ಏಲಕ್ಕಿ ಎರಡು ವಿಧ: ದೊಡ್ಡ ಮತ್ತು ಸಣ್ಣ ಏಲಕ್ಕಿ. ಸಣ್ಣ ಹಸಿರು ಏಲಕ್ಕಿ ಇದನ್ನು ಪಾನ್, ಸಿಹಿ ತಿಂಡಿಗಳು (Sweets) ಮತ್ತು ಅಡುಗೆಯಲ್ಲಿ ಬಳಸಲಾಗುತ್ತದೆ. ಏಲಕ್ಕಿಯು ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ ಮಾತ್ರವಲ್ಲದೆ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ (health benefits). ಏಲಕ್ಕಿ ಪೋಷಕಾಂಶಗಳ (Vitamins) ನಿಧಿಯಾಗಿದ್ದು, ಇದು ಅನೇಕ ರೋಗಗಳಿಗೆ ಚಿಕಿತ್ಸೆ (Treatment) ನೀಡುತ್ತೆ.
ಏಲಕ್ಕಿಯನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ (mouth freshener) ನಿವಾರಣೆಯಾಗುವುದಲ್ಲದೆ ನೆಗಡಿ (Cold), ಕೆಮ್ಮು (Cough), ಜೀರ್ಣ ಸಮಸ್ಯೆಗಳು (Digestion), ವಾಂತಿ (Vomiting), ಮೂತ್ರದ ಸಮಸ್ಯೆಗಳೂ (urine problem)ಪರಿಹಾರವಾಗುತ್ತದೆ. ಏಲಕ್ಕಿಯಲ್ಲಿ ಮೆಗ್ನೀಶಿಯಂ (Magnesium) ಮತ್ತು ಪೊಟ್ಯಾಶಿಯಂ (Potassium) ಸಮೃದ್ಧವಾಗಿದೆ, ಇದು ಯಾವಾಗಲೂ ದೇಹದ ರಕ್ತ ಪರಿಚಲನೆಯನ್ನು ಸಾಮಾನ್ಯ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಇಂತಹ ಪ್ರಯೋಜನಕಾರಿ ಏಲಕ್ಕಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುದಿಸಿ ಅದರ ಕಷಾಯ ಅಥವಾ ನೀರನ್ನು ಕುದಿಸಿ ಕುಡಿಯುವುದರಿಂದ ಪ್ರಯೋಜನವನ್ನು ಪಡೆಯುತ್ತೀರಿ. ಏಲಕ್ಕಿ ನೀರು ಅಥವಾ ಕಷಾಯ ಕುಡಿಯುವುದರಿಂದ ಆಗುವ ಆರೋಗ್ಯ ಲಾಭಗಳು ಮತ್ತು ಅದನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿದೆ.
ಏಲಕ್ಕಿ ನೀರನ್ನು ಈ ಕೆಳಗಿನಂತೆ ಮಾಡಿ:
ಏಲಕ್ಕಿ ನೀರನ್ನು ತಯಾರಿಸಲು ಮೊದಲು ಒಂದು ಲೀಟರ್ ನೀರನ್ನು(1 ltr water) ತೆಗೆದುಕೊಂಡು ಅದರಲ್ಲಿ 5-6 ಏಲಕ್ಕಿ ಸಿಪ್ಪೆಯನ್ನು ಸುಲಿದು ರಾತ್ರಿಯಿಡೀ ನೀರಿನಲ್ಲಿ ನೆನೆಯಲು ಬಿಡಿ.
ನೆನೆಸಿದ ಏಲಕ್ಕಿ ನೀರನ್ನು ಒಂದು ಬಾಣಲೆಯಲ್ಲಿ ಹಾಕಿ ಪೂರ್ತಿಯಾಗಿ ಕುದಿಸಿ. 3/4 ನೇ ಉಳಿದಿರುವಾಗ ಗ್ಯಾಸ್ ಆಫ್ (gas off) ಮಾಡಿ.
ಈಗ ಈ ನೀರನ್ನು ಸೋಸಿ ಒಂದು ಜಾರ್ ಅಥವಾ ಬಾಟಲಿಯಲ್ಲಿ ಹಾಕಿಡಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಕುಡಿಯಿರಿ.
ಏಲಕ್ಕಿ ನೀರು ಕುಡಿಯುವ ಪ್ರಯೋಜನಗಳು
ಏಲಕ್ಕಿ ನೀರು ದೇಹದಲ್ಲಿನ ಸಕ್ಕರೆ ಮಟ್ಟವನ್ನು (sugar level) ನಿಯಂತ್ರಿಸುತ್ತದೆ:
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಏಲಕ್ಕಿ ನೀರು ಅತ್ಯಂತ ಸಹಾಯಕ. ಮಧುಮೇಹ (diabetic) ರೋಗಿಗಳು ಇದನ್ನು ಕೆಲವು ದಿನಗಳ ಕಾಲ ಸೇವಿಸಿದರೆ ಪ್ರಯೋಜನ ವಾಗುತ್ತದೆ.
ಜೀರ್ಣಕ್ರಿಯೆಯನ್ನು ನಿರ್ವಹಿಸುತ್ತದೆ:
ಮಲಬದ್ಧತೆ (constipation) ಮತ್ತು ಗ್ಯಾಸ್ ಸಮಸ್ಯೆ ಇದ್ದರೆ ಏಲಕ್ಕಿ ನೀರನ್ನು ಸೇವಿಸಿ. ಇದರ ನಿಯಮಿತ ಸೇವನೆಯು ಎಲ್ಲಾ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ ಜೊತೆಗೆ ಹೊಟ್ಟೆ ಹಗುರಾಗುತ್ತದೆ.
ತೂಕ ನಿಯಂತ್ರಣಕ್ಕೆ ಸಹಕಾರಿ
ತೂಕ ಹೆಚ್ಚಳದಿಂದ (weight gain) ಬಳಲುತ್ತಿದ್ದರೆ ಏಲಕ್ಕಿ ನೀರನ್ನು ಸೇವಿಸಿ. ಇದರಲ್ಲಿ ಇರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕುವ ಮೂಲಕ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ:
ಕೊಲೆಸ್ಟ್ರಾಲ್ ಸಮಸ್ಯೆ (cholesterol problem) ಹೆಚ್ಚಿರುವವರು ಏಲಕ್ಕಿ ನೀರನ್ನು ಸೇವಿಸಿ. ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವ ಮೂಲಕ ಹೃದ್ರೋಗಗಳನ್ನು (Heart Problem) ದೂರವಿಡಲು ಸಹಾಯ ಮಾಡುತ್ತದೆ. ಇದರಿಂದ ನೀವು ಆರೋಗ್ಯದಿಂದಿರಲು ಸಹಾಯವಾಗುತ್ತದೆ.