ಯಾವ ವಿಟಾಮಿನ್‌ಗಳ ಕೊರತೆಯಿಂದ ಬಿಳಿ ಕೂದಲಿನ ಸಮಸ್ಯೆ ಕಾಡುತ್ತೆ ನೋಡಿ
ವಿಟಮಿನ್ ಬಿ12 (Vitamin B12)
ವಿಟಾಮಿನ್ ಬಿ12 ಶರೀರದಲ್ಲಿ ರಕ್ತಕೋಶಗಳ ನಿರ್ಮಾಣ ಮತ್ತು ಅದರ ಸರಿಯಾದ ಸಂಚಾರಕ್ಕೆ ಅಗತ್ಯವಿರುವ ಪ್ರಮುಖ ವಿಟಮಿನ್ ಆಗಿದೆ. ಇದರ ಕೊರತೆಯಿಂದ ಅನಿಮಿಯಾ ಉಂಟಾಗಬಹುದು, ಇದರ ಕೊರತೆ ಕೂದಲು ಬಿಳಿಯಾಗಲು ಸಹ ಕಾರಣವಾಗುತ್ತದೆ. ಈ ಸಮಸ್ಯೆ ಇದ್ದಲ್ಲಿ ರಕ್ತವು ಸಾಕಷ್ಟು ಪ್ರಮಾಣದಲ್ಲಿ ತಲೆಗೆ ತಲುಪುವುದಿಲ್ಲ, ಇದರಿಂದ ಕೂದಲು ಬಿಳಿಯಾಗುತ್ತೆ. ವಿಟಮಿನ್ ಬಿ12 ಕೊರತೆಯನ್ನು ನಿವಾರಿಸಲು ಮಾಂಸ, ಮೀನು, ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು.