Health Tips: ದ್ರಾಕ್ಷಿ ಮಾತ್ರವಲ್ಲ, ಅದರ ಎಲೆಯಿಂದಲೂ ಇದೆ ಪ್ರಯೋಜನ!

First Published | Mar 6, 2023, 7:00 AM IST

ದ್ರಾಕ್ಷಿಹಣ್ಣು ಹೆಚ್ಚಿನ ಜನರು ಇಷ್ಟಪಡುವ ಹಣ್ಣು. ಅದನ್ನು ತಿನ್ನೋದ್ರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೀವು ಕೇಳಿದ್ದೀರಿ. ಆದರೆ ದ್ರಾಕ್ಷಿ ಎಲೆಗಳ ಪ್ರಯೋಜನಗಳ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ನಮ್ಮಲ್ಲಿ ಹೆಚ್ಚಿನವರು ಇದನ್ನು ಆಹಾರದಲ್ಲಿ ವಿರಳವಾಗಿ ಬಳಸುತ್ತಾರೆ. ಅವುಗಳ ಪ್ರಯೋಜನಗಳ ಬಗ್ಗೆ ತಿಳಿದರೆ ನೀವು ಇವತ್ತೇ ಅದನ್ನ ಬಳಸೋದಿಕ್ಕೆ ಸ್ಟಾರ್ಟ್ ಮಾಡ್ತೀರಾ!  
 

ನಾವು ಹುಳಿ-ಸಿಹಿ ದ್ರಾಕ್ಷಿಯನ್ನು ತಿನ್ನುತ್ತೇವೆ ಮತ್ತು ಅದರ ಬೀಜ, ಕಾಂಡ ಮತ್ತು ಎಲೆಗಳನ್ನು ತಿನ್ನುವ ಬಗ್ಗೆ ಯೋಚನೇನೆ ಮಾಡಲ್ಲ. ಆದರೆ ದ್ರಾಕ್ಷಿ ಎಲೆಗಳು (grapes leaves) ಸಹ ಹೆಚ್ಚಿನ ಉಪಯೋಗಕ್ಕೆ ಬರುತ್ತವೆ ಎಂದು ನಿಮಗೆ ತಿಳಿದಿದ್ಯಾ. ದ್ರಾಕ್ಷಿಯ ಆರೋಗ್ಯ ಪ್ರಯೋಜನಗಳಿಗಿಂತ ಅದರ ಎಲೆಗಳು ಹೆಚ್ಚಿನ ಗುಣಲಕ್ಷಣಗಳನ್ನು ಹೊಂದಿವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ದ್ರಾಕ್ಷಿ ಎಲೆಗಳನ್ನು ಗ್ರೀಕ್, ಟರ್ಕಿಶ್, ವಿಯೆಟ್ನಾಮೀಸ್ ಮತ್ತು ರೊಮೇನಿಯನ್ ಪಾಕಪದ್ಧತಿಯಲ್ಲಿ ಬಳಸಲಾಗುತ್ತೆ . ಆದರೆ, ಅವುಗಳ ಬಳಕೆ ಭಾರತದಲ್ಲಿ ವಿರಳವಾಗಿ ಕಂಡುಬಂದಿದೆ.
 

ದ್ರಾಕ್ಷಿ ಎಲೆಗಳನ್ನು ಗ್ರೀನ್ ಲೀಫ್ ವೆಜಿಟೇಬಲ್ಸ್ (green leaf vegetables) ಎಂದು ಪರಿಗಣಿಸಲಾಗುತ್ತೆ. ಅವುಗಳು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತವೆ ಮತ್ತು ಈ ಎಲೆಗಳು ಪೋಷಕಾಂಶಗಳಿಂದ ಕೂಡಿರುತ್ತವೆ. ಆದ್ದರಿಂದ ದ್ರಾಕ್ಷಿ ಎಲೆಗಳು ನಮಗೆ ಹೇಗೆ ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯೋಣ.

Tap to resize

ಫೈಬರ್ (fiber)
ದ್ರಾಕ್ಷಿ ಎಲೆಗಳಲ್ಲಿ ಗಣನೀಯ ಪ್ರಮಾಣದ ಫೈಬರ್ ಇದೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತೆ, ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತೆ. ಅವು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತವೆ, ಆದ್ದರಿಂದ ಸಕ್ಕರೆಯು ರಕ್ತದಲ್ಲಿ ನಿಧಾನವಾಗಿ ಬಿಡುಗಡೆಯಾಗುತ್ತೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಕೆಲಸ ಮಾಡೋದಿಲ್ಲ.
 

