ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಮುನ್ನ, ನಂತರ ಪಾಲಿಸಬೇಕಾದ ಕ್ರಮಗಳು

Suvarna News   | Asianet News
Published : Mar 10, 2021, 06:13 PM IST

ದೇಶದಲ್ಲಿ ಕೊರೋನಾ ವೈರಸ್ ಲಸಿಕೆ ಅಭಿಯಾನವು ಎರಡನೇ ಹಂತ ತಲುಪಿದೆ. ಜನರು ಹೆಚ್ಚು ಉತ್ಸಾಹಿಗಳಾಗಿ ಲಸಿಕೆಯನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಿಸಲಾಗಿದೆ, ಲಕ್ಷಾಂತರ ಜನರು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಲಸಿಕೆ ಬಂದ ನಂತರ ದೇಶದ ಜನತೆ ನಿಟ್ಟುಸಿರು ಬಿಟ್ಟರೂ, ಲಸಿಕೆಯಲ್ಲಿ ಹಲವು ಸವಾಲುಗಳು, ಅಡ್ಡ ಪರಿಣಾಮಗಳು ಕಂಡು ಬರುತ್ತಿವೆ.    

PREV
19
ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಮುನ್ನ, ನಂತರ ಪಾಲಿಸಬೇಕಾದ ಕ್ರಮಗಳು

Covid-19 ಲಸಿಕೆಯನ್ನು ತೆಗೆದುಕೊಳ್ಳುವ ಮೊದಲು ಮತ್ತು ನಂತರ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಇಲ್ಲಿದೆ ಮಾಹಿತಿ...

29

1. ವೈದ್ಯರ ಸಲಹೆ ಪಡೆಯಿರಿ
ಚಿಕ್ಕವರು ಮತ್ತು ಆರೋಗ್ಯವಂತರಾಗಿದ್ದಲ್ಲಿ, ಲಸಿಕೆ ಪಡೆಯಲು ಯಾವುದೇ ಅಪಾಯಗಳಿಲ್ಲ, ಆದಾಗ್ಯೂ, ನೀವು 45 ಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರೆ ಮತ್ತು ಈಗಾಗಲೇ ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ಸಂಬಂಧಿ ಕಾಯಿಲೆಗಳಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಲಸಿಕೆಯನ್ನು ಪಡೆಯುವ ಮುನ್ನ ವೈದ್ಯರನ್ನು ಸಂಪರ್ಕಿಸಬೇಕು. 

39

ಭಾರತೀಯ ಆರೋಗ್ಯ ಸಚಿವಾಲಯದ ಪ್ರಕಾರ, ಒಬ್ಬ ವ್ಯಕ್ತಿ ಹಿಮೋಫಿಲಿಯಾದಿಂದ ಬಳಲುತ್ತಿದ್ದರೆ, ಆತನು ತನ್ನ ವೈದ್ಯರ ಮೇಲ್ವಿಚಾರಣೆಯಲ್ಲಿ ಲಸಿಕೆ ಪಡೆಯಬೇಕು.

49

2. ಲಸಿಕೆಯ ಮೊದಲು ಔಷಧಗಳನ್ನು ಪರೀಕ್ಷಿಸಿ
ವೈದ್ಯರ ಸಲಹೆ ಪಡೆದು,  ಔಷಧೋಪಚಾರಗಳಿಗೆ ಅನುಮೋದನೆ ಪಡೆಯಬೇಕು. ಕೆಲವು ಔಷಧಿಗಳು ಲಸಿಕೆಗೆ ಅಲರ್ಜಿ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು. ಆದ್ದರಿಂದ, ಅನಾಫಿಲಿಸಿಸ್ ಹೊಂದಿರುವ ಅಥವಾ ಔಷಧ ಉತ್ಪನ್ನಗಳು, ಆಹಾರ ಪದಾರ್ಥಗಳು ಮತ್ತು ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವಾಗ ಅಲರ್ಜಿ ಹೊಂದಿರುವ ಜನರು ಲಸಿಕೆಯನ್ನು ತೆಗೆದುಕೊಳ್ಳಬಾರದು ಎಂದು ಆರೋಗ್ಯ ಸಚಿವಾಲಯ ಜನರಿಗೆ ಸಲಹೆ ನೀಡಿದೆ.

