ಕುತ್ತಿಗೆ ನೋವು ಫಟಾ ಫಟ್ ನಿವಾರಣೆಗೆ ಅಂಗೈಯಲ್ಲೇ ಮದ್ದು

First Published Jul 19, 2021, 9:29 PM IST

ಕುತ್ತಿಗೆ ನೋವು ಅಥವಾ ಸೆಟೆತ ಸಾಮಾನ್ಯ ಸಮಸ್ಯೆ. ಆದರೆ ಕೆಲವೊಮ್ಮೆ ಸಹಿಸಿಕೊಳ್ಳುವುದು ಕಷ್ಟ. ಕುತ್ತಿಗೆ ನೋವಿಗೆ ಅನೇಕ ಕಾರಣಗಳಿರಬಹುದು. ಕೆಲವೊಮ್ಮೆ ಬೆನ್ನಿನ ಮೇಲ್ಭಾಗದಲ್ಲಿ ಸ್ನಾಯುವಿನ ಉದ್ವಿಗ್ನತೆ (ಸ್ನಾಯು ಒತ್ತಡ)ಯಿಂದಾಗಿ ರಕ್ತನಾಳಗಳ ಹಿಗ್ಗುವಿಕೆಯಿಂದಾಗಿ ಉಂಟಾಗಿ ಕುತ್ತಿಗೆ ನೋವು ಉಂಟಾಗಬಹುದು. 

ಅನೇಕ ಸಂದರ್ಭಗಳಲ್ಲಿ ಇದು ಕೆಟ್ಟ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದಲೂ ಉಂಟಾಗಬಹುದು. ಕೆಲವೊಮ್ಮೆ ಗಾಯಗಳು, ಆಟವಾಡುವಾಗ ಅಥವಾ ನಡೆಯುವಾಗ ಸ್ನಾಯು ಸೆಳೆತದಿಂದ ಕುತ್ತಿಗೆ ನೋವೂಉಂಟಾಗುತ್ತದೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಕುತ್ತಿಗೆ ನೋವಿನಲ್ಲಿ ಗಂಭೀರ ಸ್ಥಿತಿ ಇರುವುದಿಲ್ಲ ಮತ್ತು ಕೆಲವು ಮನೆಮದ್ದಿನ ಸಹಾಯದಿಂದ ಇದನ್ನು ನಿವಾರಿಸಬಹುದು.
undefined
ಐಸ್ ಮಸಾಜ್ಕುತ್ತಿಗೆಉರಿಯೂತವನ್ನು ನಿವಾರಿಸಲು, ಕುತ್ತಿಗೆಯ ಮಂಜುಗಡ್ಡೆಯೊಂದಿಗೆ ದಿನಕ್ಕೆ ಹಲವು ಬಾರಿ ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಅಲ್ಲದೆ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಅಥವಾ ಹೀಟಿಂಗ್ ಪ್ಯಾಡ್ ಬಳಸುವುದು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
undefined
ಕುತ್ತಿಗೆಯ ಮಸಾಜ್ತರಬೇತಿ ಪಡೆದ ವೈದ್ಯರು ಕುತ್ತಿಗೆ ಮಸಾಜ್ ಕುತ್ತಿಗೆ ಮತ್ತು ಬೆನ್ನಿನ ಸ್ನಾಯುಗಳನ್ನು ವಿಶ್ರಾಂತಿ ಗೊಳಿಸಲು ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ, ಎನ್ನುತ್ತಾರೆ.
undefined
ಭಾರವಾದ ತೂಕ ಎತ್ತುವುದತಪ್ಪಿಸಿದೈಹಿಕ ಚಟುವಟಿಕೆಯಿಂದಾಗಿ ಕುತ್ತಿಗೆಯಲ್ಲಿ ಬಿಗಿತ ಮತ್ತು ನೋವು ಪ್ರಾರಂಭವಾಗಿದ್ದರೆ, ನೋವು ನಿವಾರಣೆಯಾಗುವವರೆಗೆ ಆ ಚಟುವಟಿಕೆಯನ್ನು ಮಾಡುವುದನ್ನು ತಪ್ಪಿಸಬೇಕು. ಭಾರವಾದ ಸರಕುಗಳನ್ನು ಎತ್ತುವುದನ್ನು ತಪ್ಪಿಸಬೇಕು. ಏಕೆಂದರೆ ಇದು ಕುತ್ತಿಗೆ ನೋವನ್ನು ಹೆಚ್ಚಿಸಬಹುದು.
undefined
ಈ ಕೆಲಸವನ್ನು ಮಾಡಿ- ತಲೆಯನ್ನು ಕುಲುಕದಿರಲು ಪ್ರಯತ್ನಿಸಿ. ಕುತ್ತಿಗೆಯನ್ನು ಒತ್ತಡ ಕೊಟ್ಟು ಬಾಗಿಸಬೇಡಿ. ಇದರಿಂದ ಉರಿಯೂತ ಹೆಚ್ಚಾಗಬಹುದು.
undefined
-ನೋವು ಹೆಚ್ಚು ಇಲ್ಲದಿದ್ದರೆ, ತಲೆಯನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಮತ್ತು ನಂತರ ಮೇಲಕ್ಕೆ ಮತ್ತು ಕೆಳಕ್ಕೆ ಚಾಚಲು ಪ್ರಯತ್ನಿಸಿ. ಇದರಿಂದ ಪರಿಹಾರ ದೊರೆತಂತೆ ಆಗುತ್ತದೆ.
undefined
-ಕುತ್ತಿಗೆಯ ಬಿಗಿ ಸ್ನಾಯುಗಳನ್ನು ಸಡಿಲಗೊಳಿಸಲು ಕೆಲವು ಗಂಟೆಗಳ ಕಾಲ ನೆಕ್ ಕಾಲರ್ ಧರಿಸಿ.
undefined
- ದಿಂಬುಗಳಿಲ್ಲದೆ ಮಲಗಿ ಅಥವಾ ವಿಶೇಷವಾಗಿ ಕುತ್ತಿಗೆಗೆ ಬೆಂಬಲವಾಗಿ ವಿನ್ಯಾಸಗೊಳಿಸಲಾದ ದಿಂಬುಗಳನ್ನು ಬಳಸಿ.
undefined
- ಕುತ್ತಿಗೆಯ ಎಕ್ಸರ್ ಸೈಜ್ ಗಳನ್ನು ವೈದ್ಯರ ಬೆಂಬಲ ಅಥವಾ ಅವರ ಸಲಹೆ ಇಲ್ಲದೆ ಮಾಡಲು ಹೋಗಬೇಡಿ. ಕೆಲವೊಮ್ಮೆ ತಪ್ಪು ಎಕ್ಸರ್‌ಸೈಜ್ ಮಾಡಿ ನೋವು ಹೆಚ್ಚಾಗಬಹುದು.
undefined
- ನೋವು ಕಡಿಮೆಯಾಗದೇ ಇದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ.
undefined
click me!