ಕಾಫಿ ,ಟೀ, ಜ್ಯೂಸ್‌ ಜೊತೆ ಔಷಧಿ ತೆಗೆದುಕೊಳ್ಳೋದು ಅಪಾಯ!

First Published | Mar 22, 2021, 4:48 PM IST

ಸಾಮಾನ್ಯವಾಗಿ ಹೆಚ್ಚಿನವರು ಔಷಧಿ ಮಾತ್ರೆಗಳನ್ನು ನೀರಿನ ಜೊತೆ ಸೇವಿಸುತ್ತಾರೆ. ಆದರೆ ಅನೇಕ ಜನರಿಗೆ ಜ್ಯೂಸ್, ಕಾಫಿ ಅಥವಾ ಟೀ ಜೊತೆ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ಆದರೆ ಜ್ಯೂಸ್‌ ಮತ್ತು ಚಹಾದೊಂದಿಗೆ ಔಷಧಿ ಸೇವಿಸುವಂತಹ ತಪ್ಪು ಮಾಡಬೇಡಿ. ಇದರಿಂದ ಅಪಾಯ ವಾಗಬಹುದು ಎಂದು ಸಂಶೋಧನೆ ಬಹಿರಂಗಪಡಿಸಿದೆ. ಹಾಗೆ ಮಾಡುವುದರಿಂದ ದೇಹದ ಮೇಲೆ ಹೇಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಲ್ಲಿದೆ ನೋಡಿ ವಿವರ.

ಅನೇಕ ಜನರು ಔಷಧಿಗಳನ್ನು ಜ್ಯೂಸ್‌, ಕಾಫಿ ಮತ್ತು ಚಹಾದೊಂದಿಗೆ ತೆಗೆದುಕೊಳ್ಳುತ್ತಾರೆ. ಅವರಲ್ಲಿ ನೀವು ಒಬ್ಬರಾಗಿದ್ದಲ್ಲಿ ಖಂಡಿತ ಅಪಾಯ ಕಾದಿದೆ ಎಂದರ್ಥ.
ಭಾರತೀಯ ವೈದ್ಯಕೀಯ ಸಂಘವು ನಡೆಸಿದ ಸಂಶೋಧನೆಯಲ್ಲಿ, ಟೀ ಮತ್ತು ಯಾವುದೇ ಜ್ಯೂಸ್‌ನೊಂದಿಗೆ ಔಷಧದ ಬಳಕೆಯು ದೇಹಕ್ಕೆ ಅಪಾಯ ಎಂದುಮಾರಕವಾಗಿದೆ ಎಂದು ಸಾಬೀತಾಗಿದೆ.
Tap to resize

ಈ ರೀತಿಯ ತಪ್ಪನ್ನು ಎಂದಿಗೂ ಮಾಡಬಾರದು. ಔಷಧಿಗಳಿಂದ ಪ್ರಯೋಜನ ಪಡೆಯುವ ಬದಲು, ದೇಹಕ್ಕೆ ಹಾನಿಯಾಗುವುದೇ ಹೆಚ್ಚು.
ಮೊದಲನೆಯದಾಗಿ, ಚಹಾದೊಂದಿಗೆ ಮೆಡಿಸನ್‌ ಸೇವಿಸುವುದರಿಂದ ಉಂಟಾಗುವ ಹಾನಿಯ ಬಗ್ಗೆ ತಿಳಿಯೋಣ.
ಟೀ ಮತ್ತು ಔಷಧಿಯನ್ನು ಒಟ್ಟಿಗೆ ಸೇವಿಸಿದಾಗ, ಅದರಲ್ಲಿರುವ ಅಂಶಗಳುಔಷಧವನ್ನು ತಟಸ್ಥಗೊಳಿಸುತ್ತದೆ.
ಔಷಧಿಯೊಂದಿಗೆ ಚಹಾ ಸೇವಿಸಿದಾಗ ಅದರಲ್ಲಿರುವ ಟ್ಯಾನಿನ್ ಎಂಬ ಅಂಶ ರಾಸಾಯನಿಕ ಪ್ರಕ್ರಿಯೆ ಆರಂಭಿಸುತ್ತದೆ. ಇದು ಔಷಧಿ ಪರಿಣಾಮ ಬೀರದಂತೆ ಮಾಡುತ್ತದೆ.
ಚಹಾ ಅಥವಾ ಕಾಫಿಯೊಂದಿಗೆ ತೆಗೆದುಕೊಂಡ ಔಷಧದ ಗುಣ ಹೋಗುತ್ತದೆ ಅಥವಾ ಅದು ನಿಷ್ಪರಿಣಾಮಕಾರಿಯಾಗುತ್ತದೆ.
ಮತ್ತೊಂದೆಡೆ, ಜ್ಯೂಸ್‌ಗಳೊಂದಿಗೆ ಮೆಡಿಸನ್ಸ್ ತೆಗೆದುಕೊಂಡಾಗ, ಗುಣವಾಗುವ ಪ್ರಕ್ರಿಯೆನಿಧಾನವಾಗುತ್ತದೆ.
ಹುಳಿ ಹಣ್ಣಿನ ರಸವು ಔಷಧದ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಹಾಗಾಗಿ ಯಾವಾಗಲೂ ಬರೀ ನೀರಿನಿಂದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಹಾಲಿನ ಜೊತೆಗೆ ಮಾತ್ರೆ ಔಷಧಿಯ ಸೇವನೆಯು ಪ್ರಯೋಜನಕಾರಿಯಾಗಿದೆ.
ಆದರೆಕಾಫಿ ಟೀ ಮತ್ತು ಜ್ಯೂಸ್‌ನೊಂದಿಗೆ ಔಷಧಿಗಳನ್ನು ಸೇವಿಸುವ ತಪ್ಪನ್ನು ಮಾತ್ರ ಎಂದಿಗೂ ಮಾಡಬಾರದು.

Latest Videos

click me!