ಮಲಬದ್ಧತೆ, ಮಧುಮೇಹ ಸಮಸ್ಯೆಗೂ ಪರಿಹಾರ ತೊಂಡೆಕಾಯಿಯಲ್ಲಿದೆ
First Published | Apr 4, 2021, 1:39 PM ISTಮಾರುಕಟ್ಟೆಗಳಲ್ಲಿ ತೊಂಡೆಕಾಯಿ ಸಾಮಾನ್ಯವಾಗಿ ಇರುತ್ತದೆ. ತೊಂಡೆಕಾಯಿ ಗುಣಲಕ್ಷಣಗಳ ವಿಷಯಕ್ಕೆ ಬಂದಾಗ ಇದು ಆಯುರ್ವೇದ ತರಕಾರಿಗಳ ವರ್ಗಕ್ಕೆ ಬರುತ್ತದೆ. ಸಾಮಾನ್ಯವಾಗಿ ಜನರಿಗೆ ಅದರ ಗುಣಗಳ ಬಗ್ಗೆ ತಿಳಿದಿಲ್ಲ. ಇದರಲ್ಲಿ ಹಲವು ವಿಟಮಿನ್, ಖನಿಜಾಂಶಗಳಿದ್ದು, ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ವಿಟಮಿನ್ ಎ, ವಿಟಮಿನ್ ಬಿ1, ಬಿ2, ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟಾಶಿಯಂ, ಮೆಗ್ನೀಶಿಯಂ, ರಂಜಕ ಹೀಗೆ ಹಲವು ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಇದನ್ನು ಮುಖ್ಯವಾಗಿ ಮೂತ್ರದ ತೊಂದರೆ ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.