ಚಹಾ ಬಿಡಿ... ಉತ್ತಮ ಆರೋಗ್ಯಕ್ಕಾಗಿ ಗ್ರೀನ್ ಜ್ಯೂಸ್ ಮೂಲಕ ಮುಂಜಾನೆ ಆರಂಭಿಸಿ

First Published Sep 15, 2021, 4:58 PM IST

ಇಂದಿನ ಕಾಲದಲ್ಲಿ, ಜನರು ದಿನವಿಡೀ ತಮ್ಮನ್ನು ಸಕ್ರಿಯವಾಗಿಡಲು ಇಷ್ಟಪಡುತ್ತಾರೆ. ಜೊತೆಗೆ, ಇದು ಇಂದಿನ ಬೇಡಿಕೆಯೂ ಆಗಿದೆ. ಅಂತಹ ಗಡಿಬಿಡಿಯ ಜೀವನದಲ್ಲಿ, ನೀವು ನಿಮ್ಮನ್ನು ಶಕ್ತಿಯಿಂದ ತುಂಬಿರುವಂತೆ ಮಾಡಲು ಬೇರೆ ಬೇರೆ ಮಾರ್ಗಗಳನ್ನು ಪ್ರಯತ್ನಿಸಬೇಕು. ನಿಮಗೆ ಅಂತಹ ಯಾವುದೇ ಮಾರ್ಗತಿಳಿದಿಲ್ಲದಿದ್ದರೆ, ಆಹಾರ ತಜ್ಞರ ಸಹಾಯ ಪಡೆಯಬಹುದು. 

ಆಹಾರ ತಜ್ಞರು ತರಕಾರಿ ರಸಗಳನ್ನು ಸೇವಿಸುವ ಮೂಲಕ, ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ ಅನ್ನೋದನ್ನು ಹೇಳಿ ಕೊಡುತ್ತಾರೆ. ಈ ರಸವನ್ನು ಬೆಳಗ್ಗೆ ಕುಡಿಯುವುದು ಒಳ್ಳೆಯದು. ದಿನವನ್ನು ಚಹಾ ಅಥವಾ ಕಾಫಿಯೊಂದಿಗೆ ಪ್ರಾರಂಭಿಸಿರಬಹುದು. ಆದರೆ ತಜ್ಞರು ಹೇಳುವಂತೆ ಹಸಿರು ರಸವನ್ನು ಒಮ್ಮೆ ಪ್ರಯತ್ನಿಸಿದರೆ, ಪೂರ್ತಿ ದಿನ ಸಕ್ರಿಯರಾಗಿರಲು ಬೇಕಾಗುವಷ್ಟು ಎನರ್ಜಿ ಸಿಗುತ್ತೆ. 

ಈ ರಸವನ್ನು ಹೇಗೆ ತಯಾರಿಸಲಾಗುತ್ತದೆ ಗೊತ್ತಾ? 
ಗ್ರೀನ್ ಜ್ಯೂಸ್ ಪಾಕ ವಿಧಾನ
ಕತ್ತರಿಸಿದ ತೊಂಡೆಕಾಯಿ
ಸೌತೆಕಾಯಿ
ಪುದೀನಾ ಎಲೆಗಳು
ನಿಂಬೆ ರಸ
ಜೀರಿಗೆ ಪುಡಿ
ಉಪ್ಪು
ಪಾರ್ಸ್ಲಿ

ಗ್ರೀನ್ ಜ್ಯೂಸ್ ಪಾಕವಿಧಾನ
ಇದನ್ನು ಮಾಡಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಮಾಡಬೇಕಾಗಿರುವುದು ಈ ಎಲ್ಲಾ ಪದಾರ್ಥಗಳನ್ನು ಜ್ಯೂಸ್ ತಯಾರಿಸಲು ತೆಗೆದುಕೊಂಡು ಬ್ಲೆಂಡರ್ ಜಾರ್‌ನಲ್ಲಿ ಹಾಕಿ. ಈಗ ಬ್ಲೆಂಡರ್ ಸಂಪೂರ್ಣವಾಗಿ ದ್ರವವಾಗಿ ಪರಿವರ್ತಿಸುವವರೆಗೆ ಚಲಿಸಲು ಬಿಡಿ. ಈ ರಸವನ್ನು ಏಕಕಾಲದಲ್ಲಿ ಕುಡಿದರೆ ಪ್ರಯೋಜನವಾಗುತ್ತದೆ.

