ಹಸಿಮೆಣಸಿನ ಕಾಯಿಯಲ್ಲಿದೆ ಆರೋಗ್ಯದ ಗುಟ್ಟು, ಇಲ್ಲಿ ಓದಿ

First Published Feb 2, 2021, 3:05 PM IST

ಭಾರತದ ಅಡುಗೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ವಸ್ತು ಎಂದರೆ ಅದು ಹಸಿಮೆಣಸಿನಕಾಯಿ. ಇಲ್ಲಿ ನಂಬಲಸಾಧ್ಯವಾದ ವೈವಿಧ್ಯಮಯ ಶ್ರೇಣಿಯ ಮೆಣಸಿನ ಕಾಯಿ ಸಿಗುತ್ತವೆ. ಇವೆಲ್ಲವೂ ಅಡುಗೆಯಲ್ಲಿ ತಮ್ಮದೇ ರುಚಿಯನ್ನು ನೀಡುತ್ತದೆ. ಕೆಂಪು ಮೆಣಸಿನಕಾಯಿ ಸಾಮಾನ್ಯವಾಗಿ ಮೃದುವಾಗಿರುತ್ತದೆ, ಆದರೆ ಹಸಿಮೆಣಸಿನಕಾಯಿಗಳು ತೀಕ್ಷ್ಣವಾದ ಮತ್ತು ಖಾರವಾಗಿದ್ದು, ಅಡುಗೆಗೆ ಕಿಕ್ ನೀಡುತ್ತದೆ. ಹಸಿಮೆಣಸು ಖಾರವಾಗಿದ್ದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ಇವು ಆರೋಗ್ಯಕ್ಕೂ ಸಹ ಉಪಯೋಗಿಯಾಗಿದೆ. ಈ ಬಗ್ಗೆ ತಿಳಿದುಕೊಂಡಿರದೆ ಇದ್ದರೆ ಈಗಲೇ ಹಸಿಮೆಣಸಿನ ಪ್ರಯೋಜನಗಳನ್ನು ತಿಳಿದುಕೊಳ್ಳಿ. 

