ಪಾರಿಜಾತವೆಂಬ ಚಮತ್ಕಾರಿ ಸಸ್ಯದಿಂದ ಸರ್ವ ರೋಗ ನಿವಾರಣೆ

Suvarna News   | Asianet News
Published : Jun 23, 2021, 07:58 PM IST

ಮಾನವ ದೇಹ ಅಥವಾ ಮನಸ್ಸು ನಗರಗಳಲ್ಲಿ ನೆಲೆಸುವ ಕನಸು ಕಂಡರೂ, ಅದಕ್ಕೆ ನಿಜವಾಗಿಯೂ ಸುತ್ತಲೂ ಎತ್ತರದ ಪರ್ವತಗಳು ಮತ್ತು ಹಸಿರು ಬೇಕು. ಹಾಗಿದ್ದರೂ, ನಾವು ಮರಗಳ ಮೂಲಕ ಹಣ್ಣುಗಳನ್ನು ಪಡೆಯುವುದಷ್ಟೇ ಅಲ್ಲ. ವಾಸ್ತವವಾಗಿ, ಮರದ ಸಸ್ಯಗಳ ಮೇಲಿನ ಎಲೆಗಳು ಆಗಾಗ್ಗೆ ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ. ಕೆಲವು ಸಸ್ಯಗಳ ಎಲೆಗಳು ರೋಗಗಳ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡುತ್ತದೆ.

PREV
111
ಪಾರಿಜಾತವೆಂಬ ಚಮತ್ಕಾರಿ ಸಸ್ಯದಿಂದ ಸರ್ವ ರೋಗ ನಿವಾರಣೆ

ಪಾರಿಜಾತ ಗಿಡದ ಉದ್ದ ಸುಮಾರು 20 ರಿಂದ 30 ಅಡಿಗಳವರೆಗೆ ಹೋಗುತ್ತದೆ. ಅದರ ಮೇಲಿನ ಬಿಳಿ ಮಲ್ಲಿಗೆ ಹೂವುಗಳು ತುಂಬಾ ಸುವಾಸನೆಯಿಂದ ಇರುತ್ತವೆ. ಈ ಮರವನ್ನು ಹೆಚ್ಚಿನ ಜನರು ಅದರ ಹೂಬಿಡುವ ಸುಗಂಧಕ್ಕಾಗಿ ಮಾತ್ರ ತಿಳಿದಿದ್ದಾರೆ. ಈ ಸಸ್ಯದ ಎಲೆಗಳು ನಿಮ್ಮನ್ನು ಅನೇಕ ರೋಗಗಳಿಂದ ಮುಕ್ತಗೊಳಿಸುತ್ತದೆ. ಅವುಗಳನ್ನು ಹೇಗೆ ಬಳಸಬೇಕು ಮತ್ತು ಯಾವ ರೋಗಗಳನ್ನು ನಿವಾರಿಸಲು ಬಳಸಬಹುದು ಎಂಬುದರ ಮಾಹಿತಿ ಇಲ್ಲಿದೆ... 

211

ಸ್ಕಿನ್ ಕೇರ್ 
ಕಾಲಾನಂತರದಲ್ಲಿ, ಜನರು  ಮೊಡವೆ ಮತ್ತು ಚರ್ಮದ ಬಿಗಿತದಂತಹ ಚರ್ಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ, ನೀವು ಬಯಸಿದರೆ ಪಾರಿಜಾತದ ಎಲೆಗಳನ್ನು ಬಳಸಬಹುದು. ಈ ಎಲೆಗಳಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳಿವೆ. ಈ ಗುಣಗಳಿಂದಲೇ ಚರ್ಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಚರ್ಮದ ಮೇಲೆ ವಯಸ್ಸಿನ ಪರಿಣಾಮವನ್ನು ಕಡಿಮೆ ಮಾಡುತ್ತದೆ.

311

ಬಳಸುವುದು ಹೇಗೆ? 
ಇದಕ್ಕಾಗಿ ಜೊಜೊಬಾ ಎಣ್ಣೆಯ ಜೊತೆಗೆ ಪಾರಿಜಾತ ಎಲೆಗಳ ರಸವನ್ನು ಬೆರೆಸಿ ಕೊಳ್ಳಬಹುದು. ನಂತರ ಇದನ್ನು  ಚರ್ಮದ ಮೇಲೆ ಹಚ್ಚಿ. ಇದು ತ್ವರತವಾಗಿ ಚರ್ಮವನ್ನು ಸುಧಾರಿಸುತ್ತದೆ.

