ಶೀಘ್ರದಲ್ಲಿ ಗರ್ಭಿಣಿಯಾಗಬೇಕು ಅಂದರೆ, ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಅರ್ಧ ಗಂಟೆ ಮಲಗಬೇಕು, ನಂತರವಷ್ಟೇ ಬೇರೆ ಕೆಲಸಗಳನ್ನು ಮಾಡಬೇಕು ಎನ್ನುವ ನಂಬಿಕೆ ಇಂದಿಗೂ ಹಲವು ದಂಪತಿಗಳಲ್ಲಿದೆ. ಆದರೆ ಇದು ನಿಜವೇ? ಸ್ತ್ರೀ ರೋಗ ತಜ್ಞರು ಈ ಕುರಿತು ಏನು ಹೇಳುತ್ತಾರೆ ನೋಡೋಣ.
ನೀವು ಪ್ರೆಗ್ನೆನ್ಸಿ ಪ್ಲ್ಯಾನ್ ಮಾಡುತ್ತಿದ್ದರೆ, ಈ ಲೇಖನವು ತುಂಬಾ ಸಹಾಯಕವಾಗಬಹುದು. ಇದು ಅನೇಕ ದಂಪತಿಗಳು ಇನ್ನೂ ನಂಬುವ ಸಾಮಾನ್ಯ ಗರ್ಭಧಾರಣೆಯ ಕುರಿತಾದ ನಂಬಿಕೆಯ ಕುರಿತು ಬೆಳಕು ಚೆಲ್ಲುತ್ತದೆ. ಈ ಮಾಹಿತಿಯನ್ನು ತಿಳಿದುಕೊಳ್ಳುವುದರಿಂದ ತಪ್ಪು ತಿಳುವಳಿಕೆಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡಬಹುದು.
26
ಸಂಭೋಗದ ಬಳಿಕ ಮಲಗಬೇಕೆ?
ಹೆಚ್ಚಿನ ದಂಪತಿಗಳ ನಂಬಿಕೆ ಏನೆಂದರೆ, ಮಹಿಳೆಯರು ಬೇಗನೆ ಗರ್ಭಿಣಿಯಾಗಲು, ಸಂಭೋಗದ ನಂತರ ಕನಿಷ್ಠ ಅರ್ಧ ಗಂಟೆ ಮಲಗಬೇಕು. ಹಾಗೆ ಮಾಡದಿದ್ದರೆ ವೀರ್ಯ ಬಿಡುಗಡೆಯಾಗಿ ಗರ್ಭಧಾರಣೆ ಆಗದಂತೆ ತಡೆಯುತ್ತದೆ. ಆದರೆ ಇದು ನಿಜವೇ ಅಥವಾ ಇದು ಕೇವಲ ಸುಳ್ಳು ನಂಬಿಕೆಯೇ? ಈ ಪ್ರಶ್ನೆಗೆ ಉತ್ತರವನ್ನು ಸ್ತ್ರೀರೋಗತಜ್ಞರೊಬ್ಬರು ತಿಳಿಸಿದ್ದಾರೆ. ಆ ಬಗ್ಗೆ ತಿಳಿಯೋಣ.
36
ಸ್ತ್ರೀರೋಗ ತಜ್ಞರು ಹೇಳಿದ್ದೇನು?
ಇನ್‌ಸ್ಟಾಗ್ರಾಮ್ ವೀಡಿಯೊ ಒಂದರಲ್ಲಿ ಸ್ತ್ರೀರೋಗ ತಜ್ಞೆ ಡಾ. ಉಪಾಸನಾ ಸೆಟಿಯಾ, ವೀರ್ಯವು ಸಂತಾನೋತ್ಪತ್ತಿ ಪ್ರದೇಶವನ್ನು ತಲುಪಲು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ವಿವರಿಸಿದ್ದಾರೆ. ವೈದ್ಯರ ಪ್ರಕಾರ, ಹೆಚ್ಚಿನ ವೀರ್ಯವು ಸಂಭೋಗದ ಸುಮಾರು ಎರಡು ನಿಮಿಷಗಳಲ್ಲಿ ಬಿಡುಗಡೆಯಾಗುತ್ತದೆ, ಇದು ಸಂಪೂರ್ಣವಾಗಿ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ.
ಲೈಂಗಿಕ ಸಂಭೋಗದ ಬಳಿಕ ಅರ್ಧ ಗಂಟೆ ಮಲಗುವುದು ಗರ್ಭಧಾರಣೆಯ ಸಾಧ್ಯತೆಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಹ ವೈದ್ಯರು ತಿಳಿಸಿದ್ದು, ಇದಕ್ಕೆ ಪುರಾವೆ ಇಲ್ಲ, ಇದೊಂದು ಸುಳ್ಳು ನಂಬಿಕೆ ಎಂದಿದ್ದಾರೆ. ಶೀಘ್ರದಲ್ಲಿ ಗರ್ಭಿಣಿಯಾಗಲು ಫರ್ಟಿಲಿಟಿ ವಿಂಡೋ ಕಡೆಗೆ ಗಮನ ಹರಿಸುವುದು ಮುಖ್ಯ ಎಂದಿದ್ದಾರೆ.
56
ನಿಮ್ಮ ಫರ್ಟಿಲಿಟಿ ವಿಂಡೋ ಕಡೆಗೆ ಗಮನ ಹರಿಸಿ
ಮಹಿಳೆಯರ ಸಂತಾನೋತ್ಪತ್ತಿ ಪ್ರದೇಶದಲ್ಲಿ ವೀರ್ಯಾಣುಗಳು ಗರಿಷ್ಠ ಐದು ದಿನಗಳವರೆಗೆ ವಾಸಿಸುತ್ತವೆ ಮತ್ತು ಅವುಗಳ ಸಂಖ್ಯೆ ಲಕ್ಷಾಂತರ ಎಂದು ತಜ್ಞರು ಸೂಚಿಸುತ್ತಾರೆ. ಆದ್ದರಿಂದ, ಗರ್ಭಿಣಿಯಾಗಲು, ಮಹಿಳೆಯರು ತಮ್ಮಫರ್ಟಿಲಿಟಿ ವಿಂಡೋ ಅಥವಾ ಓವ್ಯುಲೇಶನ್ ಸಮಯದಲ್ಲಿ ಸಂಭೋಗ ಮಾಡುವತ್ತ ಗಮನ ಹರಿಸಬೇಕು.
66
ನಿಮ್ಮ ಓವ್ಯುಲೇಶನ್ ಸಮಯ ಯಾವುದು?
ಮಹಿಳೆಯರು ತಮ್ಮ ಫಲವತ್ತತೆಯ ಅವಧಿಯನ್ನು ಸರಿಯಾಗಿ ಲೆಕ್ಕಾಚಾರ ಮಾಡುವುದು ಹೇಗೆ? ಯಾವ ಸಮಯದಲ್ಲಿ ಓವ್ಯುಲೇಶನ್ ಆಗುತ್ತದೆ ಎನ್ನುವ ಕುರಿತು ನೀವು ಸರಿಯಾಗಿ ಗಮನ ಹರಿಸಿ, ಆ ಸಮಯದಲ್ಲಿ ಸಂಭೋಗ ನಡೆಸಿದರೆ, ಖಂಡಿತವಾಗಿಯೂ ಬೇಗನೆ ಗರ್ಭಿಣಿಯಾಗುವ ಸಾಧ್ಯತೆ ಇದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.