ಮಳೆ ಬಂದಿದೆ, ಎಲ್ಲೆಡೆ ಹಲಸಿನ ಹಣ್ಣು ಲಭ್ಯ, ಸಿಕ್ಕಿದರೆ ಬಿಡಬೇಡಿ...

First Published May 17, 2021, 6:24 PM IST

ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ? ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರಾವಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೇ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರೊಟೀನ್, ವಿಟಮಿನ್ ಎ, ಸಿ ಮತ್ತು ಪೊಟಾಷಿಯಂ ಇದರಲ್ಲಿದ್ದು, ಅದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶ, ಅಧಿಕ ನಾರಿನಾಂಶ ಇರುವುದರಿಂದ ಡಯಾಬಿಟಿಸ್ ರೋಗಿಗಳಿಗೆ ಉತ್ತಮ.
undefined
ಚಿಕಾಗೊದಲ್ಲಿ ನಡೆದ ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್ ವಾರ್ಷಿಕ ಸಭೆಯಲ್ಲಿ ಹಲಸಿನ ಕಾಯಿ ಮತ್ತು ಹಣ್ಣನ್ನು ನಿಗದಿತ ಪ್ರಮಾಣದಲ್ಲಿ ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್‌ನವರಿಗೆ ಗ್ಲಿಸಮಿಕ್ ನಿಯಂತ್ರಣವಾಗುತ್ತದೆ ಎಂದು ತಿಳಿದುಬಂದಿದೆ.
undefined
ಹಲಸಿನ ಕಾಯಿಯನ್ನು ಅನ್ನದ ಜೊತೆ, ದೋಸೆ, ಇಡ್ಲಿ, ಉಪ್ಮಾಗಳಲ್ಲಿ ಹಿಟ್ಟಿನ ರೂಪದಲ್ಲಿ ಸೇವಿಸುತ್ತಾರೆ. ಈ ಅಧ್ಯಯನವನ್ನು ನಡೆಸಿದವರು ಜೇಮ್ಸ್ ಜೊಸೆಫ್ ಎನ್ನುವವರು. ಅನ್ನ ಮತ್ತು ಗೋಧಿ ಹಿಟ್ಟಿನ ಬದಲಿಗೆ ಹಲಸಿನ ಕಾಯಿಯನ್ನು ಸೇವಿಸಬಹುದು. ಹಲಸಿನ ಕಾಯಿ ತೊಳೆಯನ್ನು ಹಿಟ್ಟಿನ ರೂಪ ಮಾಡಲಾಗುತ್ತದೆ. ಕಾರ್ಬೊಹೈಡ್ರೇಟ್ ಗಳನ್ನು ಕಡಿಮೆ ಮಾಡಬಹುದು.ಕ್ಯಾಲರಿಗಳನ್ನು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಸಹ ನೆರವಾಗುತ್ತದೆ.
undefined
ಪೂರ್ವ-ಮಧುಮೇಹ ಅಥವಾ ಮಧುಮೇಹ ರೋಗಿಯು ವೈದ್ಯರ ಚಿಕಿತ್ಸಾಲಯಕ್ಕೆ ಬಂದಾಗ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ವೈದ್ಯಕೀಯ ಪೌಷ್ಠಿಕ ಚಿಕಿತ್ಸೆಯನ್ನು ಅವರಿಗೆ ಸೂಚಿಸಲಾಗುತ್ತದೆ.
undefined
ಹಲಸು ಸೇವನೆ ಇದಕ್ಕೆ ಸ್ಥಳೀಯ ಪರಿಹಾರವಾಗಿದೆ. ಇದು ಅಧ್ಯಯನದಲ್ಲಿ ಪ್ರಾಯೋಗಿಕವಾಗಿ ಸಾಬೀತಾಗಿದೆ. ಸ್ಥಳೀಯ ಮಟ್ಟದಲ್ಲಿ ಇದನ್ನು ಪ್ರಚಾರ ಮಾಡಬೇಕಾಗಿದೆ ಎಂದು ಜೇಮ್ಸ್ ಹೇಳುತ್ತಾರೆ.