ಹಸಿರು ಮೆಣಸಿನಕಾಯಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಗಳು ತುಂಬಿಕೊಂಡಿದ್ದು, ಇದು ನೈಸರ್ಗಿಕ ಸ್ಕ್ಯಾವೆಂಜರ್ ನಂತೆ ಕೆಲಸ ಮಾಡುವ ಮೂಲಕ ಫ್ರೀ ರ್ಯಾಡಿಕಲ್ ಗಳಿಂದ ದೇಹವನ್ನು ರಕ್ಷಿಸುತ್ತದೆ. ಹಸಿರು ಮೆಣಸಿನಕಾಯಿ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
undefined
ಒಂದು ಸಂಶೋಧನೆಯ ಪ್ರಕಾರ ಹಸಿಮೆಣಸು ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದರಿಂದ ರಕ್ತ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಹೃದಯದ ಆರೋಗ್ಯ ಉತ್ತಮವಾಗಿರುತ್ತದೆ.
undefined
ಹಸಿರು ಮೆಣಸಿನಕಾಯಿಯಲ್ಲಿ ಶೂನ್ಯ ಕ್ಯಾಲೋರಿಗಳಿವೆ.ಆರೋಗ್ಯಕರ ಆಹಾರಕ್ರಮದ ಬಗ್ಗೆ ಗಮನ ಹರಿಸುವವರಿಗೆ ಇದು ಪರಿಪೂರ್ಣ ಮಸಾಲೆ ಪದಾರ್ಥವಾಗಿದೆ. ಊಟವಾದ ಮೂರು ಗಂಟೆಗಳವರೆಗೆ ಚಯಾಪಚಯ ಕ್ರಿಯೆಯನ್ನು 50% ನಷ್ಟು ವೇಗಗೊಳಿಸಬಹುದು, ಆರೋಗ್ಯಕರ ಮತ್ತು ಸದೃಢ ವಾದ ಜೀವನಶೈಲಿಯನ್ನು ಖಚಿತಪಡಿಸುತ್ತದೆ.
undefined
ಇದು ಜೀರ್ಣಕ್ರಿಯೆಯನ್ನು ಸ್ಟ್ರಾಂಗ್ ಮಾಡುತ್ತದೆ. ಹಸಿಮೆಣಸಿನಲ್ಲಿ ಫೈಬರ್ ಅಂಶವಿದೆ. ಇವು ಸೇವನೆ ಮಾಡಿದ ಆಹಾರವನ್ನು ಬೇಗನೆ ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಆಹಾರ ಸೇವನೆ ಮಾಡಿದ ಮೂರೇ ಗಂಟೆಗಳಲ್ಲಿ ಆಹಾರ ಜೀರ್ಣವಾಗುತ್ತದೆ.
undefined
ಅಥೈಟಿಸ್ ರೋಗಿಗಳಿಗೆ ಹಸಿಮೆಣಸು ಪ್ರಯೋಜನವಿದೆ. ಅಲ್ಲದೆ ಇದು ದೇಹದ ಅಂಗಗಳಲ್ಲಿ ಉಂಟಾಗುವ ನೋವು ನಿವಾರಣೆ ಮಾಡುವಲ್ಲಿ ಸಹಾಯಕವಾಗಿದೆ.
undefined
ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿರುವ ಮೆಣಸಿನಕಾಯಿ ಚರ್ಮದ ಆರೈಕೆಗೆ ಸಹಾಯ ಮಾಡುತ್ತದೆ, ಚರ್ಮವನ್ನು ಆರೋಗ್ಯಕರವಾಗಿ ಮತ್ತು ಕಾಂತಿಯುತವಾಗಿರಿಸಲು ಸಹಾಯ ಮಾಡುತ್ತದೆ.
undefined
ಕ್ಯಾರೆಟ್ ಅನ್ನುಇದರಲ್ಲಿರುವಂತಹ ವಿಟಮಿನ್ ಸಿ ಗಾಯವನ್ನು ಮಾಸಲು ಸಹಾಯ ಮಾಡುತ್ತದೆ. ಜೊತೆಗೆ ವಿಟಮಿನ್ ಸಿ ಮೂಳೆ, ಹಲ್ಲುಗಳು ಮತ್ತು ಕಣ್ಣುಗಳಿಗೂ ಸಹ ಉತ್ತಮವಾಗಿದೆ.
undefined
ಹಸಿ ಮೆಣಸಿನಕಾಯಿಯಲ್ಲಿ ಕಂಡುಬರುವ ಕ್ಯಾಪ್ಸೈಸಿನ್ ಮೆದುಳಿನಲ್ಲಿ ಹೈಪೋಥಲಮಸ್ ನ ಶೀತಲೀಕರಣ ಕೇಂದ್ರವನ್ನು ಉತ್ತೇಜಿಸುವ ಮೂಲಕ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ. ಆದ್ದರಿಂದ ಭಾರತದಂತಹ ಜಗತ್ತಿನ ಬೆಚ್ಚಗಿನ ದೇಶಗಳಲ್ಲಿ ಜನರು ಈಗಲೂ ಖಾರ ಮತ್ತು ಮಸಾಲೆಯುಕ್ತ ಆಹಾರಗಳನ್ನು ಸವಿಯುತ್ತಿದ್ದಾರೆ.
undefined
ಹಸಿಮೆಣಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಾಮಿನ್ ಸಿ ಇರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಮೆಣಸು ಸೇವನೆ ಮಾಡಿದರೆ ಕಣ್ಣಿದ್ದ ಮೂಗು ನಿರಾಳವಾಗಿ ಉಸಿರಾಡಲು ಸಹಾಯ ಮಾಡುತ್ತದೆ.
undefined
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಬಲ್ಲುದು ಎಂದು ಸಾಬೀತಾಗಿದೆ, ಇದು ಮಧುಮೇಹಿಗಳ ಆಹಾರ ಕ್ರಮದ ಸಮಸ್ಯೆಗಳಿಗೆ ಮತ್ತು ಹೆಚ್ಚು ಆನಂದದಾಯಕ ಮತ್ತು ಸ್ಥಿರ ವಾದ ಜೀವನಶೈಲಿಗೆ ಒಂದು ಉತ್ತಮ ಆಹಾರವಾಗಿದೆ.
undefined
ಮೆಣಸಿನಕಾಯಿಯಿಂದ ಬರುವ ಶಾಖವು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಜೀರ್ಣಕಾರಿ ಮತ್ತು ಬಾಯಿ ಹುಣ್ಣುಗಳನ್ನು ತಡೆಯುತ್ತದೆ. ಹಸಿಮೆಣಸಿನಕಾಯಿಯಲ್ಲಿ ಸಾಕಷ್ಟು ಪ್ರಮಾಣದ ಆಹಾರ ನಾರಿನಾಂಶ ಇರುವುದರಿಂದ ಆಹಾರವನ್ನು ವೇಗವಾಗಿ ಜೀರ್ಣಿಸಬಲ್ಲದು.
undefined
click me!