ಬೇಯಿಸಿದ ಕ್ಯಾರೇಟ್ ಒಳ್ಳೆಯದೋ, ಹಸಿಯದ್ದು ತಿಂದ್ರೆ ಪೌಷ್ಠಿಕಾಂಶ ಹೆಚ್ಚೋ?

First Published Jan 14, 2021, 3:41 PM IST

ಕ್ಯಾರೆಟ್ ಅನ್ನು ಹಸಿಯಾಗಿ ಸೇವಿಸುವುದಕ್ಕಿಂತ ಬೇಯಿಸಿ ಸೇವಿಸಿದರೆ ಉತ್ತಮ ಪ್ರಮಾಣದ ಪೌಷ್ಟಿಕಾಂಶವನ್ನು ನೀಡುತ್ತದೆ ಎಂಬುದು ತಿಳಿದಿದೆಯೇ? ಕ್ಯಾರೆಟ್ನಲ್ಲಿ ಬೀಟಾ ಕ್ಯಾರೋಟಿನ್ ಎಂಬ ಕ್ಯಾರೋಟಿನಾಯ್ಡ್ಗಳು ಇದ್ದು, ಬೇಯಿಸಿದ ಕ್ಯಾರೆಟ್ ರೂಪದಲ್ಲಿ ದೇಹವು ಅದನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ಅಲ್ಲದೆ, ಜರ್ನಲ್ ಆಫ್ ಎಜಿಕಲ್ಚರ್ ಆ್ಯಂಡ್ ಫುಡ್ ಕೆಮಿಸ್ಟ್ರಿಯಲ್ಲಿ ಪ್ರಕಟವಾದ ಅಧ್ಯಯನ ಈ ಅಂಶವನ್ನು ಸಾಬೀತುಪಡಿಸಿದೆ. ಇದು ಬೇಯಿಸಿದ ಕ್ಯಾರಟ್‌ಗಳಲ್ಲಿ ಕಂಡು ಬರುವ ಉತ್ಕರ್ಷಣ ನಿರೋಧಕ ಕ್ಯಾರೋಟಿನಾಯ್ಡ್ ಅನ್ನು ಸಂರಕ್ಷಿಸುತ್ತದೆ ಎಂದು ತೋರಿಸುತ್ತದೆ.
 