59

3. ಲಸಿಕೆಯನ್ನು ತೆಗೆದುಕೊಳ್ಳುವ ಮುನ್ನ ಆರೋಗ್ಯಕರ ಆಹಾರ ಸೇವಿಸಿ
ಒಂದು ಕೊವಿಡ್ ಶಾಟ್ ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ತಜ್ಞರು ನಂಬುತ್ತಾರೆ. ಇದನ್ನು ತೆಗೆದುಕೊಳ್ಳುವ ಮುನ್ನ, ದೈನಂದಿನ ಚಟುವಟಿಕೆಗಳಲ್ಲಿ ತೆಗೆದುಕೊಳ್ಳುತ್ತಿರುವ ಔಷಧೋಪಚಾರಗಳ ಬಗ್ಗೆ ವೈದ್ಯರನ್ನು ಸಂಪರ್ಕಿಸಿ. ಜೊತೆಗೆ ಉತ್ತಮ ಆಹಾರಗಳನ್ನು ಸೇವಿಸುವುದು ಮುಖ್ಯ. 

69

4. ರಕ್ತದ ಪ್ಲಾಸ್ಮಾ ಅಥವಾ ಏಕಕ್ಲೋನಲ್ ಪ್ರತಿಕಾಯಗಳು 
ಕೋವಿಡ್-19 ಸೋಂಕಿಗೆ ಒಳಗಾಗಿ ಅಥವಾ ರಕ್ತದ ಪ್ಲಾಸ್ಮಾ ಅಥವಾ ಮೋನೊಕ್ಲೋನಲ್ ಪ್ರತಿಕಾಯಗಳನ್ನು ಬಳಸಿ ಕೋವಿಡ್‌ಗೆ ಚಿಕಿತ್ಸೆ ಪಡೆದ ಜನರು ಲಸಿಕೆಯನ್ನು ತೆಗೆದುಕೊಳ್ಳಬಾರದು. 

79

 5. ಅಲರ್ಜಿಯ ಪ್ರತಿಕ್ರಿಯೆ ಪರೀಕ್ಷೆಯನ್ನು ಮಾಡಿಸಿಕೊಳ್ಳಿ
ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದರೆ, ಆರೋಗ್ಯ ರಕ್ಷಣಾ ಕಾರ್ಯಕರ್ತನಿಂದ ಮೇಲ್ವಿಚಾರಣೆ ಮಾಡಿ ಮತ್ತು ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಅಥವಾ ಅಲರ್ಜಿಗಳು ಬರುತ್ತಿಲ್ಲವೇ ಎಂದು ನೋಡಿ.   

89

6. ಅಡ್ಡ ಪರಿಣಾಮಗಳು ಉಂಟಾದಾಗ ಗಾಬರಿಯಾಗಬೇಡಿ
ಯಾವುದಾದರೂ ರೀತಿಯ ಅಲರ್ಜಿ ಪ್ರತಿಕ್ರಿಯೆ ಅಥವಾ ಅಹಿತಕರ ಅನುಭವವಾದರೆ, ನೋವು, ತುರಿಕೆ, ಜ್ವರ ಅಥವಾ ಆಯಾಸ ಮೊದಲಾಗಿ ಸೈಡ್ ಎಫೆಕ್ಟ್ ಕಂಡು ಬಂದರೆ ಗಾಬರಿಪಡಬೇಡಿ. ಲಸಿಕೆಯನ್ನು ತೆಗೆದುಕೊಂಡಾಗ ರೋಗ ನಿರೋಧಕ ವ್ಯವಸ್ಥೆಯೂ ಅದೇ ರೀತಿ ವರ್ತಿಸುತ್ತದೆ.

99

7. ಲಸಿಕೆಯ ನಂತರವೂ ಮಾಸ್ಕ್ ಧರಿಸಿ ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳಿ
ಲಸಿಕೆಯನ್ನು ಪಡೆದನಂತರ, ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಅಂದುಕೊಳ್ಳಬೇಡಿ. ಆ ನಂತರವೂ ಮಾಸ್ಕ್  ಧರಿಸುವುದನ್ನು ಮರೆಯಬೇಡಿ. ಜೊತೆಗೆ ದೈಹಿಕ ಅಂತರ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಿ. ದಿನದಲ್ಲಿ ಹಲವಾರು ಬಾರಿ ಕೈಗಳನ್ನು ತೊಳೆಯಿರಿ ಮತ್ತು ಮೇಲ್ಮೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಿ.

click me!

Recommended Stories