ವಿಟಮಿನ್-ಎ (Vitamin A)
ದ್ರಾಕ್ಷಿ ಎಲೆಗಳು ದೇಹದಲ್ಲಿ ವಿಟಮಿನ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ಉತ್ತಮ ಪ್ರಮಾಣದ ವಿಟಮಿನ್-ಎ ಹೊಂದಿದೆ. ವಿಟಮಿನ್-ಎ ಜೀವಕೋಶಗಳು ಬೆಳೆಯಲು ಸಹಾಯ ಮಾಡುತ್ತೆ. ನಿಮ್ಮ ಮೂಳೆಗಳು, ಚರ್ಮ, ಜೀರ್ಣಾಂಗ ವ್ಯವಸ್ಥೆ ಮತ್ತು ದೃಷ್ಟಿ ವ್ಯವಸ್ಥೆ ಎಲ್ಲವೂ ಕಾರ್ಯನಿರ್ವಹಿಸಲು ವಿಟಮಿನ್-ಎ ಮೇಲೆ ಅವಲಂಬಿತವಾಗಿರುತ್ತೆ.

ವಿಟಮಿನ್-ಕೆ (Vitamin K)
ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸಲು ವಿಟಮಿನ್-ಕೆ ಸಹಾಯ ಮಾಡುತ್ತೆ. ನಿಮ್ಮ ದೇಹದಲ್ಲಿ ವಿಟಮಿನ್ ಗಳ ಮಟ್ಟವು ಉತ್ತಮವಾಗಿದ್ದರೆ, ಗಾಯವಾದಾಗ ಅದು ರಕ್ತ ಹೆಪ್ಪುಗಟ್ಟುವಿಕೆಯನ್ನು ಸೃಷ್ಟಿಸುತ್ತೆ, ಇದರಿಂದಾಗಿ ಈ ಹೆಪ್ಪುಗಟ್ಟುವಿಕೆಯ ಸಹಾಯದಿಂದ, ರಕ್ತಸ್ರಾವವು ನಿಲ್ಲುತ್ತೆ ಮತ್ತು ರಕ್ತದ ಕೊರತೆಯಿರೋದಿಲ್ಲ.

ಕ್ಯಾಲ್ಸಿಯಂ (Calcium)
ದ್ರಾಕ್ಷಿ ಎಲೆಗಳು ನಿಮಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣ ಎಂಬ ಎರಡು ಖನಿಜಗಳನ್ನು ಸಹ ನೀಡುತ್ತವೆ.  ದೇಹಕ್ಕೆ ಕ್ಯಾಲ್ಸಿಯಂ ಬೇಕು, ಇದರಿಂದ ಮೂಳೆಗಳು ಮತ್ತು ಹಲ್ಲುಗಳು ಬಲಗೊಳ್ಳುತ್ತವೆ.ಹಾಗಾಗಿ ನಿಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಸೇರಿಸೋದನ್ನು ಮರೆಯಬೇಡಿ.

ಕಬ್ಬಿಣ (iron)
ದ್ರಾಕ್ಷಿ ಎಲೆಗಳು ಕಬ್ಬಿಣದಿಂದ ಕೂಡಿವೆ. ಕಬ್ಬಿಣವು ದೇಹದಲ್ಲಿ ರಕ್ತ ನಷ್ಟವನ್ನು ತಡೆಯುವ ಖನಿಜವಾಗಿದೆ. ಇದು ನಿಮ್ಮನ್ನು ರಕ್ತಹೀನತೆಯಿಂದ ತಡೆಯುತ್ತೆ. ಅಲ್ಲದೆ, ಈ ಖನಿಜವು ನಿಮ್ಮ ರಕ್ತವು  ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತೆ.

ಆ್ಯಂಟಿ-ಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದೆ (anti oxidant)
ದ್ರಾಕ್ಷಿ ಎಲೆಗಳು ದ್ರಾಕ್ಷಿಹಣ್ಣು ಅಥವಾ ಅದರ ರಸಕ್ಕಿಂತ ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ದೇಹಾವನ್ನು ರೋಗಗಳಿಂದ ಕಾಪಾಡಲು ಸಹಾಯ ಮಾಡುತ್ತೆ. ಆದರಿಂದ ಇವತ್ತಿನಿಂದಲೇ ದ್ರಾಕ್ಷಿ ಎಲೆಗಳನ್ನು ಬಳಸಲು ಆರಂಭಿಸಿ.  

Latest Videos

click me!