ಬೇಯಿಸಿದ ಕ್ಯಾರೆಟ್ ಹೆಚ್ಚು ಪೌಷ್ಟಿಕವಾಗಿದೆಯೇ?ಹೆಚ್ಚು ಉಷ್ಣಾಂಶವಿರುವ ಸಸ್ಯಹಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಪೌಷ್ಟಿಕಾಂಶ ಕಡಿಮೆ ಸಿಗುತ್ತದೆ ಎಂದು ಹೆಚ್ಚಿನವರು ಹೇಳುತ್ತಾರೆ. ಈ ಅಂಶವು ಸ್ವಲ್ಪ ಮಟ್ಟಿಗೆ ಸತ್ಯವಾಗಿದೆ, ಆದರೆ ಕ್ಯಾರೆಟ್ ತಿನ್ನುವವರಿಗೆ ಖಂಡಿತಾ ಪೌಷ್ಠಿಕಾಂಶ ದೊರೆಯುತ್ತದೆ.
undefined
ಕ್ಯಾರೋಟಿನಾಯ್ಡ್ಗಳು ಅಥವಾ ಬೀಟಾ ಕ್ಯಾರೋಟಿನ್ಗಳು ಕ್ಯಾರೆಟ್ನಲ್ಲಿ ಹೇರಳವಾಗಿ ದೊರೆಯುತ್ತವೆ ಮತ್ತು ಕ್ಯಾರೆಟ್ ಗಳನ್ನು ಬೇಯಿಸಿ, ಅದನ್ನು ತಿಂದಾಗ ದೇಹವು ಈ ಅಂಶಗಳನ್ನು ಸುಲಭವಾಗಿ ಹೀರಿಕೊಳ್ಳುತ್ತವೆ.
undefined
ಬೀಟಾ ಕ್ಯಾರೋಟಿನ್ ಒಂದು ಪ್ರೋವಿಟಮಿನ್ ಆಗಿದೆ, ಇದನ್ನು ದೇಹವು ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಈ ಪೋಷಕಾಂಶವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ, ಹೃದಯವನ್ನು ಆರೋಗ್ಯಕರವಾಗಿಡುತ್ತದೆ ಮತ್ತು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
undefined
ಕ್ಯಾರೆಟ್ ಅನ್ನು ಎಷ್ಟು ಬೇಯಿಸಬೇಕು?ಕ್ಯಾರೆಟ್ ಅನ್ನು ಸ್ವಲ್ಪ ಮೃದುವಾಗುವವರೆಗೆ ಮಧ್ಯಮ ಶಾಖದಲ್ಲಿ ಸುಲಭವಾಗಿ ಬೇಯಿಸಬಹುದು. ಬೀಟಾ-ಕ್ಯಾರೋಟಿನ್ ಹೆಚ್ಚಿನ ತಾಪಮಾನದಲ್ಲಿಯೂ ಸಹ ನಷ್ಟವಾಗುವುದಿಲ್ಲ. ಕ್ಯಾರೆಟ್ ಬೇಯಿಸಿದಾಗ, ಸಸ್ಯದ ಅಂಗಾಂಶಗಳ ಕೋಶ ಭಿತ್ತಿಗಳು ಮೃದುವಾಗಿ, ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಬೀಟಾ-ಕ್ಯಾರೋಟಿನ್ ಅನ್ನು ಜೀರ್ಣಿಸಲೂ ಸುಲಭವಾಗುತ್ತದೆ.
undefined
ಹಸಿಯಾಗಿ ತಿನ್ನುವುದನ್ನು ನಿಲ್ಲಿಸಬೇಕೆ?ಇದರರ್ಥ ಹಸಿ ಕ್ಯಾರೆಟ್ ಅನ್ನು ತಿನ್ನಬಾರದು ಎಂದಲ್ಲ. ಕ್ಯಾರೆಟ್ ನಲ್ಲಿ ಹಲವಾರು ರೀತಿಯ ಪ್ರಯೋಜನಗಳಿದ್ದು, ಇದನ್ನು ವಿವಿಧ ರೂಪದಲ್ಲಿ ಸೇವಿಸುವ ಮೂಲಕ ಪಡೆಯಬಹುದು.
undefined
ಹಸಿ ಕ್ಯಾರೆಟ್‌ಗಳನ್ನು ಸಲಾಡ್‌ಗಳಲ್ಲಿ ಮತ್ತು ಜ್ಯೂಸ್‌ಗಳಲ್ಲಿ, ವಿಶೇಷವಾಗಿ ಚಳಿಗಾಲದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಕಿತ್ತಳೆ ಕೆಂಪು ಬಣ್ಣದ ಈ ತರಕಾರಿಯಲ್ಲಿ ಫೈಬರ್, ವಿಟಮಿನ್ ಕೆ1 ಮತ್ತು ಪೊಟ್ಯಾಶಿಯಂ ಇದೆ.
undefined
ಕ್ಯಾರೆಟ್ ನಲ್ಲಿರುವ ನಾರಿನಾಂಶವು ಮಲವಿಸರ್ಜನೆಯನ್ನು ಸರಾಗವಾಗಿ ಇರಿಸುತ್ತದೆ, ಪೊಟ್ಯಾಶಿಯಂ ಅಂಶವು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳಿಂದ ರಕ್ಷಣೆಯನ್ನು ಮಾಡುತ್ತದೆ. ಹಳದಿ ಬಣ್ಣದ ಕ್ಯಾರೆಟ್ ನಲ್ಲಿ ಲ್ಯೂಟಿನ್ ಅಂಶವಿದ್ದು, ಇದು ಕಣ್ಣಿನ ಪೊರೆಯ ರಚನೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.
undefined
ಕ್ಯಾರೆಟ್ ರೆಸಿಪಿಗಳುಕ್ಯಾರೆಟ್ ಚಿಪ್ಸ್ ನಿಂದ ಹಿಡಿದು ಸಿಹಿ ಗಜ್ಜರಿ ಹಲ್ವಾವರೆಗೆ ಕ್ಯಾರೆಟ್ ನಿಂದ ಬೇರೆ ಬೇರೆ ವಿಧದ ರೆಸಿಪಿಗಳನ್ನು ತಯಾರಿಸಬಹುದು. ಚಳಿಗಾಲದಲ್ಲಿ ನಿಯಮಿತವಾಗಿ ಮಾಡಬಹುದಾದ ಮತ್ತೊಂದು ಖಾದ್ಯವೆಂದರೆ ರುಚಿಕರವಾದ ಸೂಪ್ ಗಳು.
undefined
ಕ್ಯಾರೆಟ್ ಪಲ್ಯ, ಕತ್ತರಿಸಿದ ಕ್ಯಾರೆಟ್, ಆಲೂಗಡ್ಡೆ, ಟೊಮ್ಯಾಟೋ ಮತ್ತು ಬಟಾಣಿಗಳಿಂದ ತಯಾರಿಸಲಾದ ಪಲ್ಯ ಮಧ್ಯಾಹ್ನದ ಊಟಕ್ಕೆ ಸೂಕ್ತ. ಕ್ಯಾರೆಟ್ ಕೇಕ್, ಗಜರ್ ಬರ್ಫಿ, ಬೆಣ್ಣೆ ಹುರಿದ ಕ್ಯಾರೆಟ್, ಕ್ಯಾರೆಟ್ ಫ್ರೈ, ಗಾಜರ್ ಕಾ ರೈಥಾ ಈ ತರಕಾರಿಯ ಜೊತೆ ಕೆಲವು ರೆಸಿಪಿಗಳನ್ನು ಟ್ರೈ ಮಾಡಿ.
undefined
click me!