411

ಸಂಧಿವಾತ ಪರಿಹಾರ
ಸಂಧಿವಾತದ ಸಮಸ್ಯೆಯು ಮೂಳೆಗಳು ಮತ್ತು ಕೀಲುಗಳಿಗೆ ಸಂಬಂಧಿಸಿದೆ. ಈ ಸಮಸ್ಯೆಯು ವ್ಯಕ್ತಿಯ ಕೀಲುಗಳಲ್ಲಿ ಅಸಹನೀಯ ನೋವನ್ನು ಉಂಟುಮಾಡುತ್ತದೆ. ಅದೇ ಸಮಯದಲ್ಲಿ, ದೇಹದ ಕೀಲುಗಳ ಕಾರ್ಯ ನಿರ್ವಹಣೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಈ ಪರಿಸ್ಥಿತಿಯನ್ನು ಎದುರಿಸಲು ಪಾರಿಜಾತ ಎಲೆಗಳನ್ನು ಬಳಸಬಹುದು. ಈ ಎಲೆಗಳು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಅದು ಸಂಧಿವಾತದಲ್ಲಿ ಪ್ರಯೋಜನಕಾರಿಯಾಗಬಹುದು.

511

ಬಳಕೆಯ ವಿಧಾನ ...
ಇದಕ್ಕಾಗಿ ಮೊದಲು ಪಾರಿಜಾತ ಎಲೆಗಳ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿಯಬೇಕು. ಇದರಿಂದ ಸಂಧಿವಾತದ ನೋವಿನಿಂದ ಮುಕ್ತಿ ಪಡೆಯಬಹುದು. ನೀವು ಬಯಸಿದರೆ ಪಾರಿಜಾತ ಎಲೆಯ ರಸ ಮತ್ತು ತೆಂಗಿನ ಎಣ್ಣೆ ಬೆರೆಸಿ ಕೀಲುಗಳನ್ನು ಮಸಾಜ್ ಮಾಡಬಹುದು. ಇದರಿಂದ  ನೋವು ನಿವಾರಣೆಯಾಗುತ್ತದೆ.

611

ಒಣ ಕೆಮ್ಮು ಮತ್ತು ಆಸ್ತಮಾ
ಜನರು ಹೆಚ್ಚಾಗಿ ಗಂಟಲು ನೋವು, ಕೆಮ್ಮು, ಹವಾಮಾನ ಬದಲಾವಣೆಯ ಸಮಯದಲ್ಲಿ ಶೀತ ಮುಂತಾದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಜನರು ಪಾರಿಜಾತ ಎಲೆಗಳಿಂದ ತಯಾರಿಸಿದ ಚಹಾ ಸೇವಿಸಬಹುದು. ಎಲೆಗಳ  ಔಷಧೀಯ ಗುಣಗಳು ಒಣ ಕೆಮ್ಮು ಮತ್ತು ಶೀತದಿಂದ ತಕ್ಷಣದ ಪರಿಹಾರವನ್ನು ನೀಡುತ್ತವೆ. ಜೊತೆಗೆ ಈ ಗಿಡದ ಎಲೆಗಳಲ್ಲಿ ಕಂಡುಬರುವ ಗುಣಗಳು ಅಸ್ತಮಾದಿಂದ ಬಳಲುತ್ತಿರುವ ವ್ಯಕ್ತಿಯ ಸ್ಥಿತಿಯನ್ನೂ ಉತ್ತಮಗೊಳಿಸುತ್ತವೆ.

711

ಬಳಸುವ ವಿಧಾನ 
ಇದಕ್ಕಾಗಿ ಮೊದಲು ಸ್ವಲ್ಪ ಪಾರಿಜಾತ ಎಲೆಗಳು, ಶುಂಠಿ ಮತ್ತು 2 ಕಪ್ ನೀರನ್ನು ತೆಗೆದುಕೊಳ್ಳಬೇಕು. ಸ್ವಲ್ಪ ಹೊತ್ತು ಕುದಿಸಿದ ನಂತರ ಸೋಸಿ ಸೇವಿಸಿ. ಇದರಿಂದ ಪರಿಹಾರ ದೊರೆಯುತ್ತದೆ. 

