುಮಾರು 20 ಪ್ರತಿಶತದಷ್ಟು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳು ತೋರಿಸಿವೆ. 55 ವರ್ಷ ಮೇಲ್ಪಟ್ಟ ಮಾಜಿ ಮತ್ತು ಹಾಲಿ ಧೂಮಪಾನಿಗಳಿಗೆ ವಾರ್ಷಿಕ ಸಿಟಿ ಶ್ವಾಸಕೋಶದ ಸ್ಕ್ಯಾನ್ ಮಾಡಲು ಸಲಹೆ ನೀಡಲಾಗುತ್ತದೆ.

912

ಗ್ಲುಕೋಮಾ
60 ವರ್ಷ ಮೇಲ್ಪಟ್ಟವರಿಗೆ ಇದು ಕುರುಡುತನಕ್ಕೆ ಪ್ರಮುಖ ಕಾರಣವಾಗಿದೆ. ಗ್ಲುಕೋಮಾ ಕಣ್ಣಿನ ಕಾಯಿಲೆಯ ಒಂದು ಗುಂಪು, ಇದು ದೃಷ್ಟಿ ನರವನ್ನು ಹಾನಿಗೊಳಿಸಬಹುದು ಮತ್ತು ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ. ಹಾನಿಯು ತೀವ್ರವಾಗುವವರೆಗೆ ಗ್ಲುಕೋಮಾದ ಲಕ್ಷಣಗಳು ಸಾಮಾನ್ಯವಾಗಿ ಸ್ಪಷ್ಟವಾಗಿಲ್ಲ. ಈ ಕಾರಣಕ್ಕಾಗಿ ಗ್ಲಾಕೋಮಾವನ್ನು 'ದೃಷ್ಟಿಯ ಮೂಕ ಕಳ್ಳ' ಎಂದು ಕರೆಯಲಾಗುತ್ತದೆ. 

1012

ರೋಗವು ಮುಂದುವರಿದಂತೆ,  ದೃಷ್ಟಿಯಲ್ಲಿ ಕುರುಡು ಚುಕ್ಕೆಗಳು ಬೆಳೆಯುತ್ತವೆ. ಕಣ್ಣಿನ ತಜ್ಞರು ಅಥವಾ ನೇತ್ರ ತಜ್ಞರು ದೃಷ್ಟಿ ಕಳೆದುಕೊಳ್ಳುವ ಮುನ್ನ ಈ ರೋಗವನ್ನು ಪತ್ತೆ ಹಚ್ಚಬಹುದು ಎಂದು ವರ್ಷಕ್ಕೊಮ್ಮೆ ಸಮಗ್ರ ನೇತ್ರ ತಪಾಸಣೆಗಳನ್ನು ಪಡೆಯುವುದು ಸೂಕ್ತ ಎಂದು ಸಲಹೆ ನೀಡುತ್ತಾರೆ.aa

1112

ಕ್ಲಾಮೈಡಿಯಾ
ಬ್ಯಾಕ್ಟೀರಿಯಾ ಕ್ಲ್ಯಾಮೈಡಿಯಾ ಟ್ರಾಕೊಮ್ಯಾಟಿಸ್ನಿಂದ ಉಂಟಾಗುವ ಲೈಂಗಿಕವಾಗಿ ಹರಡುವ ಈ ಸೋಂಕು (ಎಸ್ಟಿಐ) ಪ್ರತಿಜೀವಕಗಳ ಮೂಲಕ ಸುಲಭವಾಗಿ ಚಿಕಿತ್ಸೆ ಪಡೆಯಬಹುದು. ಆದರೆ ಚಿಕಿತ್ಸೆಯನ್ನು ಪಡೆಯದಿದ್ದರೆ, ಅದು ದೇಹದ ಇತರ ಭಾಗಗಳಿಗೆ ಹರಡಬಹುದು ಮತ್ತು ಬಂಜೆತನ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

1212

ಸಾಮಾನ್ಯವಾಗಿ ಕ್ಲಾಮೈಡಿಯಾ ಆರಂಭಿಕ ಹಂತದಲ್ಲಿ ಕೆಲವು ಅಥವಾ ಯಾವುದೇ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಅಲ್ಲದೆ, ರೋಗಲಕ್ಷಣಗಳು  ಕಂಡುಬಂದಾಗ, ಅವುಗಳು ಹೆಚ್ಚಾಗಿ ಸೌಮ್ಯವಾಗಿರುತ್ತವೆ, ಇದರಿಂದ ಅವುಗಳನ್ನು ಪತ್ತೆ ಹಚ್ಚುವುದು ಕಷ್ಟ. ಕ್ಲಾಮೈಡಿಯ ಸಾಮಾನ್ಯ ಚಿಹ್ನೆಗಳು ಮತ್ತು ಲಕ್ಷಣಗಳೆಂದರೆ, ನೋವಿನ ಮೂತ್ರವಿಸರ್ಜನೆ, ಮಹಿಳೆಯರಲ್ಲಿ ಯೋನಿ ವಿಸರ್ಜನೆ, ಪುರುಷರಲ್ಲಿ ಶಿಶ್ನದಿಂದ ವಿಸರ್ಜನೆ, ಮಹಿಳೆಯರಲ್ಲಿ ನೋವಿನ ಲೈಂಗಿಕ ಕ್ರಿಯೆ, ಮುಟ್ಟಿನ ನಡುವೆ ರಕ್ತಸ್ರಾವ, ಮಹಿಳೆಯರಲ್ಲಿ ಲೈಂಗಿಕ ಕ್ರಿಯೆಯ ನಂತರ ರಕ್ತಸ್ರಾವ, ಪುರುಷರಲ್ಲಿ ವೃಷಣದ ನೋವು, ಇತ್ಯಾದಿ.

click me!

Recommended Stories