ಈ ರಸದ ಪ್ರಯೋಜನಗಳನ್ನು ತಿಳಿಯಿರಿ
ಈ ಜ್ಯೂಸ್ ಆರೋಗ್ಯದ ಮೇಲೆ ನೋಡಬಹುದಾದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಪ್ರಯೋಜನಗಳು ಯಾವುವೆಂದು ತಿಳಿಯಿರಿ. ಚಹಾದ ಬದಲು ದಿನವನ್ನು ಈ ಜ್ಯೂಸಿನಿಂದ ಆರಂಭಿಸಿದರೆ ಅದರಿಂದ ಆರೋಗ್ಯದಲ್ಲಿ ಎಷ್ಟು ಬದಲಾವಣೆಗಳು ಆಗಬಹುದು ನೀವೇ ನೋಡಿ... 

ರಕ್ತವನ್ನು ಸ್ವಚ್ಛಗೊಳಿಸಿ , ವಿಷವನ್ನು ಹೊರಹಾಕುತ್ತದೆ 
ಜ್ಯೂಸ್ ಸೇವಿಸುವುದರಿಂದ ರಕ್ತ ಶುದ್ಧೀಕರಿಸುತ್ತದೆ. ಇದಲ್ಲದೆ, ಈ ರಸವು ಯಕೃತ್ತನ್ನು ನಿರ್ವಿಷಗೊಳಿಸುತ್ತದೆ ಮತ್ತು ಕೆಂಪು ರಕ್ತ ಕಣಗಳನ್ನು ಸಹ ಉತ್ಪಾದಿಸುತ್ತದೆ. ಈ ರಸವು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಇದು ಪಿತ್ತಜನಕಾಂಗದಿಂದ ಪಿತ್ತರಸ ಮತ್ತು ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯವೂ ಆರೋಗ್ಯವಾಗಿ ಉಳಿಯುತ್ತದೆ.
 

ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಾಯಕ
ಈ ರಸ ಕಣ್ಣುಗಳಿಗೆ ಪ್ರಯೋಜನಕಾರಿ. ಈ ರಸದಲ್ಲಿ ಅನೇಕ ವಿಟಮಿನ್ ಗಳು ಮತ್ತು ಖನಿಜಗಳಿವೆ. ಇವುಗಳನ್ನು ಸೇವಿಸುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

ಪಿತ್ತರಸ ದೋಷಗಳನ್ನು ಸಮತೋಲನಗೊಳಿಸುತ್ತದೆ
ಈ ರಸವು ಪಿತ್ತವನ್ನು ಬಲಪಡಿಸುತ್ತದೆ. ಪಿತ್ತರಸವನ್ನು ಬಲಪಡಿಸುವುದು ತೂಕ ನಷ್ಟವನ್ನು ಅತ್ಯಂತ ಸುಲಭಗೊಳಿಸುತ್ತದೆ. ಇದು ದೇಹವನ್ನು ಶುದ್ಧೀಕರಿಸುತ್ತದೆ ಮತ್ತು ತ್ಯಾಜ್ಯ ವಸ್ತುಗಳನ್ನು ಹೊರಹಾಕುತ್ತದೆ. ಆ ಮೂಲಕ ಅರೋಗ್ಯ ಹೆಚ್ಚಿಸುತ್ತದೆ.  
 

ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಜ್ಯೂಸ್ ಮಾಡಲು ಈಗ ಕಾಯಬೇಡಿ. ಇವತ್ತೇ ಜ್ಯೂಸ್ ತಕ್ಷಣವೇ ಸೇವಿಸಿ, ನಿಮ್ಮ ಮನೆಯವರಿಗೆ ಸೇವಿಸಲು ನೀಡಿ. ಇದರಿಂದ ಎಲ್ಲರೂ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಜೊತೆಗೆ ದಿನವಿಡೀ ಆಕ್ಟಿವ್ ಆಗಿರಲು ಬೇಕಾದಷ್ಟು ಶಕ್ತಿ ದೇಹಕ್ಕೆ ಸಿಗುತ್ತದೆ. 

click me!