ಮೂತ್ರ ಸೋಂಕು: ರೋಗಲಕ್ಷಣ, ಕಾರಣ ಮತ್ತು ತಡೆಗಟ್ಟುವ ವಿಧಾನವಿದು

First Published | Jan 15, 2021, 1:31 PM IST

ಮೂತ್ರನಾಳದ ಸೋಂಕು ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಬರಬಹುದು. ಆದರೆ ಮಹಿಳೆಯರಲ್ಲಿ ಸಮಸ್ಯೆಗಳು ಮತ್ತು ತೊಡಕುಗಳು ಹೆಚ್ಚು ಗೋಚರಿಸುತ್ತವೆ. ಯುಟಿಐ ಇದ್ದಾಗ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಯುಟಿಐ ಸೋಂಕು ಹೆಚ್ಚಾಗಿ ಇ-ಕೊಲಿ ಬ್ಯಾಕ್ಟೀರಿಯಾದಿಂದ (E-Coli) ಉಂಟಾಗುತ್ತದೆ.

ಯುಟಿಐ ಇನ್ ಫೆಕ್ಷನ್ ಹೇಗೆ ಉಂಟಾಗುತ್ತದೆ?ಮೂತ್ರಕೋಶ ಮತ್ತು ಅದರ ನಾಳದಲ್ಲಿ ಬ್ಯಾಕ್ಟೀರಿಯಾಗಳು ಸೋಂಕು ತಗುಲಿದಾಗ, UTI. ಸೋಂಕು ತಗಲುತ್ತದೆ.ಇದರ ಸೋಂಕಿಗೆ ಪ್ರಮುಖ ಕಾರಣ ಇ-ಕೊಲಿ ಬ್ಯಾಕ್ಟೀರಿಯಾ. ಮೂತ್ರಕೋಶದ ಮೂಲಕ ದೇಹವನ್ನು ಪ್ರವೇಶಿಸಿದಾಗ ಯುಟಿಐ ಉಂಟಾಗುತ್ತದೆ ಮತ್ತು ಮೂತ್ರಕೋಶ ಮತ್ತು ಮೂತ್ರಪಿಂಡಗಳಿಗೆ ಹಾನಿಯುಂಟು ಮಾಡುತ್ತದೆ. ವಾಸ್ತವವಾಗಿ, ಮಹಿಳೆಯರ ಮೂತ್ರನಾಳ ಪುರುಷರಿಗಿಂತ ಚಿಕ್ಕದಾಗಿರುವುದರಿಂದ ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯ. ಇದರಿಂದ ಬ್ಯಾಕ್ಟೀರಿಯಾಗಳು ಒಳಗೆ ಹೋಗಲು ಸುಲಭವಾಗುತ್ತದೆ.
ಬಹುತೇಕ ಮಹಿಳೆಯರಿಗೆ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಈ ಸೋಂಕು ತಗುಲಿರುವುದು ಖಚಿತ. ಯುಟಿಐನ ಪ್ರಮುಖ ಕಾರಣಗಳು, ರೋಗಲಕ್ಷಣಗಳು ಮತ್ತು ತಡೆಗಟ್ಟುವಿಕೆಗಳನ್ನು ತಿಳಿದುಕೊಳ್ಳಿ.
Tap to resize