undefined
ಹಲಸಿನಲ್ಲಿರುವ ಹೆಚ್ಚಿನ ಫೈಬರ್ ಅಂಶ ಮತ್ತು ಕಡಿಮೆ ಗ್ಲೈಸೆಮಿಕ್ ಮಧುಮೇಹ ರೋಗಿಗಳಿಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ಮತ್ತು ಬೊಜ್ಜು ರೋಗಿಗಳಿಗೂ ಸಹ ಉತ್ತಮ.
undefined
ಹಲಸಿನ ಕಾಯಿ ಇತ್ತೀಚೆಗೆ ಹೊರದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಸೆರ್ಬಿಯಾ ಮೂಲದ ಆಹಾರ ಸಲಹೆಗಾರ ಸಿಮಿ ಮ್ಯಾಥ್ಯು ಹಲಸಿನ ಹಿಟ್ಟಿನಲ್ಲಿರುವ ಆರೋಗ್ಯ ಅಂಶವನ್ನು ಹೇಳುತ್ತಾರೆ.
undefined
ಹಲವುವರ್ಷಗಳ ಹಿಂದೆ, ನಾನು ಪ್ರಾದೇಶಿಕ ಚಾನೆಲ್‌ನಲ್ಲಿ ಅಡುಗೆ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದೆ. ಕಾರ್ಯಕ್ರಮದ ಬಾಣಸಿಗರು ಹಲಸಿನ ಪ್ರಯೋಜನಗಳ ಬಗ್ಗೆ ಮಾತನಾಡಿದರು ಮತ್ತು ಹಿಟ್ಟನ್ನು ಬೇಕಿಂಗ್‌ಗೆಬಳಸಬಹುದೆಂದು ಪ್ರಸ್ತಾಪಿಸಿದರು.
undefined
ಆದ್ದರಿಂದ ನನ್ನ ತಾಯಿ ಹಲಸಿನ ಕಾಯಿಯನ್ನು ಒಣಗಿಸಿ ಹಿಟ್ಟು ತಯಾರಿಸುತ್ತಾರೆ. ನಾನು ಈಗ ಅದನ್ನು ಪ್ಯಾನ್‌ ಕೇಕ್, ಕುಕೀಗಳಲ್ಲಿ ಮತ್ತು ಪುಟ್ಟು ತಯಾರಿಸಲು ಸಹ ಬಳಸುತ್ತೇನೆ ಎಂದು ಸಿಮಿ ಹೇಳುತ್ತಾರೆ.
undefined
ಆದರೆ ಭಾರತದಲ್ಲಿ ಇದನ್ನು ಕಡೆಗಣಿಸುತ್ತಾರೆ ಎನ್ನುತ್ತಾರೆ ಪೌಷ್ಟಿಕಾಂಶ ತಜ್ಞೆ ಮತ್ತು ಆಹಾರ ತಂತ್ರಜ್ಞೆ ಜೆಫ್ರಿಯಾ ಜೊಬಿ. ಜೊ ಫಿಟ್ ನೆಸ್ ಸ್ಥಾಪಕರಾಗಿರುವ ಇವರು ಔಷಧಿ ಜೊತೆ ಹೋಲಿಕೆ ಮಾಡಬಹುದಾದ ಹಲಸನ್ನು ಪೌಷ್ಟಿಕಾಂಶವಾಗಿ, ವಿಟಮಿನ್ ಸಿ ಸೇವನೆಗೆ, ದೇಹದಲ್ಲಿ ಶಕ್ತಿ ಬಲವರ್ಧನೆಗೆ, ಕ್ಯಾನ್ಸರ್ ಗುಣಕಾರಿಯಾಗಿಯೂ ಬಳಸಬಹುದು. ಇದರ ಬಳಕೆ ಸರಿಯಾಗಿ ಆಗುತ್ತಿಲ್ಲ ಎನ್ನುತ್ತಾರೆ.
undefined
click me!