ಇಮ್ಯುನಿಟಿ ಹೆಚ್ಚಲಿ ಅಂತ ಬೇಕಾಬಿಟ್ಟಿ ವಿಟಮಿನ್ ಸಿ ತಗೋತೀರಾ..? ಸ್ವಲ್ಪ ಇಲ್ಲಿ ನೋಡಿ

Suvarna News   | Asianet News
Published : Jan 16, 2021, 12:38 PM ISTUpdated : Jan 16, 2021, 12:43 PM IST

2020ರ ವರ್ಷದಲ್ಲಿ ಅತಿ ಹೆಚ್ಚು ಸರ್ಚ್ ಆದ ಕೀವರ್ಡ್ ಇಮ್ಯೂನಿಟಿ. ಕೊರೊನವೈರಸ್ ಸಾಂಕ್ರಾಮಿಕ ರೋಗ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಮತ್ತು ಸಪ್ಲಿಮೆಂಟ್ ಗಳನ್ನು  ಸೇವಿಸುವಂತೆ ಮಾಡಿದೆ. ವಿಟಮಿನ್ ಸಿ ಹೆಚ್ಚಿರುವ ಆಹಾರಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ ಎಂದು ಗುತ್ತು. ಆದ್ರೆ ಅತಿಯಾದ್ರೆ..?

PREV
18
ಇಮ್ಯುನಿಟಿ ಹೆಚ್ಚಲಿ ಅಂತ ಬೇಕಾಬಿಟ್ಟಿ ವಿಟಮಿನ್ ಸಿ ತಗೋತೀರಾ..? ಸ್ವಲ್ಪ ಇಲ್ಲಿ ನೋಡಿ

ಹೆಚ್ಚಾಗಿ ಜನರು ವಿಟಮಿನ್ ಸಿ ಇರುವ ಆಹಾರ ಸೇವಿಸುತ್ತಿದ್ದಾರೆ. ಆದರೆ ವಿಟಮಿನ್ ಸಿ ಯನ್ನು ಅತಿಯಾಗಿ ಸೇವಿಸುವುದು ಇತರ ಯಾವುದೇ ವಸ್ತುವಿನಂತೆಯೇ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ವಿಟಮಿನ್ ಸಿ ಹೆಚ್ಚಾದ್ರೆ ಏನಾಗುತ್ತೆ..? ಇಲ್ಲಿ ನೋಡಿ

28

ಆರೋಗ್ಯಕರ ಆಹಾರಗಳನ್ನು ಸೇವಿಸುವಾಗ ಜನರು 'ಅತಿಯಾದರೆ ಅಮೃತವೂ ವಿಷ' ಎಂಬ ಮಾತನ್ನು ಸಾಮಾನ್ಯವಾಗಿ ಮರೆತು ಬಿಡುತ್ತಾರೆ. ಈ ಮಾತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಗಳು ಮತ್ತು ಸಪ್ಲಿಮೆಂಟ್ ಗಳಿಗೂ ಅನ್ವಯಿಸುತ್ತದೆ. ಆರೋಗ್ಯಕರ ಕಾರ್ಯನಿರ್ವಹಣೆಗೆ ದೇಹಕ್ಕೆ ಎಷ್ಟು ವಿಟಮಿನ್ ಸಿ ಅಗತ್ಯವಿದೆ ಎಂಬ ಬಗ್ಗೆ ಅಜ್ಞಾನವು ಅತಿಯಾದ ಸೇವನೆಗೆ ಕಾರಣವಾಗಬಹುದು.

38

ದೇಹಕ್ಕೆ ಎಷ್ಟು ವಿಟಮಿನ್ ಸಿ ಬೇಕು? : ಅಧ್ಯಯನಗಳ ಪ್ರಕಾರ, ಸಿ ಜೀವಸತ್ವದ ಶಿಫಾರಸು ಮಾಡಲಾದ ಪ್ರಮಾಣವು ದಿನಕ್ಕೆ 65-90 ಮಿಲಿಗ್ರಾಂಗಳ ನಡುವೆ ಇರುತ್ತದೆ. ಗರಿಷ್ಠ ಮಿತಿ ದಿನಕ್ಕೆ 2000 ಮಿಗ್ರಾಂ.

48

ಆಹಾರದ ಪ್ರಮಾಣಗಳನ್ನು ಅರ್ಥ ಮಾಡಿಕೊಳ್ಳುವುದಾದರೆ, ಒಂದು ಕಿತ್ತಳೆಯಲ್ಲಿ ಸುಮಾರು 51 ಮಿ.ಗ್ರಾಂ ನಷ್ಟು ವಿಟಮಿನ್ ಸಿ ಇರುತ್ತದೆ. ಹೀಗಾಗಿ ದಿನಕ್ಕೆ ಎರಡು ಕಿತ್ತಳೆಯನ್ನು ಸೇವಿಸುವುದರಿಂದ ವಿಟಮಿನ್ ಸಿ ಪ್ರಮಾಣವು ಪ್ರತಿದಿನವೂ ಸಾಕಾಗುವಷ್ಟು ಸಿಗುತ್ತದೆ. 

58

ಹೆಚ್ಚು ವಿಟಮಿನ್ ಸಿ ಸೇವನೆಯ ಅಡ್ಡ ಪರಿಣಾಮಗಳು : C ಜೀವಸತ್ವವನ್ನು ಸೇವಿಸಲು ಗರಿಷ್ಠ ಮಿತಿ 2000 ಆಗಿದ್ದರೂ, ಅತಿಯಾದರೆ ದೇಹವು ಈ ಕೆಳಗಿನ ಲಕ್ಷಣಗಳನ್ನು ತೋರಿಸಬಹುದು. ಅತಿಸಾರ,  ವಾಂತಿ, ಎದೆಯುರಿ, ವಾಕರಿಕೆ,  ಕಿಬ್ಬೊಟ್ಟೆಯ ಸೆಳೆತ,  ನಿದ್ರಾಹೀನತೆ,  ತಲೆನೋವು ಬರಬಹುದು

68

ಈ ಯಾವುದೇ ಸಮಸ್ಯೆಗಳು ಕಾಡಬಾರದು ಎಂದಾದರೆ ಸಿ ಜೀವಸತ್ವವನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಅಗತ್ಯವಿರುವಷ್ಟೇ ಸೇವಿಸಬೇಕು

78

ಸಿ ಜೀವಸತ್ವವನ್ನು ಸೇವಿಸುವುದು ಮುಖ್ಯವಾಗಿದ್ದು, ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯಕರ ಆಹಾರ ಸೇವಿಸಲು ಪ್ರಯತ್ನಿಸಬೇಕು, ಇದು ದೇಹವು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರಲು ಸಹಾಯ ಮಾಡುತ್ತದೆ. 

88

ವೈದ್ಯರ ಸಲಹೆ ಮೇರೆಗೆ ಮಾತ್ರ ಪೂರಕ ಪದಾರ್ಥಗಳನ್ನು ಸೇವಿಸಬೇಕು. ನೆನಪಿಡಿ, ಪೂರಕಗಳು ಕೇವಲ ಆಹಾರದಿಂದ ಪಡೆಯಲಾಗದ ಪೋಷಕಾಂಶಗಳನ್ನು ಮಾತ್ರ ಹೊಂದಿಸಬಲ್ಲವು, ಅವು ಪರಿಪೂರ್ಣ ಊಟಕ್ಕೆ ಬದಲಿಯಾಗಲಾರವು

click me!

Recommended Stories