ಮೂತ್ರದ ಸೋಂಕು ಹಲವಾರು ಕಾರಣಗಳಿಂದ ಉಂಟಾಗಬಹುದು. ಯುಟಿಐ (ಯುಟಿಐ ಕಾರಣಗಳು) ಹೊಂದಲು ಪ್ರಮುಖ ಕಾರಣಗಳು.1. ಬ್ಯಾಕ್ಟೀರಿಯಾಗಳು ನಿಮ್ಮ ಮೂತ್ರನಾಳ ಅಥವಾ ವಲ್ವವನ್ನು ತಲುಪಿದಾಗ.2. ಲೈಂಗಿಕ ಕ್ರಿಯೆಯ ಸಮಯದಲ್ಲಿ ಕೀಟಾಣುಗಳು ಮೂತ್ರನಾಳಕ್ಕೆ ಹೋದಾಗ.3. ಸಾರ್ವಜನಿಕ ಅಥವಾ ಕೊಳಕು ಶೌಚಾಲಯವನ್ನು ಬಳಸುವುದರಿಂದ ಸೋಂಕು ಉಂಟಾಗಬಹುದು.4. ಕೊಳಕು ಕೈಗಳಿಂದ ಜನನಾಂಗಗಳನ್ನು ಸ್ಪರ್ಶಿಸುವುದು5. ಶೌಚಾಲಯಗಳಲ್ಲಿ ಕೊಳಕು ನೀರು ಚಿಮ್ಮಿದಾಗ.
ಯುಟಿಐ ನ ಲಕ್ಷಣಗಳುಮೂತ್ರದ ಸೋಂಕಿನ ಈ ಪ್ರಮುಖ ಲಕ್ಷಣಗಳನ್ನು ಅರಿತುಕೊಳ್ಳುವುದರಿಂದ ಯುಟಿಐ ಅನ್ನು ಹೊಂದಿದ್ದೀರೋ ಇಲ್ಲವೋ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ನಂತರ ತಪಾಸಣೆಯನ್ನು ಅದಕ್ಕೆ ತಕ್ಕಂತೆ ಔಷಧಿಗಳನ್ನು ಪಡೆಯಬಹುದು. ಒಂದು ವೇಳೆ ಈ ಲಕ್ಷಣಗಳನ್ನು ನೀವು ಕಡೆಗಣಿಸಿದ್ದೇ ಆದರೆ ಅದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ.1. ವಾಶ್ ರೂಮಿಗೆ ಮತ್ತೆ ಮತ್ತೆ ಹೋಗುವಂತಹ ಅನುಭವ ಉಂಟಾಗುವುದು.2. ಮೂತ್ರ ಮಾಡುವಾಗ ತುಂಬಾ ಕಿರಿಕಿರಿ3. ಕೆಳಹೊಟ್ಟೆ ಮತ್ತು ಕಿಬ್ಬೊಟ್ಟೆನೋವು4. ಮೂತ್ರದಲ್ಲಿ ರಕ್ತ ಅಥವಾ ಕೀವು5. ಪದೇ ಪದೇ ಜ್ವರ
ಯುಟಿಐ ಚಿಕಿತ್ಸೆಈ ಸೋಂಕು ಚಿಕಿತ್ಸೆಯಿಲ್ಲದೆ ಕೊನೆಗೊಳ್ಳುವುದಿಲ್ಲ, ಆದ್ದರಿಂದ ರೋಗಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಪ್ರತಿಜೀವಕಗಳು ಸರಿಯಾದ ಚಿಕಿತ್ಸೆ. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ಸೋಂಕನ್ನು ದೂರ ಮಾಡಬಹುದು.
ಯುಟಿಐ ತಡೆಗಟ್ಟುವಿಕೆ : ಮೂತ್ರದ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೆಲವು ವಿಧಾನಗಳನ್ನು ಪ್ರಯತ್ನಿಸಿ. ಅದನ್ನು ಹೇಗೆ ಸಂರಕ್ಷಿಸುವುದು ಎಂದು ತಿಳಿಯಿರಿ.1. ಮೂತ್ರವನ್ನು ನಿಲ್ಲಿಸಲು ಪ್ರಯತ್ನಿಸಬೇಡಿ.2. ಇದನ್ನು ತಪ್ಪಿಸಲು ಸಾಕಷ್ಟು ನೀರನ್ನು ಕುಡಿಯಿರಿ.3. ಸೆಕ್ಸ್ ನಂತರ ಗುಪ್ತಾಂಗಗಳನ್ನು ಸ್ವಚ್ಛಗೊಳಿಸಿ.4. ಪ್ರತಿ ಬಾರಿ ಮೂತ್ರ ಅಥವಾ ಮಲ ವಿಸರ್ಜನೆ ಬಳಿಕ ಚೆನ್ನಾಗಿ ತೊಳೆಯಿರಿ.5. ಯಾವಾಗಲೂ ಸ್ವಚ್ಛ ಮತ್ತು ಆರಾಮದಾಯಕ ಒಳಉಡುಪುಗಳನ್ನು ಧರಿಸಿ.
ಮೂತ್ರನಾಳದ ಸೋಂಕು ನಿವಾರಣೆ ಮನೆಮದ್ದುಗಳುಆಪಲ್ ವಿನೆಗರ್ ಸಿಡರ್ ನಲ್ಲಿ ಪೊಟಾಶಿಯಂ ಮತ್ತು ಇತರ ಲಾಭದಾಯಕ ಖನಿಜಾಂಶಗಳು ಸಮೃದ್ಧವಾಗಿದೆ. ಮೂತ್ರನಾಳದ ಸೋಂಕುಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ನಿಂಬೆ ರಸ ಮತ್ತು ಜೇನುತುಪ್ಪವನ್ನು ಸೇರಿಸಿಕೊಳ್ಳಬಹುದು.
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ. ನೆಲ್ಲಿಕಾಯಿ ಜ್ಯೂಸ್ ಅನ್ನು ದಿನಕ್ಕೆ 4-5 ಬಾರಿ ಕುಡಿಯಿರಿ.
ಪ್ರತಿದಿನ ಅರ್ಧ ಲೋಟ ಕ್ಯಾನ್ ಬೆರಿ ಜ್ಯೂಸ್ ಕುಡಿಯುವುದರಿಂದ ಮೂತ್ರದ ಸೋಂಕು ನಿವಾರಣೆಯಾಗಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತದೆ.
ಅಡುಗೆ ಸೋಡಾ ಮೂತ್ರದ ಆಮ್ಲವನ್ನು ಸಮತೋಲನದಲ್ಲಿರಿಸುತ್ತದೆ ಮತ್ತು ನೋವು ನಿವಾರಣೆ ಮಾಡುತ್ತದೆ.
ಟೀ ಟ್ರೀ ಆಯಿಲ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ದಿನಕ್ಕೆ ಒಂದು ಕಪ್ ಅನಾನಸ್ ಹಣ್ಣನ್ನು ತಿನ್ನುವ ಮೂಲಕ ಯುಟಿಐ ಅನ್ನು ತಡೆಗಟ್ಟಬಹುದು. ತಾಜಾ ಜ್ಯೂಸ್ ಗಳನ್ನೂ ಕುಡಿಯಬಹುದು.
ಪ್ರತಿದಿನ ಬಿಸಿ ನೀರು ಮೂತ್ರಕೋಶದ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸೋಂಕಿನಿಂದ ನೋವನ್ನು ನಿವಾರಿಸುತ್ತದೆ.

Latest Videos

click me!