ದಾಲ್ಚಿನ್ನಿ ಕಾಫಿ ಮಾಡುವುದು ಹೇಗೆ?
ದಾಲ್ಚಿನ್ನಿ ಕಾಫಿ ಮಾಡಲು, ಮೊದಲು ದಾಲ್ಚಿನ್ನಿ ನೀರು ಮಾಡಿ. ಆಮೇಲೆ ಆ ನೀರಿಗೆ ಕಾಫಿ ಪುಡಿ, ಸ್ವಲ್ಪ ಸಕ್ಕರೆ ಹಾಕಿ ಕಲಸಿ. ಈ ರೀತಿ ರೆಡಿಮೇಡ್ ಕಾಫಿ ಮಾಡಬಹುದು. ಕುಡಿದ ಮೇಲೆ ಅರ್ಧ ಗಂಟೆ ಏನೂ ತಿನ್ನಬಾರದು.
ದಾಲ್ಚಿನ್ನಿ ಪ್ರಯೋಜನಗಳು
ದಾಲ್ಚಿನ್ನಿ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಜಿಂಕ್, ವಿಟಮಿನ್‌ಗಳು, ನಿಯಾಸಿನ್, ಥಯಾಮಿನ್, ಲೈಕೋಪೀನ್, ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣ, ರಂಜಕ, ಮ್ಯಾಂಗನೀಸ್, ತಾಮ್ರ, ಕಾರ್ಬೋಹೈಡ್ರೇಟ್‌ಗಳು ಇವೆ. ಇದಲ್ಲದೆ, ದಾಲ್ಚಿನ್ನಿಯಲ್ಲಿ ಆಂಟಿಆಕ್ಸಿಡೆಂಟ್, ಆಂಟಿ ಬ್ಯಾಕ್ಟೀರಿಯಲ್, ಆಂಟಿ ಫಂಗಲ್ ಗುಣಗಳಿವೆ. ತೂಕ, ಮಧುಮೇಹ, ಹೈ ಬಿಪಿಗೆ ದಾಲ್ಚಿನ್ನಿ ಒಳ್ಳೆಯದು. ಇದರಲ್ಲಿರೋ ಫೈಬರ್ ತೂಕ ಹೆಚ್ಚೋದನ್ನ ಕಡಿಮೆ ಮಾಡುತ್ತೆ.