811

ಜ್ವರದಿಂದ ಪ್ಲೇಟ್‌ಲೆಟ್‌ಗಳವರೆಗೆ
ಜ್ವರದಿಂದ ಪರಿಹಾರ ಪಡೆಯಲು ನೆರವಾಗುವ ಅನೇಕ ಗುಣಗಳು ಪಾರಿಜಾತಕ್ಕಿದೆ. ಅಂದರೆ ಜ್ವರ, ಮಲೇರಿಯಾ, ಡೆಂಗ್ಯೂ ಇದ್ದರೆ ಈ ಗಿಡದ ಎಲೆಗಳನ್ನು ಬಳಸಬಹುದು. ಇಷ್ಟೇ ಅಲ್ಲ, ಇದರ ಎಲೆಗಳು ಡೆಂಗ್ಯೂ ಜ್ವರದ ಸಮಯದಲ್ಲಿ ಪ್ಲೇಟ್‌ಲೆಟ್  ಎಣಿಕೆಯನ್ನು ಹೆಚ್ಚಿಸುತ್ತವೆ. ಅಲ್ಲದೇ ಜ್ವರದ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆಯುತ್ತವೆ. ಅಲ್ಲದೆ, ಕೊರೊನಾ ವೈರಸ್ ಸೋಂಕಿಗೆ ಒಳಗಾದರೆ, ಈ ಸಸ್ಯದಿಂದ ತಯಾರಿಸಿದ ಕಷಾಯವು ಈ ವೈರಸ್ ನಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.

911

ಬಳಸುವುದು ಹೇಗೆ? 
ಇದಕ್ಕಾಗಿ ಕೇವಲ ಒಂದು ಟೀ ಚಮಚ ಪಾರಿಜಾತ ಎಲೆಗಳು ಮತ್ತು 2 ಕಪ್ ನೀರನ್ನು ತೆಗೆದುಕೊಳ್ಳಬೇಕು. ಈಗ ಅದನ್ನು ಕುದಿಯಲು ಬಿಡಿ. ನೀರು ಅರ್ಧಕ್ಕೆ ಇಳಿದಾಗ ಜ್ವರ ಬಂದಾಗ ಸೇವಿಸಿ. ಇದರಿಂದ  ತಕ್ಷಣದ ಪರಿಹಾರವು ದೊರೆತು ಬಿಡುತ್ತದೆ.

1011

ಹೊಟ್ಟೆಯ ಹುಳಕ್ಕೆ ಮದ್ದು
ಮಕ್ಕಳಿಂದ ಹಿಡಿದು ವಯಸ್ಕರವರೆಗೆ, ಅನೇಕ ಜನರು ಹೊಟ್ಟೆ ಹುಳುಗಳನ್ನು ಹೊಂದಿರುತ್ತಾರೆ. ಇದರಿಂದ ಅವರು ಇತರೆ ಸಮಸ್ಯೆಗಳನ್ನು ಸಹ ಎದುರಿಸುತ್ತಾರೆ. ಈ ಸಂದರ್ಭದಲ್ಲಿ, ಪಾರಿಜಾತ ಎಲೆಗಳನ್ನು ಬಳಸಬಹುದು. ಇದು ಯಾವುದೇ ಹೊಟ್ಟೆಗೆ ಸಂಬಂಧಿಸಿದ ರೋಗವನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾದ ಡಯಾಫೋರ್ಟಿಕ್ ಮತ್ತು ಡ್ಯೂರಾಟಿಕ್ ಗುಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಹೊಟ್ಟೆ ಹುಳುಗಳನ್ನು ನಿವಾರಿಸಲು ಈ ಎಲೆಗಳನ್ನು ಬಳಸಬಹುದು. 

1111

ಬಳಕೆಯ ವಿಧಾನಗಳು :
ಇದಕ್ಕಾಗಿ ನೀವು ಕೇವಲ ಪಾರಿಜಾತ ಎಲೆಯ ರಸ ಮತ್ತು ಒಂದು ಗ್ರಾಂ ಕಾಳುಮೆಣಸಿನ ಪುಡಿ ಮಾತ್ರ ಮಿಶ್ರಣ ಮಾಡಬೇಕು. ಇದನ್ನು ಕೆಲವು ದಿನಗಳ ಕಾಲ ನಿಯಮಿತವಾಗಿ ಕುಡಿಯಿರಿ. ಈ ಮೂಲಕ,  ಶೀಘ್ರದಲ್ಲೇ ಫಲಿತಾಂಶಗಳನ್ನು ನೋಡುತ್ತೀರಿ.

click me!

Recommended Stories