54 ವರ್ಷ ವಯಸ್ಸಿನ ಮೂತ್ರಪಿಂಡ ವೈಫಲ್ಯವಾಗಿದ್ದ ಹಾಗೂ ಶೇ.90ರಷ್ಟು ಬ್ಲಾಕೇಜ್ ಆಗಿದ್ದ ರೋಗಿಗೆ ಕಾಂಪ್ಲೆಕ್ಸ್ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟೆಂಟ್ ಅಳವಡಿಸುವ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು ಎಂದು ಸ್ವತಃ ಡಾ. ಸಿಎನ್ ಮಂಜುನಾಥ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಮೂತ್ರಪಿಂಡ ವೈಫಲ್ಯ ಹಾಗೂ ಶೇ.90ರಷ್ಟು ಬ್ಲಾಕೇಜ್ ಆಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿ. ಜಯನಗರದ ಬೆಂಗಳೂರು ಹಾಸ್ಪಿಟಲ್ ಅಡ್ಮಿಟ್ ಮಾಡಿ ನಿನ್ನೆ ಸರ್ಜರಿ ನಡೆಸಿದ್ದ ಡಾ ಮಂಜುನಾಥ್. ಆರ್ಬಿಟಲ್ ಅಥೆರೆಕ್ಟಮಿ ಸಾಧನ ಬಳಸಿಕೊಂಡು ಯಶಸ್ವಿಯಾಗಿ ಸರ್ಜರಿ ಮಾಡಿದ್ದಾರೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಸಂಸದರು. ಸರ್ಜರಿ ಯಶಸ್ವಿ ಬಗ್ಗೆ ಹಂಚಿಕೊಂಡಿದ್ದಾರೆ.ಜಯನಗರದ ಬೆಂಗಳೂರು ಹಾಸ್ಪಿಟಲ್ ರೋಗಿಗಳಿಗೆ ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತಿದೆ. ಅಗತ್ಯವಿರುವವರು ಆರೋಗ್ಯ ಸೇವೆಯನ್ನು ಪಡೆಯಬಹುದಾಗಿ ಎಂದು ಬರೆದುಕೊಂಡಿದ್ದಾರೆ.
ರಾಜಕೀಯದ ಜೊತೆಗೆ ವೈದ್ಯಕೀಯ ಸೇವೆಯಲ್ಲಿ ತೊಡಗಿಕೊಂಡಿರುವ ಸಂಸದ ಡಾ ಮಂಜುನಾಥ ವಾರದಲ್ಲಿ ಎರಡು ದಿನ ಮೂರು ಗಂಟೆ ಉಚಿತ ವೈದ್ಯಕೀಯ ಸೇವೆ ನೀಡಲು ಮುಂದಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿಎನ್ ಮಂಜುನಾಥ ರಾಜಕೀಯ ಸೇರಿದ ಬಳಿಕ ವೈದ್ಯಕೀಯ ಸೇವೆಗೆ ಗುಡ್‌ಬೈ ಹೇಳುತ್ತಾರೆಂದು ಮಾತನಾಡಿಕೊಂಡಿದ್ದರು. ಆದರೆ ಸಂಸದರು ರಾಜಕೀಯ ಜೊತೆಗೆ ವೈದ್ಯಕೀಯ ಸೇವೆಯಲ್ಲೂ ತೊಡಗಿಕೊಂಡಿರುವುದು ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.